ನವದೆಹಲಿ: ರಾಷ್ಟ್ರ ರಾಜಧಾನಿಯ ವ್ಯಾಪ್ತಿಯಲ್ಲಿ ಒಂದೇ ದಿನ 190 COVID19 ಪಾಸಿಟಿವ್ ಪ್ರಕರಣ ಖಚಿತವಾಗುವುದರೊಂದಿಗೆ ಒಟ್ಟು ಕೇಸ್​ಗಳ ಸಂಖ್ಯೆ 3,108ಕ್ಕೆ ತಲುಪಿದೆ. ಆದರೆ ಕಳೆದ ಎರಡು ದಿನಗಳ ಅವಧಿಯಲ್ಲಿ ಒಂದೇ ಒಂದು ಮರಣ ಸಂಭವಿಸಿಲ್ಲ ಎಂಬುದು ಸಮಾಧಾನದ ವಿಚಾರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ಕಂಟೇನ್​ಮೆಂಟ್ ಝೋನ್​ಗಳ ಸಂಖ್ಯೆ ಸೋಮವಾರ 99ಕ್ಕೆ ತಲುಯಪಿದೆ. ಕಳೆದ ವಾರ ಒಂದೇ ವಾರದ ಅವಧಿಯಲ್ಲಿ 800ಕ್ಕೂ ಹೆಚ್ಚು ರೋಗಿಗಳು ಸೋಂಕುಮುಕ್ತರಾಗಿದ್ದಾರೆ. ಆದರೆ, ಸೋಮವಾರ ಯಾವುದೇ ರೋಗಿಗಳು ಸೋಂಕು ಮುಕ್ತರಾಗಿಲ್ಲ. ಇದುವರೆಗೆ ಕರೊನಾ ವೈರಸ್ ಸೋಂಕಿಗೆ ದೆಹಲಿ ನಗರದಲ್ಲಿ 54 ಜನ ಮೃತಪಟ್ಟಿದ್ದಾರೆ.
ದೆಹಲಿಯ ಲೆಫ್ಟಿನೆಂಟ್ ಗವರ್ನರ್​ ಅನಿಲ್ ಬೈಜಾಲ್ ಅವರು ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದು, ದೆಹಲಿ ಸರ್ಕಾರ ಮತ್ತು ಪೊಲೀಸರಿಗೆ ಸುರಕ್ಷಾ ಮುಂಜಾಗ್ರತಾ ಕ್ರಮಗಳಲ್ಲಿ ಯಾವುದೇ ನಿರ್ಲಕ್ಷ್ಯ ತೋರದಂತೆ ಸೂಚಿಸಿದ್ದಾರೆ. ಮುಂಚೂಣಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಸುರಕ್ಷತೆಗೆ ಸ್ಥಳೀಯವಾಗಿ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆಯೂ ಪರಿಶೀಲಿಸುವಂತೆ ಆದೇಶಿಸಿದ್ದಾರೆ. ಕೇಂದ್ರ ಸರ್ಕಾರದ ಆದೇಶವನ್ನು ದೆಹಲಿ ಸರ್ಕಾರ ಪಾಲಿಸುತ್ತಿದ್ದು, ಮೇ 3ರ ಲಾಕ್​ಡೌನ್ ಅವಧಿಯ ನಂತರವೂ ಈ ವಿಷಯದಲ್ಲಿ ಕೇಂದ್ರದ ಸಲಹೆ,ಸೂಚನೆ ಪ್ರಕಾರವೇ ಮುನ್ನಡೆಯಲಾಗುತ್ತದೆ ಎಂದು ದೆಹಲಿ ಸರ್ಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)
VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
