ನವದೆಹಲಿ:ಮಾನನಷ್ಟ ಪ್ರಕರಣದಲ್ಲಿ ನರ್ಮದಾ ಬಚಾವೋ ಆಂದೋಲನದ ರೂವಾರಿ ಹಾಗೂ ಸಾಮಾಜಿಕ ಹೋರಾಟಗಾರ್ತಿಯಾದ ಮೇಧಾ ಪಾಟ್ಕರ್ ಅವರಿಗೆ ವಿಧಿಸಿದ್ದ ಐದು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ಇಲ್ಲಿನ ನ್ಯಾಯಾಲಯ ಇಂದು ( ಜುಲೈ 29) ಅಮಾನತುಗೊಳಿಸಿದೆ.
ಇದನ್ನೂ ಓದಿ:ಮುಸ್ಲಿಂರನ್ನು ಸಂತೃಪ್ತಿಪಡಿಸಲು ರಾಮನಗರ ಹೆಸರು ಬದಲಾವಣೆ ಮಾಡ್ತಿದ್ದಾರೆ: ಕಾಂಗ್ರೆಸ್​ ವಿರುದ್ಧ ಈಶ್ವರಪ್ಪ ಕಿಡಿ!
ಮೇಧಾ ಪಾಟ್ಕರ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ ಶರ್ಮಾ ಶಿಕ್ಷೆಯನ್ನು ಅಮಾನತುಗೊಳಿಸಿ ಅದೇಶಿದ್ದಾರೆ. ಅಲ್ಲದೆ ಎದುರಾಳಿ ದೆಹಲಿಯ ವಿಕೆ ಸಕ್ಸೇನಾ ಅವರಿಗೆ ನೋಟಿಸ್ ಜಾರಿ ಮಾಡಿದೆ. ಪ್ರಕರಣ ಮುಂದಿನ ವಿಚಾರಣೆಯ ದಿನಾಂಕ ಮೊದಲು (ಸೆಪ್ಟೆಂಬರ್ 4 ) ನೋಟಿಸ್​​ಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ ಎಂದು ಸಕ್ಸೇನಾ ಪರ ವಕೀಲ ಗಜಿಂದರ್ ಕುಮಾರ್​ ತಿಳಿಸಿದ್ದಾರೆ. 25,000 ಸಾವಿರ ರೂ. ಶ್ಯೂರಿಟಿ ಬಾಂಡ್ ಇಡಲು ಸೂಚಿಸಿ ಮೇಧಾ ಪಾಟ್ಕರ್​ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಹಿನ್ನೆಲೆ ಏನು ?ದೆಹಲಿಯ ಪ್ರಸ್ತುತ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು 23 ವರ್ಷಗಳ ಹಿಂದೆ ಮೇಧಾ ಪಾಟ್ಕರ್ ಅವರ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಮೇಧಾ ಅವರಿಗೆ ಜುಲೈ 1 ರಂದು ದೆಹಲಿ ಕೋರ್ಟ್​ ಮೇಧಾ ಅವರಿಗೆ ಸೆರೆಮನೆ ವಾಸದೊಂದಿಗೆ ಸಕ್ಸೇನಾ ಅವರಿಗೆ 10 ಲಕ್ಷ ರೂ. ಹಣವನ್ನು ದಂಡವಾಗಿ ನೀಡಬೇಕೆಂದು ದೆಹಲಿ ನ್ಯಾಯಾಲಯ ಆದೇಶಿಸಿತ್ತು.
ಏನಿದು ಕೇಸ್?2000 ಇಸವಿಯಿಂದಲೂ ಇವರಿಬ್ಬರ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯಗಳು ನಡೆಯುತ್ತಲೇ ಇವೆ. 2000ರ ಸಂದರ್ಭದಲ್ಲಿ ವಿಕೆ ಸಕ್ಸೇನಾ ಅವರು, ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ಕೌನ್ಸಿಲ್ ಆಫ್ ಲಿಯಾಬಿಲಿಟೀಸ್ ಎಂಬ ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಆ ಸಂದರ್ಭದಲ್ಲಿ, ಅವರು ಮೇಧಾ ಪಾಟ್ಕರ್ ಹಾಗೂ ನರ್ಮದಾ ಬಚಾವೋ ಆಂದೋಲನದ ವಿರುದ್ಧ ಕೆಲವು ಜಾಹೀರಾತುಗಳನ್ನು ನೀಡಿದ್ದರು.
ಆ ಹಿನ್ನೆಲೆಯಲ್ಲಿ ಮೇಧಾ ಪಾಟ್ಕರ್ ಅವರು ಸಕ್ಸೇನಾ ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆದರೆ, ಆನಂತರದಲ್ಲಿ ಮೇಧಾ ಪಾಟ್ಕರ್ ಅವರು ಟಿವಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ವಿ.ಕೆ. ಸಕ್ಸೇನಾ ಅವರನ್ನು ದನ ಕಾಯುವವನು ಎಂದು ಜರಿದಿದ್ದರು. ಆ ಪದ ಬಳಕೆಯ ವಿರುದ್ಧ ಸೆಕ್ಸೇನಾ ಅವರು ಮಾನಹಾನಿ ಮೊಕದ್ದಮೆ ಸೇರಿದಂತೆ ಎರಡು ಕೇಸ್ ದಾಖಲಿಸಿದ್ದರು. ಅವುಗಳಲ್ಲಿ ಮಾನಹಾನಿ ಕೇಸ್ ನ ತೀರ್ಪು ಜು. 1ರಂದು ಹೊರಬಿದ್ದಿದೆ. ಜೂ. 30ರಂದೇ ಈ ಪ್ರಕರಣದ ವಿಚಾರಣೆಯು ಮುಕ್ತಾಯವಾಗಿ ಶಿಕ್ಷೆಯ ಪ್ರಮಾಣವನ್ನು ಜು. 1ಕ್ಕೆ ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿತ್ತು.
ಕೋಚಿಂಗ್ ಸೆಂಟರ್‌ನಲ್ಲೇ ಐಎಎಸ್ ಆಕಾಂಕ್ಷಿಗಳ ದುರಂತ ಅಂತ್ಯ, ಬುಲ್ಡೋಜರ್ ಕಾರ್ಯಾಚರಣೆ ಶುರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − three =
Remember me
