ನವದೆಹಲಿ:ಸುಪ್ರೀಂ ಕೋರ್ಟ್​ ನೀಡಿದ್ದ ಮಧ್ಯಂತರ ಜಾಮೀನು ಅವಧಿ ನಾಳೆಗೆ (ಜೂನ್​ 01ಕ್ಕೆ) ಮುಕ್ತಾಯಗೊಳ್ಳಲಿದ್ದು, ತಿಹಾರ್​ ಜೈಲಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸದ್ಯ ಹಿಂತಿರುಗಬೇಕಿದೆ. ಹೀಗಿರುವಾಗ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ನಾನು ಜೂನ್ 2ರ ಮಧ್ಯಾಹ್ನ 3 ಗಂಟೆಗೆ ಶರಣಾಗಲಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ನೀರಿನ ಸಮಸ್ಯೆ ಬಗೆಹರಿಸುವಂತೆ ಬಿಜೆಪಿಗೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಮನವಿ
ಈಗ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನು ಜೂನ್ 1ರಂದು ಕೊನೆಗೊಳ್ಳುತ್ತದೆ. “ಕೋರ್ಟ್ ಚುನಾವಣಾ ಪ್ರಚಾರಕ್ಕೆ 21 ದಿನಗಳ ಕಾಲಾವಕಾಶ ನೀಡಿತ್ತು. ಇಂದಿಗೆ ಆ 21 ದಿನಗಳು ಪೂರ್ಣಗೊಂಡಿವೆ. ನಾಳೆಯ ನಾನು ತಿಹಾರ್ ಜೈಲಿಗೆ ಹಿಂತಿರುಗುತ್ತೇನೆ. ನನ್ನನ್ನು ಇನ್ನು ಎಷ್ಟು ದಿನ ಜೈಲಿನಲ್ಲಿ ಇಡುತ್ತಾರೋ ಗೊತ್ತಿಲ್ಲ. ಆದರೂ ಸಹ ನನ್ನ ಉತ್ಸಾಹ ಹೆಚ್ಚಿದೆ. ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ಜೈಲಿಗೆ ಹೋಗಿದ್ದಕ್ಕೆ ನನಗೆ ಹೆಮ್ಮೆಯಾಗುತ್ತಿದೆ” ಎಂದಿದ್ದಾರೆ.
“ನನ್ನನ್ನು ಹಲವು ವಿಧಗಳಲ್ಲಿ ಕಟ್ಟಿಹಾಕಲು, ಬಗ್ಗಿಸಲು ಪ್ರಯತ್ನಿಸಿದರು. ನನ್ನನ್ನು ಮೌನಗೊಳಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ, ಅದ್ಯಾವುದು ಕೂಡ ಯಶಸ್ವಿಯಾಗಲಿಲ್ಲ. ಜೈಲಿನಲ್ಲಿದ್ದಾಗ ನನ್ನ ಔಷಧಿಗಳನ್ನು ನಿಲ್ಲಿಸಿದರು. ನಾನು 20 ವರ್ಷಗಳಿಂದ ಗಂಭೀರ ಮಧುಮೇಹ ರೋಗಿಯಾಗಿದ್ದೇನೆ. ಕಳೆದ 10 ವರ್ಷಗಳಿಂದ ನಾನು ಪ್ರತಿದಿನ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಿದ್ದೇನೆ. ಹೀಗಿರುವಾಗ ಜೈಲಿನಲ್ಲಿದ್ದ ವೇಳೆ ನನಗೆ ಇಂಜೆಕ್ಷನ್​ ಕೊಡುವುದನ್ನೇ ನಿಲ್ಲಿಸಿದ್ದರು” ಎಂದರು.
ಇದನ್ನೂ ಓದಿ:ಜೀವನ ಪರ್ಯಂತ ಚಪ್ಪಲಿ ಹಾಕದಿರಲು ನಟ ವಿಜಯ್​ ಆಂಟೋನಿ ನಿರ್ಧಾರ! ಅವರು ಕೊಟ್ಟ ಕಾರಣ ಹೀಗಿದೆ…
“ಇದರಿಂದ ನನ್ನ ದೇಹದಲ್ಲಿನ ಸಕ್ಕರೆಯ ಮಟ್ಟವು 300ರಿಂದ 325ಕ್ಕೆ ಏರಿಕೆಯಾಯಿತು. ಡಯಾಬಿಟಿಸ್​ ಇಷ್ಟು ಹೆಚ್ಚಿದ್ದರೆ, ಅದು ಮೂತ್ರಪಿಂಡ ಮತ್ತು ಯಕೃತ್ತನ್ನು ಹಾನಿಗೊಳಿಸುತ್ತದೆ. ನಾನು 50 ದಿನ ಜೈಲಿನಲ್ಲಿದ್ದೆ, ಆ 50 ದಿನಗಳಲ್ಲಿ 6 ಕೆಜಿ ತೂಕ ಇಳಿಸಿಕೊಂಡೆ. ಜೈಲಿಗೆ ಹೋದಾಗ 70 ಕೆಜಿ ಇದ್ದ ನನ್ನ ತೂಕ ಇಂದು 64 ಆಗಿದೆ. ಸೆರೆಮನೆಯಿಂದ ಹೊರಬಂದ ನಂತರವೂ ನನ್ನ ತೂಕ ಹೆಚ್ಚಾಗುತ್ತಿಲ್ಲ. ಇದು ಗಂಭೀರ ಅನಾರೋಗ್ಯದ ಸೂಚನೆಯಾಗಿರಬಹುದು ಎಂದು ವೈದ್ಯರು ಹೇಳ್ತಿದ್ದಾರೆ” ಎಂದರು.
“ಸದ್ಯ ಅನೇಕ ಪರೀಕ್ಷೆಗಳ ಅಗತ್ಯವಿದೆ. ಜೂನ್​ 02ರಂದು ಸುಮಾರು 3 ಗಂಟೆಗೆ ಶರಣಾಗುತ್ತೇನೆ. ಈ ಬಾರಿ ಖಂಡಿತ ಅವರು ನನಗೆ ಹೆಚ್ಚು ಕಿರುಕುಳ ನೀಡಬಹುದು. ಆದರೂ ಸಹ ನಾನು ತಲೆಬಾಗುವುದಿಲ್ಲ” ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ,(ಏಜೆನ್ಸೀಸ್).
ದಾಖಲೆಗಳ ಸರದಾರ ಇದೊಂದು ರೆಕಾರ್ಡ್​ ಬ್ರೇಕ್​ ಮಾಡಬೇಕಿದೆ! ಕೊಹ್ಲಿಗೆ ಸವಾಲೆಸೆದ ಸುನಿಲ್ ಗವಾಸ್ಕರ್​

ದಿನಕ್ಕೆ 3,500ಕ್ಕೂ ಅಧಿಕ ದೂರವಾಣಿ ಕರೆಗಳು ‘ಟೆಲಿ-ಮಾನಸ್​’ ಸಹಾಯವಾಣಿಗೆ ಬರ್ತಿವೆ: ಆರೋಗ್ಯ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
