ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೆಹಲಿಯ ಸೀಲಂಪುರ್, ಜಾಮಿಯಾ ನಗರ್ ಮತ್ತು ಶಹೀನ್​ಬಾಗ್​ನಲ್ಲಿ ನಡೆಯುತ್ತಿರುವ ಹೋರಾಟ ಕಾಕತಾಳೀಯವಲ್ಲ. ಅದು ದೇಶದ ಸೌಹಾರ್ದವನ್ನು ಹಾಳು ಮಾಡುವ ರಾಜಕೀಯ ಪಿತೂರಿ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆರೋಪಿಸಿದರು. ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಆಪ್ ಮತ್ತು ಕಾಂಗ್ರೆಸ್ ಜನರನ್ನು ತಪು್ಪ ಹಾದಿಗೆಳೆದು ಪ್ರಚೋದಿಸುತ್ತಿವೆ ಎಂದು ಟೀಕಿಸಿದರು. ಬಿಜೆಪಿ ದ್ವೇಷ ರಾಜಕಾರಣ ಮಾಡುವು ದಿಲ್ಲ. ಅಭಿವೃದ್ಧಿಯೇ ಅದರ ಮಂತ್ರ ಎಂದರು.
ಆರೋಪ-ಪ್ರತ್ಯಾರೋಪ: ಶಹೀನ್​ಬಾಗ್ ಹೋರಾಟದಿಂದ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಹಾಗೂ ಆಪ್ ನಾಯಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಮನಸ್ಸು ಮಾಡಿದರೆ ಶಹೀನ್​ಬಾಗ್ ಮಾರ್ಗವನ್ನು ಎರಡು ನಿಮಿಷದೊಳಗೆ ತೆರವು ಮಾಡಬಹುದು. ಆದರೆ ಅದನ್ನು ತೆರವು ಮಾಡಿದರೆ ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಷಯವೇ ಇಲ್ಲ. ಹೀಗಾಗಿ ಶಹೀನ್​ಬಾಗ್ ವಿಷಯದ ಮೇಲೆಯೇ ಅವರು ಜೋತುಬಿದ್ದಿದ್ದಾರೆ ಎಂದು ಟೀಕಿಸಿದ್ದಾರೆ.
ಕೇಜ್ರಿ ವಿರುದ್ಧ ಸಾಕ್ಷ್ಯವಿದೆ ಎಂದ ಬಿಜೆಪಿ: ಕೇಜ್ರಿವಾಲ್ ಭಯೋತ್ಪಾದಕ ಎನ್ನಲು ಬೇಕಾದಷ್ಟು ಸಾಕ್ಷ್ಯಗಳಿವೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್ ಸೋಮವಾರ ಹೇಳಿದ್ದಾರೆ. ತಾವೊಬ್ಬ ಅರಾಜಕವಾದಿ ಎಂದು ಕೇಜ್ರಿವಾಲ್ ಅವರೇ ಹೇಳಿದ್ದಾರೆ. ಅರಾಜಕವಾದಿಗೂ ಭಯೋತ್ಪಾದಕರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಜಾವಡೇಕರ್ ತಿಳಿಸಿದ್ದಾರೆ. ‘ಆಪ್​ಗೆ ಮುಸ್ಲಿಂ ಲೀಗ್ ಎಂದು ಮರುನಾಮಕರಣ ಮಾಡುವುದು ಒಳ್ಳೆಯದು’ ಎಂದು ಬಿಜೆಪಿ ಅಭ್ಯರ್ಥಿ ಕಪಿಲ್ ಟ್ವೀಟ್ ಮಾಡಿದ್ದಾರೆ.
ಬ್ಯಾಲಟ್ ವರ್ಸಸ್ ಬುಲೆಟ್: ಪ್ರಜಾಪ್ರಭುತ್ವದಲ್ಲಿ ಗುಂಡಿಗಿಂತ ಮತಪತ್ರವೇ (ಬ್ಯಾಲಟ್) ಶಕ್ತಿಯುತವಾದುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಶಹೀನ್​ಬಾಗ್ ಪ್ರತಿಭಟನೆಗೆ ಬೆಂಬಲ ನೀಡುವ ಮೂಲಕ ಕೇಜ್ರಿವಾಲ್ ರಾಜಧಾನಿಯಲ್ಲಿ ಅರಾಜಕತೆ ಹಬ್ಬಿಸಲು ಯತ್ನಿಸುತ್ತಿದ್ದಾರೆ. ಆದರೆ, ಅವರಿಗೆ ಬ್ಯಾಲಟ್ ಮೂಲಕ ಸೂಕ್ತ ಉತ್ತರ ಸಿಗಲಿದೆ ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 9 =
Remember me
