ನವದೆಹಲಿ:ದೆಹಲಿ ಚುನಾವಣಾ ಫಲಿತಾಂಶದ ಅರ್ಧದವರೆಗೂ ಗೆಲವು ನಮ್ಮದೇ ಎಂದು ಹೇಳುತ್ತಿದ್ದ ದೆಹಲಿ ಬಿಜೆಪಿ ಘಟಕದ ಮುಖ್ಯಸ್ಥ ಮನೋಜ್​ ತಿವಾರಿ ಕೊನೆಗೂ ಸೋಲನ್ನು ಒಪ್ಪಿಕೊಂಡು, ಭರ್ಜರಿ ಬಹುಮತ ಸಾಧಿಸಿದ ಆಮ್​ ಆದ್ಮಿ ಪಕ್ಷಕ್ಕೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ತಮ್ಮ ಹಿಂದಿನ ಟ್ವೀಟ್​ ಬಗೆಗಿನ ಪ್ರಶ್ನೆಯಿಂದ ಮುಜುಗರಕ್ಕೂ ಒಳಗಾದರು.
ದೆಹಲಿಯ ಎಲ್ಲ ಮತದಾರರಿಗೂ ಹಾಗೂ ಶ್ರಮವಹಿಸಿದ ಪಕ್ಷದ ಎಲ್ಲ ಕಾರ್ಯಕರ್ತರಿಗೂ ಧನ್ಯವಾದಗಳು. ಜನರು ತೀರ್ಪನ್ನು ನಾವು ಗೌರವಿಸುತ್ತೇವೆ. ಅರವಿಂದ್​ ಕೇಜ್ರಿವಾಲ್​ ಅವರಿಗೆ ಧನ್ಯವಾದಗಳು. ಜನರ ನಿರೀಕ್ಷೆಗಳನ್ನು ದೆಹಲಿ ಸರ್ಕಾರ ಪೂರೈಸಲಿದೆ ಎಂದು ಬಯಸಿದ್ದೇನೆ ಎಂದು ಟ್ವೀಟ್​ ಮಾಡಿದ್ದರು.
ಮತದಾನ ದಿನ ಅಂದರೆ ಶನಿವಾರ ಟ್ವೀಟ್​ ಮಾಡಿದ್ದ ತಿವಾರಿ, ಬಿಜೆಪಿ 48 ಸ್ಥಾನಗಳಲ್ಲಿ ಗೆಲ್ಲಲಿದೆ. ಈ ಮೂಲಕ ಸರ್ಕಾರವನ್ನು ರಚಿಸಲಿದೆ ಎಂದು ಹೇಳುವ ಮೂಲಕ ಬೇಕಾದರೆ ಟ್ವೀಟ್​ ಅನ್ನು ಸೇವ್​ ಮಾಡಿಕೊಳ್ಳಿ ಎಂದು ಬಲವಾದ ನಂಬಿಕೆ ವ್ಯಕ್ತಪಡಿಸಿದ್ದರು. ಅಲ್ಲದೆ, ಬಿಜೆಪಿ 55 ಸ್ಥಾನಗಳನ್ನು ಗೆದ್ದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಹೇಳಿದ್ದರು.
ನಿಮ್ಮ ಟ್ವೀಟ್​ ಅನ್ನು ಸೇವ್​ ಮಾಡಿಕೊಂಡಿದ್ದೇವೆ. ತಾವೀಗ ಅದನ್ನು ಡಿಲೀಟ್​ ಮಾಡಬಹುದಾ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಮುಜಗರಕ್ಕೀಡಾದ ತಿವಾರಿ, ರಾಜ್ಯದ ಮುಖ್ಯಸ್ಥನಾಗಿ ರಾಜ್ಯವನ್ನು ಕಳೆದುಕೊಳ್ಳುತ್ತೇವೆ ಎಂದು ಹೇಳಬಹುದಾ? ನಾವು ನಮ್ಮ ಆಂತರಿಕ ಸಮೀಕ್ಷೆಯನ್ನು ಹೊಂದಿದ್ದೆವು. 48 ಕ್ಷೇತ್ರಗಳಲ್ಲಿ ಮೌಲ್ಯ ಮಾಪನ ಮಾಡಿದ್ದೆವು. ಯೋಚನೆ ಮಾಡಿದ್ದಲ್ಲಿ ಎಡವಿದೆವು. ಜನರು ಬದಲಾವಣೆಗಾಗಿ ವೋಟ್​ ಮಾಡಿದ್ದಾರೆ. ನೀವು ನನ್ನ ಟ್ವೀಟ್​ ಸೇವ್​ ಮಾಡಿಕೊಂಡಿದ್ದರೆ, ಅದನ್ನು ಹಾಗೇ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ.
ಇನ್ನು ಚುನಾವಣಾ ಫಲಿತಾಂಶಕ್ಕೆ ಬರುವುದಾರೆ, ಸದ್ಯದ ಟ್ರೆಂಡ್​ ಪ್ರಕಾರ ಒಟ್ಟು 70 ಸ್ಥಾನಗಳಲ್ಲಿ ಈಗಾಗಲೇ 52 ಸ್ಥಾನಗಳಲ್ಲಿ ಗೆಲವು ಸಾಧಿಸಿರುವ ಆಪ್​ ಉಳಿದ 10 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ 6 ಸ್ಥಾನಗಳಲ್ಲಿ ವಿಜಯೋತ್ಸವ ಆಚರಿಸಿದ್ದು, 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಉಳಿದಂತೆ ಕಾಂಗ್ರೆಸ್​ ಖಾತೆ ತೆರೆಯುವಲ್ಲಿ ವಿಫಲವಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 17 =
Remember me
