ನವದೆಹಲಿ:ಕರೊನಾ ಸೋಂಕು ತಡೆಗಟ್ಟಲು ದೆಹಲಿಯಲ್ಲಿ ಎಲ್ಲ ಖಾಸಗಿ ಹಾಗೂ ಸರ್ಕಾರಿ ಶಾಲೆಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ತಿಳಿಸಿದ್ದಾರೆ.
ಟ್ಟಿಟ್ಟರ್​ನಲ್ಲಿ ಈ ವಿಷಯ ಪ್ರಕಟಿಸಿರುವ ಅವರು, ನಾಲ್ಕನೇ ಹಂತದ ಕರೊನಾವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಅನಿವಾರ್ಯವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
ಏಪ್ರಿಲ್ 17 ರವರೆಗೆ ಈಗಾಗಲೇ ದೆಹಲಿಯಲ್ಲಿನ ಎಲ್ಲ ಕಾಲೇಜು ಹಾಗೂ ಕೋಚಿಂಗ್ ಸೆಂಟರ್​ಗಳನ್ನು ಮುಚ್ಚಲು ಆದೇಶಿಸಲಾಗಿತ್ತು. ಮುಂದುವರೆದು ಶಾಲೆಗಳನ್ನೂ ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
कोविड के बढ़ते मामलों के कारण, दिल्ली में सभी स्कूल (सरकारी, प्राइवेट सहित), सभी क्लासेज के लिए अगले आदेश तक बंद किए जा रहे हैं।
— Arvind Kejriwal (@ArvindKejriwal)April 9, 2021

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು, ನಾಲ್ಕನೇ ಹಂತದ ಕರೊನಾ ಅಲೆ ತಡೆಗಟ್ಟಲು ಎಲ್ಲ ಯುವಕರಿಗೂ ಲಸಿಕೆ ನೀಡಬೇಕಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಏತನ್ಮದ್ಯೆ ದೆಹಲಿಯಲ್ಲಿ ಗುರುವಾರದ ಅಂತ್ಯಕ್ಕೆ 7437 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, 24 ಜನ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಒಟ್ಟು ಮಾರಕ ಕರೊನಾಕ್ಕೆ ಇದುವರೆಗೆ 11157 ಜನ ಮೃತಪಟ್ಟಿದ್ದಾರೆ.
ಬ್ರಿಟನ್ ಪ್ರಿನ್ಸ್​ ಫಿಲಿಪ್ ಇನ್ನಿಲ್ಲ: ಬಕಿಂಗ್ ಹ್ಯಾಮ್ ಅರಮನೆ ಪ್ರಕಟಣೆ

ರಸಗೊಬ್ಬರ : ಬೆಲೆ ಹೆಚ್ಚಿಸದಿರಲು ಕೇಂದ್ರ ಸರ್ಕಾರದ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
