ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಇಂದು ಮುಗಿದಿದ್ದು, ಆಮ್​ ಆದ್ಮಿ ಪಕ್ಷ ಭರ್ಜರಿ ಬಹುಮತ ಸಾಧಿಸಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇದು ಎಷ್ಟರಮಟ್ಟಿಗೆ ಸತ್ಯವಾಗುತ್ತದೆ ಎಂಬುದು ಫೆ. 11ರ ಫಲಿತಾಂಶ ದಿನದಂದು ನಿರ್ಧಾರವಾಗಲಿದೆ. ಆದರೂ, ಬಹುತೇಕ ಎಕ್ಸಿಟ್​​ ಪೋಲ್​ ನಿಜವಾಗಿರುವುದರಿಂದ ಇದನ್ನು ಅಲ್ಲಗೆಳೆಯುವಂತಿಲ್ಲ.
ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮೊದಲ ಬಾರಿಗೆ ಮತ ಚಲಾಯಿಸಿದವರು ಆಪ್​ಗೆ ಒಲವು ತೋರಿದ್ದಾರೆ ಎಂಬುದು ಇಂಡಿಯಾ ಟುಡೆ-ಆ್ಯಕ್ಸಿಸ್​ ಮೈ ಇಂಡಿಯಾ ಎಕ್ಸಿಟ್​ ಪೋಲ್​ನಲ್ಲಿ ಬಹಿರಂಗವಾಗಿದೆ.
ಕಳೆದ ಐದು ವರ್ಷಗಳಲ್ಲಿ ಆಪ್​ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಮತ ಚಲಾಯಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಅದರಲ್ಲೂ ಉಚಿತ ನೀರು ಮತ್ತು ವಿದ್ಯುತ್​ ಜನರನ್ನು ಹೆಚ್ಚು ಆಕರ್ಷಿಸಿದೆ. ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ನಿರ್ಧಾರವು ಹೆಚ್ಚು ಪ್ರಖ್ಯಾತಿಯನ್ನು ಆಪ್​ಗೆ ತಂದುಕೊಟ್ಟಿದೆ ಎಂದು ಸಮೀಕ್ಷೆ ಹೇಳಿದೆ.
ಇದನ್ನೂ ಓದಿ:ದೆಹಲಿ ವಿಧಾನಸಭಾ ಚುನಾವಣೆ: ಕಳೆದ ಬಾರಿಗಿಂತಲೂ ನೀರಸ ಮತದಾನ, ಎಕ್ಸಿಟ್​ ಫೋಲ್​ನಲ್ಲಿ ಕೇಜ್ರಿವಾಲ್​ ಕಮಾಲ್​!
ಪುರಷರಿಗಿಂತ ಶೇ 6 ರಷ್ಟು ಹೆಚ್ಚು ಮಹಿಳೆಯರು ಆಪ್​ಗೆ ಮತ ಚಲಾಯಿಸಿದ್ದಾರೆ. ಯುವಕರು, ವಿದ್ಯಾರ್ಥಿಗಳು ಹಾಗೂ ಮೊದಲ ಬಾರಿಗೆ ಮತ ಚಲಾಯಿಸುವವರು ಆಪ್​ ಅನ್ನೇ ಆರಿಸಿಕೊಂಡಿರುವುದು ಈ ಬಾರಿಯ ವಿಶೇಷವಾಗಿದೆ.
ಇನ್ನು ಆಪ್​ನ ಕೆಲ ಶಾಸಕರು ವಿರುದ್ಧವು ಅಸಮಾಧಾನ ಕಂಡುಬಂದಿದ್ದು ಸಿಎಂ ಅರವಿಂದ್​ ಕೇಜ್ರಿವಾಲ್​ ಮುಖ ನೋಡಿಕೊಂಡು ಮತ ಚಲಾಯಿಸಿರುವುದಾಗಿ ಸಮೀಕ್ಷಾ ವೇಳೆ ಜನರು ಹೇಳಿಕೊಂಡಿದ್ದಾರೆ.
ಒಟ್ಟಾರೆ ದೆಹಲಿ ಚುನಾವಣಾ ಕಣದಲ್ಲಿ ಆಪ್​ 59 ರಷ್ಟು ಮತ ಪ್ರಮಾಣವನ್ನು ಪಡೆದುಕೊಂಡರೆ, ಬಿಜೆಪಿ ಶೇ. 43 ಮತ ಹಂಚಿಕೆ ಪಡೆದುಕೊಂಡಿದೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ಆಪ್​ 59 ರಿಂದ 68 ಮತ್ತು ಬಿಜೆಪಿ 2 ರಿಂದ 11 ಹಾಗೂ ಕಾಂಗ್ರೆಸ್​ ಶೂನ್ಯ ಸಂಪಾದಿಸಲಿದೆ ಎಂದು ಎಕ್ಸಿಟ್​ ಪೋಲ್​ ಹೇಳಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 7 =
Remember me
