ನವದೆಹಲಿ:ರಾಷ್ಟ್ರ ರಾಜಧಾನಿಯ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬುದು ಇಂದು ತಿಳಿಯಲಿದೆ. ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದ್ದು, ಮತ ಎಣಿಕೆ ಕಾರ್ಯ ಬೆಳಗ್ಗೆ 8ಕ್ಕೆ ಆರಂಭವಾಗಲಿದೆ.
2015ರಲ್ಲಿ ಅಧಿಕಾರಕ್ಕೆ ಬಂದಿದ್ದ ಆಮ್​ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್​ ಅವರೇ ಮತ್ತೆ ಅಧಿಕಾರ ಪಡೆಯಲಿದ್ದಾರೆ ಎನ್ನುವುದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳ ಸಾರಾಂಶ.
ಚುನಾವಣೆ ಮುಗಿದ ಬಳಿಕ ವಿವಾದವೊಂದು ಕೇಳಿ ಬಂದಿತ್ತು. ಚುನಾವಣಾ ಆಯೋಗವು ಮತದಾನದ ಅಂಕಿ ಅಂಶವನ್ನು ಘೋಷಿಸಲು ತಡ ಮಾಡುತ್ತಿದೆ ಎಂದು ಕೇಜ್ರಿವಾಲ್​ ಆರೋಪಿಸಿದ್ದರು. ಇದಕ್ಕೆ ಚುನಾವಣಾ ಆಯೋಗ ಸಮರ್ಥನೆ ನೀಡಿತ್ತು.
ಇಂದು ನಡೆಯಲಿರುವ ಮತ ಎಣಿಕೆ ಕಾರ್ಯ ಇನ್ನೇನು ಆರಂಭವಾಗಲಿದೆ. ಅದಕ್ಕೂ ಮುನ್ನ ತಿಳಿಯಬೇಕಾದ ಅಂಶಗಳು ಇವು.
1. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಆಪ್​ಗೆ ಬಹುಮತ ಸಿಗಲಿದೆ. 6ಕ್ಕಿಂತ ಹೆಚ್ಚು ಸಮೀಕ್ಷೆಗಳು 70 ಸ್ಥಾನದಲ್ಲಿ 56 ಆಪ್​ ಪಾಲಾಗಲಿವೆ ಎಂದೇ ತಿಳಿಸಿವೆ. ಇನ್ನು ಬಿಜೆಪಿಗೆ 14 ಸ್ಥಾನ ದೊರೆಯಬಹುದು ಎನ್ನುವುದು ಸದ್ಯದ ಲೆಕ್ಕಾಚಾರ.
2. 2015ರ ಫಲಿತಾಂಶ ಮರುಕಳಿಸುತ್ತದೆ ಎನ್ನುವುದು ಆಪ್​ ವಿಶ್ವಾಸ. ಆಗ ಆಪ್​ 70ರಲ್ಲಿ 67 ಸ್ಥಾನ ಪಡೆದಿತ್ತು. ಶಾಲೆಗಳ ಉನ್ನತೀಕರಣ, ಉಚಿತ ನೀರು ಮತ್ತು ವಿದ್ಯುತ್​, ಓಣಿಗೊಂದು ಆಸ್ಪತ್ರೆ ಇವು ಆಪ್​ ಸಾಧನೆಗಳು.
3. ಆಪ್​ ಪಕ್ಷವು 10 ಅಂಶಗಳುಳ್ಳ ಸೌಲಭ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಅವುಗಳ ಈಡೇರಿಕೆಯ ಭರವಸೆ ನೀಡಿತ್ತು.
4. ಲೋಕ ಸಭಾ ಚುನಾವಣೆಯಲ್ಲಿ 7 ಸ್ಥಾನಗಳನ್ನೂ ತನ್ನದಾಗಿಸಿಕೊಂಡತೆ ವಿಧಾನಸಭಾ ಚುನಾವಣೆಯಲ್ಲೂ ಜಯ ದಾಖಲಿಸುವ ಗುರಿಯಿಂದ ಬಿಜೆಪಿ ನಿರಂತರ ಪ್ರಯತ್ನ ನಡೆಸಿತ್ತು. ಕೇಂದ್ರ ಗೃಹ ಸಚಿವ ಖುದ್ದು ಅಖಾಡಕ್ಕಿಳಿದು ಮತ ಯಾಚನೆ ಮಾಡಿದ್ದರು.
5. ರಾಜ್ಯ ಬಿಜೆಪಿ ಮುಖ್ಯಸ್ಥ ಮನೋಜ್​ ತಿವಾರಿ ಪ್ರಕಾರ ಬಿಜೆಪಿ 48 ಸ್ಥಾನ ಗೆದ್ದು ಕೊಳ್ಳಲಿದೆ. ಸಮೀಕ್ಷೆಗಳು ಸುಳ್ಳಾಗಲಿವೆ ಎಂದಿದ್ದಾರೆ.
6. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್​ ನಂತರ ಕಾಂಗ್ರೆಸ್​​ ಸೋತು ಸುಣ್ಣವಾಗಿದೆ. ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಇಲ್ಲಿ ಪ್ರಚಾರ ಮಾಡಿದ್ದರು.
7. ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯನಾಗರಿಕರ ನೋಂದಣಿ ವಿರುದ್ಧದ ಪ್ರತಿಭಟನೆ ಸದ್ದು ದೆಹಲಿಯಲ್ಲಿ ಜೋರಾಗಿತ್ತು. ಈ ನಡುವೆ ಆಪ್​ ಮತ್ತು ಬಿಜೆಪಿ ಮುಖಂಡರು ಪರಸ್ಪರ ಆರೋಪ ಪ್ರತ್ಯಾರೋಪಗಳ ಸುರಿಮಳೆಗೈದಿದ್ದರು.
8. ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು ಹಾಳುಮಾಡಲು ಪ್ರಯತ್ನಿಸಲಾಗಿದೆ ಎಂದು ಶನಿವಾರ ಆಪ್​ ಆರೋಪಿಸಿತ್ತು. ಮತ ಯಂತ್ರಗಳನ್ನು ಅಕ್ರಮವಾಗಿ ತೆಗೆದುಕೊಂಡು ಹೋಗುತ್ತಿದೆ ಎಂದು ಆರೋಪಿಸಿಲಾಗಿತ್ತು. ಆದರೆ ಆಯೋಗ ಈ ಯಂತ್ರಗಳು ಮತದಾನಕ್ಕೆ ಬಳಕೆಯಾಗದವು ಎಂದು ಸ್ಪಷ್ಟಿಕರಣ ನೀಡಿತ್ತು.
9. 2015ರಲ್ಲಿ ಆಪ್​ಗೆ ಶೇ.54.3 ಮತ, ಬಿಜೆಪಿಗೆ ಶೇ.32 ಮತ್ತು ಕಾಂಗ್ರೆಸ್​ ಶೇ.9.6 ಮತ ಪಡೆದಿದ್ದವು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − eight =
Remember me
