ನವದೆಹಲಿ:ಕೋವಿಡ್​-19 ಲಾಕ್​ಡೌನ್​ ತೆರವುಗೊಳಿಸಿ, ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟ ಸಂದರ್ಭದಲ್ಲಿ ಮದ್ಯದ ಮೇಲೆ ವಿಧಿಸಿದ್ದ ಶೇ.70 ಕರೊನಾ ಶುಲ್ಕವನ್ನು ದೆಹಲಿ ಸರ್ಕಾರ ರದ್ದುಗೊಳಿಸಿದೆ. ಈ ನಿರ್ಧಾರ ಜೂನ್​ 10ರಿಂದ (ಬುಧವಾರ) ಜಾರಿಗೆ ಬರಲಿದ್ದು, ಮದ್ಯದ ದರಗಳು ಗಣನೀಯವಾಗಿ ಕಡಿಮೆಯಾಗಲಿವೆ.
ಹೆಚ್ಚುವರಿ ಆದಾಯ ಗಳಿಸುವ ಉದ್ದೇಶದಿಂದ ದೆಹಲಿ ಸರ್ಕಾರ ಮದ್ಯದ ಬಾಟಲಿಯ ಗರಿಷ್ಠ ಮಾರಾಟ ಬೆಲೆಯ (ಎಂಆರ್​ಪಿ) ಮೇಲೆ ಶೇ.70 ಕರೊನಾ ಶುಲ್ಕ ವಿಧಿಸಿತ್ತು. ಆದರೆ ಈಗ ಈ ನಿರ್ಧಾರವನ್ನು ಹಿಂಪಡೆಯಲಾಗಿದ್ದು, ಎಲ್ಲ ವರ್ಗಗಳ ಮದ್ಯದ ಮೇಲೆ ಶೇ.20ರಿಂದ 25 ಮೌಲ್ಯವರ್ಧಿತ ತೆರಿಗೆ (ವ್ಯಾಟ್​) ಅನ್ನು ಹೆಚ್ಚಿಸಲಾಗಿದೆ.
ಭಾನುವಾರ ನಡೆದ ದೆಹಲಿ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದಾಗಿ ಲಾಕ್​ಡೌನ್​ ತೆರವು ನಂತರದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದ ಮದ್ಯದ ಬೆಲೆಗಳಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.
ಕೋಟಿ ವೇತನ ಪಡೆದ ಶಿಕ್ಷಕಿ ನೇಮಕಾತಿಗೆ ಕೊಟ್ಟಿದ್ದಳು 5 ಲಕ್ಷ ರೂ. ಲಂಚ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
