ನವದೆಹಲಿ:ಪ್ರತಿ ದಿನವೂ ದೆಹಲಿ ಮೆಟ್ರೋದ ಗಲಾಟೆ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ದಿನವೂ ಯಾರಾದರೂ ಒಬ್ಬರಿಗೊಬ್ಬರು ಜಗಳವಾಡುವುದನ್ನು ಕಾಣಬಹುದು. ಇಬ್ಬರು ಯುವಕರು ಹೊಡೆದಾಡಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ವಿಡಿಯೋದಲ್ಲಿ ಯುವಕರು ಹೇರ್ ಕಟ್ ವಿಚಾರದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಚಪ್ರಿ ಎಂದು ಕರೆದುಕೊಂಡು ಹೊಡೆದಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ? : ಇಬ್ಬರು ಹುಡುಗರು ಮೆಟ್ರೋದಲ್ಲಿ ನಿಂತು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಇಬ್ಬರೂ ಒಬ್ಬರ ಕತ್ತು ಹಿಡ್ಕೊಂಡು ಚಪ್ರಿ ಎಂದು ಪರಸ್ಪರ ಹೇಳಿಕೊಂಡಿದ್ದಾರೆ. ಮೊದಲು ಒಬ್ಬ ಹುಡುಗ ಇನ್ನೊಬ್ಬನನ್ನು ಚಪ್ರಿ ಎಂದು ಕರೆದ. ಮತ್ತೊಬ್ಬ ನೀನು ಹಾಗೆ ಕಾಣ್ತೀಯ ಎಂದು ಹೇಳಿದ್ದಾನೆ. ಆಗ ಉತ್ತರಿಸಿದ ಹುಡುಗ, ನಾನು ಹೇರ್ ಕಟ್ ಮಾಡುವ ಜಾಗದಿಂದ ನಿನ್ನಂಥವರಿಗೆ ಎಂಟ್ರಿಯೂ ಸಿಗುವುದಿಲ್ಲ. ಅಲ್ಲಿ ನಿಮ್ಮಂತಹವರನ್ನು ಗೇಟಿನಿಂದ ಹೊರಗೆ ಹಾಕಲಾಗುತ್ತದೆ ಎಂದ. ಇಬ್ಬರ ಮಧ್ಯೆ ಜಗಳ ಪ್ರಾರಂಭವಾಗುತ್ತದೆ. “ನೀನು ಹೊರಗೆ ಬಾ” ಎನ್ನುತ್ತಾನೆ. ಕೈಕೈಮಿಲಾಯಿಸಿ ಹೊಡೆದುಕೊಳ್ಳುತ್ತಾರೆ. ಅಷ್ಟರಲ್ಲಿ ಅಲ್ಲೇ ಇದ್ದ ಸಹಪ್ರಯಾಣಿಕರು ಜಗಳ ತಡೆಯಲು ಮುಂದಾಗುತ್ತಾರೆ.
A post shared by THE ADULT SOCIETY (@adultsociety)

ವೈರಲ್ ಆಗುತ್ತಿರುವ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ Instagram ನಲ್ಲಿ @Adultsociety ಹೆಸರಿನ ಪುಟದಿಂದ ಹಂಚಿಕೊಳ್ಳಲಾಗಿದೆ. ಲಕ್ಷಗಟ್ಟಲೆ ಜನ ನೋಡಿದ್ದು, 50 ಸಾವಿರಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ಈ ವಿಡಿಯೋಗೆ ಹಲವರು ಕಮೆಂಟ್ ಕೂಡ ಮಾಡಿದ್ದಾರೆ. ಆದರೆ ಈ ಗಲಾಟೆ ಯಾಕೆ ಪ್ರಾರಂಭ ಆಯ್ತು? ಇವರು ಇಬ್ಬರು ಯಾರು ಎನ್ನುವ ಮಾಹಿತಿ ಇಲ್ಲ.
ದೊಡ್ಡ ನಗರಗಳಲ್ಲಿ ಸಣ್ಣ ವಿಷಯಗಳಿಗೆ ಗಲಾಟೆ ನಡೆಯುತ್ತಲೇ ಇರುತ್ತವೆ. ನಾನು ಅವರ ಕ್ಷೌರಿಕ, ಈ ಜನರು ನನ್ನ ಅಂಗಡಿಯಲ್ಲಿ ತಮ್ಮ ಕೂದಲನ್ನು ಕತ್ತರಿಸುತ್ತಾರೆ ಮತ್ತು ಇಬ್ಬರೂ ತುಂಬಾ ದೊಡ್ಡವರು ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
