ನವದೆಹಲಿ:ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷ ಭರ್ಜರಿ ಬಹುಮತ ಸಾಧಿಸಿ ಮೂರನೇ ಅವಧಿಗೆ ಅಧಿಕಾರ ಚುಕ್ಕಾಣಿ ಹಿಡಿದಿದೆ. ಇದೀಗ ದೆಹಲಿ ಫಲಿತಾಂಶ ಇದೇ ವರ್ಷ ಎದುರಾಗಲಿರುವ ಬಿಹಾರದ ವಿಧಾನಸಭೆ ಚುನಾವಣೆ ಮೇಲೆ ಬೀಳಲಿದೆಯೇ ಎಂಬ ಸಣ್ಣ ನಡುಕ ಸಿಎಂ ನಿತೀಶ್​ ಕುಮಾರ್​ಗೆ ಶುರುವಾಗಿದೆ. ಇಂದು ದೆಹಲಿ ಫಲಿತಾಂಶದ ನಡುವೆ ಪ್ರತಿಕ್ರಿಯಿಸಿ ಕೇವಲ ಮೂರೇ ಪದವನ್ನು ಹೇಳಿ ತಲೆಯ ಮೇಲೆ ಕೈಯಿಟ್ಟು ಹೊರ ನಡೆದಿದ್ದು ಕುತೂಹಲ ಮೂಡಿಸಿದೆ.
ಬಿಜೆಪಿ ಐಕಾನ್​ ದೀನ ದಯಾಳ ಉಪಾಧ್ಯಾಯ ಅವರ ಸಂಸ್ಮರಣಾ ದಿನ ಹಿನ್ನೆಲೆಯಲ್ಲಿ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿ ಅವರೊಂದಿಗೆ ಕಾರ್ಯಕ್ರಮದ ವೇದಿಕೆ ಹಂಚಿಕೊಂಡರು. ಕಾರ್ಯಕ್ರಮದ ಬಳಿಕ ದೆಹಲಿ ಚುನಾವಣಾ ಫಲಿತಾಂಶ ಕುರಿತು ಸುದ್ದಿಗಾರರ ಪ್ರಶ್ನೆಗೆ, ಜನತಾ ಮಾಲೀಕ್​ ಹೈ (ಜನರೇ ಮಾಲೀಕರು ) ಎಂಬ ಮೂರು ಪದವನ್ನಷ್ಟೇ ಹೇಳಿ ತಲೆ ಮೇಲೆ ಕೈಯಿಟ್ಟುಕೊಂಡು ಅಲ್ಲಿಂದ ಹೊರ ನಡೆದರು.
ದೆಹಲಿ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್​ ಷಾ ಅಂತಹ ನಾಯಕರೇ ಪ್ರಚಾರ ನಡೆಸಿದರು ಹೀನಾಯ ಸೋಲು ಅನುಭವಿಸಿರುವುದು ನಿತೀಶ್​ ಅವರಿಗೆ ಕೊಂಚ ನಡುಕ ಶುರುವಾಗಿದೆ ಎನ್ನಲಾಗಿದೆ.
ಬಿಜೆಪಿ ಮೈತ್ರಿಯೊಂದಿಗೆ ಸಂಯುಕ್ತ ಜನತಾದಳ(ಜೆಡಿಯು) ಕೂಡ ದೆಹಲಿಯ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ, ನಿತೀಶ್​ ಮೂರು ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ನಡೆಸಿದ್ದರು. ಆದರೆ, ಸ್ಪರ್ಧಿಸಿದ್ದ ಎರಡು ಕ್ಷೇತ್ರದಲ್ಲೂ ಜೆಡಿಯು ಭಾರಿ ಅಂತರದಿಂದ ಹೀನಾಯ ಸೋಲು ಕಂಡಿದೆ. ಅಲ್ಲದೆ, ಕೇಜ್ರಿವಾಲ್​ ಹಣಿಯಲು ಇದೇ ಮೊದಲ ಬಾರಿಗೆ ಜೆಡಿಯುಯೊಂದಿಗೆ ಬಿಜೆಪಿ ಸೇರಿಕೊಂಡಿತ್ತು. ಸಮಾವೇಶವೊಂದರಲ್ಲಿ ಕೇಜ್ರಿವಾಲ್​ ವಿರುದ್ಧ ವಾಗ್ದಾಳಿ ನಡೆಸಿದ್ದ ನಿತೀಶ್​, ದೆಹಲಿಯಲ್ಲಿ ಕೇವಲ ಉಚಿತ ಸೌಲಭ್ಯಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದರೆ. ಆದರೆ, ಯಾವುದೇ ನಿಜವಾದ ಅಭಿವೃದ್ಧಿಯನ್ನು ಮಾಡಿಲ್ಲ ಎಂದು ಕೇಜ್ರಿವಾಲ್​ ವಿರುದ್ಧ ಕಿಡಿಕಾರಿದ್ದರು.
ಜೆಡಿಯು ಉಪಾಧ್ಯಕ್ಷರಾಗಿದ್ದ ಹಾಗೂ ಚುನಾವಣಾ ಚಾಣಕ್ಯ ಎಂದೇ ಪ್ರಖ್ಯಾತಿಯಾಗಿದ್ದ ಪ್ರಶಾಂತ್​ ಕಿಶೋರ್​ ಕೇಜ್ರಿವಾಲ್​ಗೆ ಸಾಥ್​ ನೀಡಿದ್ದಾರೆ. ವಿಪರ್ಯಾಸವೆಂದರೆ ಬಿಜೆಪಿಯೊಂದಿಗಿನ ಸಖ್ಯ ಹಾಗೂ ಸಿಎಎ ಕಾಯ್ದೆಯಲ್ಲಿ ವಿಭಿನ್ನ ನಿಲುವಿನಿಂದಾಗಿ ನಿತೀಶ್​ ಕುಮಾರ್​ ಜೆಡಿಯು ಉಪಾಧ್ಯಕ್ಷ ಸ್ಥಾನದಿಂದ ಪ್ರಶಾಂತ್​ ಕಿಶೋರ್​ ಅವರನ್ನು ಕಿತ್ತುಹಾಕಿದ್ದರು. ಇದೀಗ ದೆಹಲಿಯ ಚುನಾವಣೆಯಲ್ಲೂ ಪ್ರಶಾಂತ್​ ಕಿಶೋರ್​ ಕಮಾಲ್​ ಮಾಡಿರುವುದು ನಿತೀಶ್​ಗೆ ಸ್ವಲ್ಪ ಚಿಂತಿಸುವಂತೆ ಮಾಡಿದೆ.
ಫೆ. 8ರಂದು ದೆಹಲಿಯ 70 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು ಪ್ರಕಟವಾದ ಫಲಿತಾಂಶದಲ್ಲಿ ಆಪ್​ 62 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಮೂರನೇ ಅವಧಿಗೆ ದೆಹಲಿ ಗದ್ದುಗೆ ಏರಿದೆ. ಬಿಜೆಪಿ 8 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದ್ದು, ಕಾಂಗ್ರೆಸ್​ ಖಾತೆ ತೆರೆಯದೇ ಹೀನಾಯವಾಗಿ ಸೋತಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 20 =
Remember me
