ನವದೆಹಲಿ:ಹ್ಯಾಟ್ರಿಕ್​ ಸಾಧನೆಗಾಗಿ ಆಮ್​​ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿಗೆ ಅಭಿನಂದನೆಗಳ ಮಹಾಫೂರವೇ ಹರಿದು ಬರುತ್ತಿದೆ.
ಇಂತಹ ಸಂದೇಶ ಕಳುಹಿಸಿದವರಲ್ಲಿ ಮುಖ್ಯ ಎಂದರೆ ಚುನಾವಣಾ ವಿಶ್ಲೇಷಕ ಪ್ರಶಾಂತ್​ ಕಿಶೋರ್​. ಇವರ ತಂಡ ಆಪ್​ ಗೆಲುವಿಗಾಗಿ ದೆಹಲಿಯಲ್ಲಿ ಕಾರ್ಯ ನಿರ್ವಹಿಸಿತ್ತು.
“ಭಾರತದ ಆತ್ಮ ದೆಹಲಿಯ ಜತೆ ನಿಂತಿದ್ದಕ್ಕೆ ದೆಹಲಿಗೆ ಧನ್ಯವಾದಗಳು” ಎಂದು ಪ್ರಶಾಂತ್​ ಕಿಶೋರ್​ ಟ್ವೀಟ್​ ಮಾಡಿದ್ದಾರೆ.
ಕಿಶೋರ್ ಅವರು ಇತ್ತೀಚಿನವರೆಗೂ ಜೆಡಿಯುನ ನಿತೀಶ್ ಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಬಿಜೆಪಿಯ ಬಗೆಗಿನ ನಿಲುವಿನ ಬಗ್ಗೆ ಪಕ್ಷದ ಮುಖ್ಯಸ್ಥರೊಂದಿಗೆ ಸಾರ್ವಜನಿಕ ಭಿನ್ನಾಭಿಪ್ರಾಯಗಳ ನಂತರ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ವಿಶೇಷವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ವಿಷಯವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು.(ಏಜೆನ್ಸೀಸ್​)
Thank you Delhi for standing up to protect the soul of India!
— Prashant Kishor (@PrashantKishor)February 11, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
