ನವದೆಹಲಿ: ಕೊವಿಡ್​-19 ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿ ದೆಹಲಿಯ ತಬ್ಲಿಘಿ ಜಮಾತ್​ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದಲ್ಲದೆ, ವೀಸಾ ಷರತ್ತುಗಳನ್ನು ಮೀರಿ, ಇಲ್ಲಿಯೇ ಇದ್ದುಕೊಂಡು ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದ 82 ಬಾಂಗ್ಲಾದೇಶಿ ಮುಸ್ಲಿಮರ ವಿರುದ್ಧ ಚಾರ್ಜ್​ಶೀಟ್​ ದಾಖಲಿಸಲಾಗಿತ್ತು.
ಈಗ ಅವರೆಲ್ಲರಿಗೂ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಮೆಟ್ರೊಪೊಲಿಟಿನ್​ ಮ್ಯಾಜಿಸ್ಟ್ರೇಟ್​​ನ ಮುಖ್ಯ ನ್ಯಾಯಾಧೀಶರಾದ ಗುರ್​ಮೋಹನ್​ ಕೌರ್​ ಅವರು ಎಲ್ಲರಿಗೂ ತಲಾ 10 ಸಾವಿರ ರೂ.ವೈಯಕ್ತಿಕ ಬಾಂಡ್​ ಆಧಾರದ ಮೇಲೆ ಜಾಮೀನು ನೀಡಿದ್ದಾರೆ.ವಿದೇಶಿ ಪ್ರಜೆಗಳ ಪರವಾಗಿ ಅಶಿಮಾ ಮಂಡ್ಲಾ ಮತ್ತು ಮಂದಾಕಿನಿ ಸಿಂಗ್​ ಅವರು ವಾದ ಮಂಡನೆ ಮಾಡಿದ್ದರು. ಅವರು ಮಾಡಿದ್ದ ಅಪರಾಧಕ್ಕೆ ಏಳುವರ್ಷಗಳವರೆಗೂ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. 82 ಜನರೂ ಜಾಮೀನಿಗಾಗಿ ಅರ್ಜಿ ಸಲ್ಲಿಸಿ, ಶಿಕ್ಷೆಯಿಂದ ಪಾರು ಮಾಡುವಂತೆ ಮನವಿ ಮಾಡಿದ್ದರು.
ಎಲ್ಲರನ್ನೂ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಒಳಪಡಿಸಲಾಗಿತ್ತು. (ಏಜೆನ್ಸೀಸ್​)
ಗಂಗಾನದಿಗೆ ಎಸೆಯಲಾಗುತ್ತಿದೆಯಾ ಕೊವಿಡ್​-19ನಿಂದ ಮೃತಪಟ್ಟವರ ಶವಗಳನ್ನು? ಏನಿದು ಫೋಟೋಗಳು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 3 =
Remember me
