ನವದೆಹಲಿ:ಇಲ್ಲಿ ಸರ್ಕಾರಿ ಕ್ಯಾನ್ಸರ್​ ಆಸ್ಪತ್ರೆಯ ವೈದ್ಯೆಯೋರ್ವರಿಗೆ ಕರೊನಾ ಸೋಂಕು ತಗುಲಿದ್ದು, ಇಂದು ಇಡೀ ಆಸ್ಪತ್ರೆಯನ್ನೇ ಬಂದ್​ ಮಾಡಲಾಗಿದೆ.
ದೆಹಲಿ ರಾಜ್ಯ ಕ್ಯಾನ್ಸರ್​ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಈ ವೈದ್ಯೆಯ ಸಹೋದರ ಇತ್ತೀಚೆಗಷ್ಟೇ ಬ್ರಿಟನ್​ನಿಂದ ಆಗಮಿಸಿದ್ದರು. ತಮ್ಮ ಸಹೋದರನನ್ನು ಭೇಟಿಯಾಗಿದ್ದ ಕ್ಯಾನ್ಸರ್​ ತಜ್ಞವೈದ್ಯೆಯಲ್ಲಿ ಕರೊನಾ ಈಗ ದೃಢಪಟ್ಟಿದೆ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ತಿಳಿಸಿದ್ದಾರೆ.
ಇವತ್ತು ಆಸ್ಪತ್ರೆಯ ಬಾಗಿಲು ಮುಚ್ಚಲಾಗುವುದು ಮತ್ತು ಸೋಂಕು ನಿವಾರಕಗಳಿಂದ ಸ್ವಚ್ಛಗೊಳಿಸಲಾಗುವುದು. ಸಂಪೂರ್ಣ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ದೆಹಲಿಯ ಮೊಹಲ್ಲಾ ಕ್ಲಿನಿಕ್​​ವೊಂದರ ವೈದ್ಯ ದಂಪತಿ ಹಾಗೂ ಅವರ ಮಗಳಲ್ಲಿ ಕರೊನಾ ವೈರಸ್​ ದೃಢಪಟ್ಟಿದೆ.ಸೌದಿ ಅರೆಬಿಯಾದಿಂದ ಆಗಮಿಸಿದ್ದ ಕರೊನಾ ಸೋಂಕಿತನೋರ್ವನಿಂದ ವೈದ್ಯನಿಗೆ ತಗುಲಿತ್ತು. ಅದಾದ ಬಳಿಕ ಅವರ ಪತ್ನಿ ಮತ್ತು ಮಗಳಲ್ಲಿ ಕರೊನಾ ಪಾಸಿಟಿವ್​ ಎಂದು ವರದಿ ಬಂದಿತ್ತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − three =
Remember me
