ನವದೆಹಲಿ:ಪ್ರಯಾಣಿಕರ ಕೋವಿಡ್ ತಪಾಸಣೆಯ ವರದಿಗಳನ್ನು ಪರೀಕ್ಷಿಸದ ಕಾರಣಕ್ಕೆ ನಾಲ್ಕು ವಿಮಾನಯಾನ ಸಂಸ್ಥೆಗಳ ಮೇಲೆ ದೆಹಲಿ ಸರ್ಕಾರ ದೂರು ದಾಖಲಿಸಿದೆ.
ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಕೋವಿಡ್ ತಪಾಸಣೆಯ ವರದಿಗಳನ್ನು ನಿರ್ಲಕ್ಷಿಸಿದ್ದ ಇಂಡಿಗೋ, ವಿಸ್ತಾರ್, ಸ್ಪೈಸ್​ಜೆಟ್ ಮತ್ತು ಏರ್ ಏಷಿಯಾ ವಿಮಾನಯಾನ ಸಂಸ್ಥೆಗಳ ಮೇಲೆ ಪ್ರಕರಣ ದಾಖಲಾಗಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ. ಪ್ರಾಕೃತಿಕ ವಿಕೋಪ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದಿಂದ ದೆಹಲಿಗೆ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿತ್ತು. ಪಾಸಿಟಿವ್ ಬಂದವರಿಗೆ 14 ದಿನ ಕ್ವಾರಂಟೈನ್​ಲ್ಲಿ ಇಡಲು ದೆಹಲಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ವಿಮಾನಯಾನ ಸಂಸ್ಥೆಗಳು ಸ್ಪಷ್ಟವಾಗಿ ಉಲ್ಲಂಘಿಸಿವೆ ಎಂದು ಆರೋಪಿಸಲಾಗಿದೆ.
ದೆಹಲಿಯಲ್ಲಿ ಶನಿವಾರ ದಾಖಲೆಯ ಕರೊನಾ ಸೋಂಕಿತರ ಸಂಖ್ಯೆ ಕಂಡು ಬಂದಿದೆ. ಸುಮಾರು 25 ಸಾವಿರ ಜನಕ್ಕೆ ಪಾಸಿಟಿವ್ ಬಂದಿದೆ.
ಕರೊನಾಕ್ಕೆ ಸ್ಯಾಂಡಲ್​ವುಡ್ ನಟ, ನಿರ್ಮಾಪಕ ಬಲಿ

‘ಎಷ್ಟು ಲಸಿಕೆ ಆರ್ಡರ್ ಮಾಡಿದ್ದೀರಿ ?’ – ಮೋದಿಗೆ ಮನಮೋಹನ್​ ಸಿಂಗ್ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + sixteen =
Remember me
