ನವದೆಹಲಿ:ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಆರೋಪಪಟ್ಟಿಯನ್ನು ದೆಹಲಿ ನ್ಯಾಯಾಲಯ ಮಂಗಳವಾರ (ಜುಲೈ 9) ಪರಿಗಣಿಸಿ, ಸಿಎಂ ಕೇಜ್ರಿವಾಲ್​​ಗೆ ಪ್ರೊಡಕ್ಷನ್ ವಾರೆಂಟ್ ಜಾರಿ ಮಾಡಿದೆ.
ಇದನ್ನು ಓದಿ:ಅಂಗಾಂಗ ಕಸಿ ದಂಧೆ ಭೇದಿಸಿದ ಕ್ರೈಂಬ್ರಾಂಚ್​​ ಪೊಲೀಸರು; 7 ಮಂದಿ ಬಂಧನ
ಜಾರಿ ನಿರ್ದೇಶನಾಲಯವು ಏಳನೇ ಪೂರಕ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಇದರಲ್ಲಿ ಇಡಿ ಮದ್ಯ ನೀತಿ ಪ್ರಕರಣದ ತನಿಖೆಯಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷವನ್ನು ಆರೋಪಿಗಳನ್ನಾಗಿ ಮಾಡಿದೆ. ಆರೋಪ ಪಟ್ಟಿಯನ್ನು ಪರಿಗಣಿಸಿದ ಸಿಬಿಐ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರಿದ್ದ ಪೀಠವು ಜುಲೈ 12ರಂದು ನ್ಯಾಯಾಲಯಕ್ಕೆ ಅರವಿಂದ್ ಕೇಜ್ರಿವಾಲ್ ಹಾಜರಾಗುವಂತೆ ಪ್ರೊಡಕ್ಷನ್ ವಾರಂಟ್ ಹೊರಡಿಸಿದೆ.
ಇದರ ಜತೆಗೆ ವಿನೋದ್ ಚೌಹಾಣ್‌ ವಿರುದ್ಧ ಇಡಿ ಸಲ್ಲಿಸಿದ್ದ ಪೂರಕ ಆರೋಪ ಪಟ್ಟಿಯನ್ನು ಗಮನಕ್ಕೆ ತೆಗೆದುಕೊಂಡು, ಜುಲೈ 12ರಂದು ನ್ಯಾಯಾಲಯದ ಮುಂದೆ ಅವರ ಉಪಸ್ಥಿತಿಗಾಗಿ ಪ್ರೊಡಕ್ಷನ್ ವಾರಂಟ್ ಹೊರಡಿಸಿದೆ. ಅಲ್ಲದೆ ಆರೋಪಪಟ್ಟಿಯಲ್ಲಿ ಹೆಸರಿಸಲಾದ ಮತ್ತೊಬ್ಬ ಆರೋಪಿ ಆಶಿಶ್​ ಮಾಥುರ್​ಗೆ ಸಮನ್ಸ್​ ಮಾಡಲಾಗಿದೆ.
ಫೆಡರಲ್ ತನಿಖಾ ಸಂಸ್ಥೆ ಮೇ 17ರಂದು ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷವನ್ನು (ಎಎಪಿ) ಆರೋಪಿಗಳೆಂದು ಹೆಸರಿಸಿ 200 ಪುಟಗಳ ಆರೋಪಪಟ್ಟಿ ಸಲ್ಲಿಸಿತ್ತು. ದೆಹಲಿಯಿಂದ ಗೋವಾಕ್ಕೆ 25.5 ಕೋಟಿ ರೂ. ವರ್ಗಾವಣೆ ಮಾಡಿದ ಮತ್ತೊಬ್ಬ ಆರೋಪಿ ಚೌಹಾಣ್‌ ಕೂಡ ಕೇಜ್ರಿವಾಲ್‌ ಜತೆ ನಿಕಟ ಸಂಪರ್ಕ ಹೊಂದಿದ್ದ ಎಂದು ಇಡಿ ಹೇಳಿದೆ. ಸಂಸ್ಥೆಯು ಜೂನ್ 28 ರಂದು ತನ್ನ ಎಂಟನೇ ಪೂರಕ ಆರೋಪಪಟ್ಟಿಯಲ್ಲಿ ಚೌಹಾಣ್ ಮತ್ತು ಮಾಥುರ್ ಅವರನ್ನು ಆರೋಪಿಗಳೆಂದು ಹೆಸರಿಸಿತ್ತು. ಪ್ರೊಡಕ್ಷನ್ ವಾರಂಟ್​​​​ ಅನ್ನು ತನಿಖೆಯ ಉದ್ದೇಶಗಳಿಗಾಗಿ ಬಂಧನದಲ್ಲಿರುವ ಖೈದಿಯ ಹಾಜರಾತಿಗೆ ನೀಡಲಾಗುತ್ತದೆ. ಅವನ ವಿರುದ್ಧ ದಾಖಲಾಗಿರುವ ಆರೋಪಕ್ಕೆ ಉತ್ತರಿಸುವ ಉದ್ದೇಶಗಳಿಗಾಗಿ ಮಾತ್ರ ಈ ವಾರೆಂಟ್​​​ ನೀಡಲಾಗುವುದು. (ಏಜೆನ್ಸೀಸ್​)
ಪುಟಿನ್​ ಜತೆಗಿನ ಪ್ರಧಾನಿ ಮೋದಿ ಭೇಟಿ ಖಂಡನೀಯ; ಯೂಕ್ರೇನ್​​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೀಗೆಳಿದ್ದೇಕೆ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 − three =
Remember me
