ನವದೆಹಲಿ: ಅತ್ತ ಪಾಕಿಸ್ತಾನ-ಚೀನಾ ಜತೆಯಾಗಿ ದಾಳಿ ಮಾಡಿದರೂ ಎದುರಿಸಲು ಸಿದ್ಧ ಎಂದು ಭಾರತೀಯ ಸೇನೆ ಹೇಳಿದ ಬೆನ್ನಿಗೇ ಇತ್ತ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಕೂಡ ಯುದ್ಧ ಸಾರಿದ್ದಾರೆ. ಹಾಗಂತ ಇದು ಗುಂಡು-ಫಿರಂಗಿಗಳ ಸಹಿತ ಯುದ್ಧವಲ್ಲ, ಇದಕ್ಕೆ ಮೊಬೈಲ್​ಫೋನ್​ ತಂತ್ರಾಂಶವೇ ಆಯುಧ!
ಅಂದಹಾಗೆ ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿ ಯುದ್ಧ ಸಾರಿರುವುದು ಪರಿಸರ ಮಾಲಿನ್ಯದ ಯುದ್ಧ. ‘ಯುದ್ಧ್ ಪ್ರದೂಷಣ್​ ಕೆ ವಿರುದ್ಧ್​’ ಎಂಬ ಘೋಷವಾಕ್ಯದೊಂದಿಗೆ ಮಾಲಿನ್ಯ ತಡೆಗೆ ಮುಂದಾಗಿರುವ ಕೇಜ್ರಿವಾಲ್​, ಅದಕ್ಕೆಂದೇ ‘ಗ್ರೀನ್​ ದೆಹಲಿ’ ಆ್ಯಪ್​ ರೂಪಿಸಿದ್ದಾರೆ.
ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇಂಥದ್ದೊಂದು ಹೋರಾಟಕ್ಕೆ ಸೋಮವಾರ ಚಾಲನೆ ನೀಡಿರುವ ದೆಹಲಿ ಸಿಎಂ, ಪರಿಸರ ಮಾಲಿನ್ಯ ಉಂಟಾಗುವಂಥ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಒಂದು ಫೋಟೋ ತೆಗೆದು ‘ಗ್ರೀನ್​ ದೆಹಲಿ’ ಆ್ಯಪ್​ ಮೂಲಕ ದೂರು ದಾಖಲಿಸಬಹುದು. ಇವತ್ತೇ ಈ ಅಭಿಯಾನ ಆರಂಭವಾಗಿದ್ದು, ಕೂಳೆ ಸುಡುವುದು ಮುಂತಾದ ಮಾಲಿನ್ಯಕಾರಿ ಚಟುವಟಿಕೆಗಳ ಬಗ್ಗೆ ಜನರು ಗಮನ ಸೆಳೆದರೆ ಅಧಿಕಾರಿಗಳು ಕ್ರಮ ಜರುಗಿಸುತ್ತಾರೆ. ಅಲ್ಲದೆ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ 13 ಹಾಟ್​ಸ್ಪಾಟ್​ಗಳನ್ನು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fifteen =
Remember me
