ನವದೆಹಲಿ:ಲೋಕಸಭೆ ಚುನಾವಣೆ ಸಂಪೂರ್ಣವಾಗಿ ಅಂತ್ಯವಾಗಿದ್ದು, ಎಲೆಕ್ಷನ್ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್​ನಿಂದ ಮಧ್ಯಂತರ ಜಾಮೀನು ಪಡೆದು 21 ದಿನಗಳ ಕಾಲ ಹೊರಬಂದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇಂದು ಸಂಜೆ ತಿಹಾರ್ ಜೈಲಿಗೆ ಹಿಂತಿರುಗುವ ಮೂಲಕ ನ್ಯಾಯಾಲಯದ ಆದೇಶವನ್ನು ಪಾಲಿಸಿದ್ದಾರೆ.
ಇದನ್ನೂ ಓದಿ:ವಿಧಾನ ಪರಿಷತ್‌ಗೆ ಕೈ ಅಭ್ಯರ್ಥಿಗಳು; ಕಲ್ಯಾಣ ಕರ್ನಾಟಕಕ್ಕೆ ಸಿಂಹ ಪಾಲು; ಖರ್ಗೆ, ಸಿಎಂ ಪಟ್ಟಿಗೆ ಹೆಚ್ಚು ಆದ್ಯತೆ; ಇಬ್ಬರಿಗೆ ಪುನರಾಯ್ಕೆ
ಇಂದು ಮಧ್ಯಾಹ್ನ 3 ಗಂಟೆಗೆ ಮನೆಯಿಂದ ಹೊರಟು ತಿಹಾರ್ ಜೈಲಿಗೆ ಶರಣಾಗುವೆ ಎಂದಿದ್ದ ಕೇಜ್ರಿವಾಲ್, ತಮ್ಮ ಮಾತಿಗೆ ತಕ್ಕಂತೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತಮ್ಮ ಪೋಷಕರ ಆರ್ಶಿವಾದ ಪಡೆದು ನಿವಾಸದಿಂದ ಹೊರಟರು. ಮೊದಲು ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಲು ರಾಜ್‌ಘಾಟ್‌ಗೆ ತೆರಳಿದರು. ಇದರ ಬೆನ್ನಲ್ಲೇ ಹನುಮಾನ್ ಮಂದಿರಕ್ಕೆ ಭೇಟಿ ಕೊಟ್ಟು, ಬಳಿಕ ಪಕ್ಷದ ಪ್ರಧಾನ ಕಚೇರಿಗೆ ತಲುಪಿದ ಸಿಎಂ, ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ನಾಯಕರೊಂದಿಗೆ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು.
“ಚುನಾವಣೆಯ ಸಲುವಾಗಿ 21 ದಿನಗಳ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್​ಗೆ​ ನನ್ನ ಹೃತ್ಪೂರ್ವಕ ಧನ್ಯವಾದಗಳು. ಜೈಲಿನಿಂದ ಹೊರಬಂದ ಮೊದಲ ದಿನದಿಂದ ಇಂದಿನವರೆಗೂ ಒಂದು ನಿಮಿಷ ಕೂಡ ವ್ಯರ್ಥ ಮಾಡಿಲ್ಲ. ಪಕ್ಷದ ಎಲ್ಲಾ ಕೆಲಸಗಳು ಮತ್ತು ಪ್ರಚಾರ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೆ. ಈ ಪ್ರಚಾರ ದೇಶ ಉಳಿಸಲು. ನನಗೆ ದೇಶ ಮೊದಲು, ಆನಂತರ ಆಮ್ ಆದ್ಮಿ ಪಕ್ಷ. ಇಷ್ಟು ದಿನ ನಿಮ್ಮೊಂದಿಗೆ ಇದ್ದಿದ್ದು ಮರೆಯಲಾಗದ ಸಂಗತಿ” ಎಂದಿದ್ದಾರೆ.
ದಯವಿಟ್ಟು ಈ ಸಮಯದಲ್ಲಿ ಫುಡ್​ ಆರ್ಡರ್​ ಮಾಡೋದನ್ನು ಆದಷ್ಟು ನಿಲ್ಲಿಸಿ: ಗ್ರಾಹಕರಲ್ಲಿ ಝೊಮ್ಯಾಟೋ ಸಂಸ್ಥೆ ಮನವಿ

ಡಕ್​ಔಟ್​ ಆಗಿದ್ದಕ್ಕೆ ಹಿಗ್ಗಾಮುಗ್ಗಾ ಟ್ರೋಲ್​ ಮಾಡ್ತೀರಾ! ಇವರ ಅಸಲಿ ಬ್ಯಾಟಿಂಗ್ ನೋಡಿದ್ರೆ ಕಳೆದೋಗ್ತಿರಾ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:11 − 9 =
Remember me
