ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕರೊನಾ ವೈರಸ್​ ಹಾವಳಿ ನಿಯಂತ್ರಣಕ್ಕೆ ಬರುತ್ತಿದೆ. ಕಳೆದ ನಾಲ್ಕು ದಿನಗಳಿಂದ 19 ವೈರಸ್​ ಸೋಂಕಿತ ಕೆಂಪು ವಲಯಗಳು ವೈರಸ್​ ಮುಕ್ತ ಹಸಿರು ವಲಯಗಳಾಗಿ ಪರಿವರ್ತನೆಗೊಂಡಿವೆ.
ದೆಹಲಿಯ ಅಧಿಕಾರಿಗಳು ಕರೊನಾ ವೈರಸ್​ ಹರಡುವುದನ್ನು ತಡೆಯಲು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಇದು ಸಾಧ್ಯವಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿಸ್ಪೈಡರ್​ ಮ್ಯಾನ್​ ಆಗೋಕೆ ವಿಷಕಾರಿ ಜೇಡದಿಂದ ಕಚ್ಚಿಸಿಕೊಂಡ ಮಕ್ಕಳು…!
ಆರಂಭದಲ್ಲಿ ವೈರಸ್​ ತೀವ್ರವಾಗಿ ಹರಡುತ್ತಿತ್ತು. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ ನಂತರ ವೈರಸ್​ ಹರಡುವುದು ಕಡಿಮೆಯಾಗಿದೆ.
19 ವಲಯಗಳು ಹಸಿರು ವಲಯಗಳಾಗಿ ಪರಿವರ್ತನೆಗೊಂಡಿದ್ದರೂ ಸರ್ಕಾರ ಲಾಕ್​ಡೌನ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ನಗರದಲ್ಲಿ ಇನ್ನು 90 ಕೆಂಪು ವಲಯಗಳು ಇವೆ. ಅಲ್ಲದೆ ಕೆಲವೊಂದು ಹೊಸ ಸ್ಥಳಗಳಲ್ಲಿ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಯಮ ಪಾಲಿಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ವೈರಸ್​ ಸೋಂಕು ತಗುಲಿರುವ ಪ್ರಕರಣಗಳಲ್ಲಿ ಯಾವುದೇ ಗಂಭೀರತೆ ಇಲ್ಲ. ಹೀಗಾಗಿ ಅಂಥವರನ್ನು ಮನೆಯಲ್ಲೇ ಕ್ವಾರಂಟೈನ್​ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್​ಕೇಜ್ರಿವಾಲ್​ ಹೇಳಿದರು. (ಏಜೆನ್ಸೀಸ್​)
‘ನಿರ್ಮಲಾ ಸೀತಾರಾಮನ್​ ಇಚ್ಛಿಸಿದರೆ ನಾನೂ ಸಿದ್ಧ…’: ರಾಹುಲ್​ ಗಾಂಧಿ ಸವಾಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − six =
Remember me
