ನವದೆಹಲಿ:ಹಿರಿಯ ನಾಗರಿಕರಿಗೆ ಉಚಿತವಾಗಿ ಅಯೋಧ್ಯೆ ತೀರ್ಥಯಾತ್ರೆಯ ಸೌಲಭ್ಯವನ್ನು ಒದಗಿಸಲು ದೆಹಲಿ ಸರ್ಕಾರ ಮುಂದಾಗಿದೆ.
ಈ ಕುರಿತು ಇಂದು ವಿಧಾನಸಭೆಯಲ್ಲಿ ತಿಳಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನಮ್ಮ ಸರ್ಕಾರ ಹಿರಿಯ ನಾಗರಿಕರನ್ನು ಅತ್ಯಂತ ಗೌರವದಿಂದ ಕಾಣುತ್ತದೆ ಹಾಗೂ ರಾಮ ರಾಜ್ಯ ನಮ್ಮ ಕನಸಾಗಿದೆ. ಈ ದಿಸೆಯಲ್ಲಿ ದೆಹಲಿಯ ಹಿರಿಯ ನಾಗರಿಕರು ಅಯೋಧ್ಯೆ ತೀರ್ಥಯಾತ್ರೆಯನ್ನು ಕೈಗೊಳ್ಳಲು ನೆರವು ನೀಡುವ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.
ನನಗೆ ಭಗವಾನ್ ರಾಮ, ಆಂಜನೇಯನಲ್ಲಿ ನಂಬಿಕೆ ಇದೆ. ರಾಮರಾಜ್ಯದಲ್ಲೂ ನಂಬಿಕೆ ಇದೆ. ಅದನ್ನೂ ಸಾಧಿಸುವುದೇ ನಮ್ಮ ಗುರಿಯಾಗಿದೆ. ರಾಮರಾಜ್ಯ ಸಾಧಿಸಬೇಕಾದರೆ ಹತ್ತು ಗುರಿಗಳನ್ನು ಹಾಕಿಕೊಳ್ಳಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಊಟ ಡೆಲಿವರಿ ಲೇಟಾಗಿದ್ದಕ್ಕೆ ಮುಖಕ್ಕೆ ಪಂಚ್​ ಹೊಡೆಸಿಕೊಂಡ ಯುವತಿ! ಇನ್​​ಫ್ಲೂಯೆನ್ಸರ್​ ಕಥೆ ಕೇಳೋರ್ಯಾರು?
ಯಾರೂ ಹಸಿವಿನಿಂದ ಬಳಲಬಾರದು, ಪ್ರತಿಯೊಬ್ಬ ಮಗುವಿಗೂ ಉತ್ತಮ ಶಿಕ್ಷಣ, ಎಲ್ಲರಿಗೂ ಜಾಗತಿಕ ಮಟ್ಟದ ವೈದ್ಯಕೀಯ ಸೇವೆ, ಸ್ವಚ್ಚ ನೀರು, ಕರೆಂಟ್, ಮನೆ, ಹಿರಿಯರಿಗೆ ಗೌರವ, ಮಹಿಳಾ ಸುರಕ್ಷತೆ, ಸಮಾನತೆ, ಅಪರಾಧ ಮುಕ್ತ ಸಮಾಜ ಇವೇ ಆ ಹತ್ತು ರಾಮರಾಜ್ಯದ ತತ್ವಗಳು. ಇವುಗಳನ್ನು ಸಾಧಿಸುವುದೇ ನಮ್ಮ ಗುರಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಕೇರಳ ಚುನಾವಣೆಗೆ ಮುನ್ನವೇ ಕೈ ಕೊಟ್ಟ ಕಾಂಗ್ರೆಸ್​ ನಾಯಕ! ಪಕ್ಷದಲ್ಲಿ ಪ್ರಜಾಪ್ರಭುತ್ವ ಸತ್ತಿದೆ ಎಂದು ಆರೋಪ

ಇದೆಂಥ ಹೊಸ ಅವತಾರನಪ್ಪ! ಬಲೂನು ಬಿಟ್ಟು ಭಾರತವನ್ನು ಹೆದರಿಸಲು ನೋಡ್ತಿದೆಯೇ ಪಾಕ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
