ನವದೆಹಲಿ:2024ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದರೆ ಹತ್ತು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಘರ್ಷಣೆ: ಪೊಲೀಸ್ ಅಧಿಕಾರಿ ಸಾವು, 90 ಜನರಿಗೆ ಗಾಯ!
“ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾನಿಂದು 10 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇನೆ. ನನ್ನ ಬಂಧನದಿಂದಾಗಿ ಘೋಷಣೆ ಮಾಡುವುದು ವಿಳಂಬವಾಯಿತು. ಆದರೂ, ದೇಶದಲ್ಲಿ ಇನ್ನೂ ಹಲವು ಹಂತಗಳ ಮತದಾನ ಬಾಕಿ ಇದೆ. ಹಾಗಂತ, ಇಂಡಿಯಾ ಒಕ್ಕೂಟದ ಪಕ್ಷಗಳ ಜತೆ ಚರ್ಚಿಸಿ ಗ್ಯಾರಂಟಿಗಳನ್ನು ಘೋಷಣೆ ಮಾಡಿಲ್ಲ. ಇದರಿಂದ ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ಭಾವಿಸಿದ್ದೇನೆ. ಇಂಡಿಯಾ ಒಕ್ಕೂಟವು ದೇಶದಲ್ಲಿ ಅಧಿಕಾರಕ್ಕೆ ಬಂದರೆ ಈ 10 ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು” ಎಂದು ಹೇಳಿದರು.
इस लोकसभा चुनाव के लिए केजरीवाल की 10 गारंटी। Important Press Conference | LIVEhttps://t.co/0HWubvSrOS
— AAP (@AamAadmiParty)May 12, 2024

ಉಚಿತ ವಿದ್ಯುತ್‌, ಉಚಿತ ಆರೋಗ್ಯ ಸೇವೆ ಸೇರಿದಂತೆ ಹತ್ತು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ಬಿಜೆಪಿ ಯಾವಾಗಲೂ ತನ್ನ ಭರವಸೆಗಳಲ್ಲಿ ವಿಫಲವಾಗಿದೆ. ನನ್ನ ಭರವಸೆಗಳು ದಾಖಲೆಯನ್ನು ಸಾಬೀತುಪಡಿಸಿವೆ. ‘ಕೇಜ್ರಿವಾಲ್ ಕಿ ಗ್ಯಾರಂಟಿ’ ಅಥವಾ ‘ಮೋದಿ ಗ್ಯಾರಂಟಿ’ ಯಾವುದು ಬೇಕು ಎಂದು ಜನತೆಗೆ ಕೇಜ್ರಿವಾಲ್‌ ಕೇಳಿದ್ದಾರೆ.
देश की जनता के लिए,केजरीवाल की 10 गारंटी 🇮🇳👇pic.twitter.com/ChkVSr98vf
— AAP (@AamAadmiParty)May 12, 2024

ಕೇಜ್ರಿವಾಲ್‌ ಘೋಷಿಸಿದ ಪ್ರಮುಖ ಗ್ಯಾರಂಟಿಗಳು
1. ದೇಶಾದ್ಯಂತ 24 ಗಂಟೆ ವಿದ್ಯುತ್‌ ಪೂರೈಸುವುದು. ಇದರಿಂದ ಬಡವರಿಗೆ, ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವುದು.2. ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸಿ, ಸೇನೆಯನ್ನು ಇನ್ನಷ್ಟು ಬಲಪಡಿಸುವುದು3. ದೇಶಾದ್ಯಂತ ಮೊಹಲ್ಲಾ ಕ್ಲಿನಿಕ್‌ಗಳನ್ನು ಸ್ಥಾಪಿಸಿ, ಉಚಿತವಾಗಿ ಚಿಕಿತ್ಸೆ ನೀಡಲಾಗುವುದು.4. ಚೀನಾದ ಹಿಡಿತದಲ್ಲಿರುವ ಭಾರತದ ಜಾಗವನ್ನು ವಾಪಸ್‌ ಪಡೆಯುವುದು.5. ಕೇಂದ್ರ ಹಾಗೂ ರಾಜ್ಯಗಳ ಸಹಕಾರದೊಂದಿಗೆ 5 ಲಕ್ಷ ಕೋಟಿ ರೂ. ವೆಚ್ಚದಲ್ಲಿ ದೇಶಾದ್ಯಂತ ಶಾಲೆ ನಿರ್ಮಿಸಿ, ಬಡವರಿಗೆ ಶಿಕ್ಷಣ ನೀಡುವುದು6. ದೆಹಲಿಗೆ ರಾಜ್ಯ ಸ್ಥಾನಮಾನ ನೀಡುವ ಮೂಲಕ ಏಳಿಗೆಗೆ ಇನ್ನಷ್ಟು ಶ್ರಮಿಸುವುದು7. ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಖಾತರಿ ನೀಡುವುದು8. ನಿರುದ್ಯೋಗ9. ಭ್ರಷ್ಟಾಚಾರವನ್ನು ಕೊನೆಗೊಳಿಸುವುದು10. ಉದ್ಯಮಿಗಳಿಗಾಗಿ ಜಿಎಸ್‌ಟಿಯನ್ನು ಸರಳೀಕರಿಸಲಾಗುವುದು.
ಎಎಪಿ ಶಾಸಕರ ಸಭೆ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರೊಂದಿಗೆ ಸಭೆ ನಡೆಸಿದರು. ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿದ ಅವರು ತಿಹಾರ್ ಜೈಲಿನಿಂದ ಹೊರ ಬಂದ ನಂತರ ಶಾಸಕರೊಂದಿಗಿನ ಅವರ ಮೊದಲ ಸಭೆ ಇದಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 3 =
Remember me
