ನವದೆಹಲಿ:ಜೈಲರ್​ ಸಿನಿಮಾದ ದೃಶ್ಯವೊಂದರಲ್ಲಿ ಸುಪಾರಿ ಕಿಲ್ಲರ್​ ಧರಿಸಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಜರ್ಸಿಯ ದೃಶ್ಯವನ್ನು ತೆಗೆಯುವಂತೆ ಮತ್ತು ಸೆಪ್ಟೆಂಬರ್​ 1ರಿಂದ ಎಲ್ಲ ಚಿತ್ರಮಂದಿರಗಳಲ್ಲಿ ಆ ದೃಶ್ಯವನ್ನು ಪ್ರದರ್ಶನ ಮಾಡದಂತೆ ಜೈಲರ್​ ಸಿನಿಮಾ ತಂಡಕ್ಕೆ ದೆಹಲಿ ಹೈಕೋರ್ಟ್​ ನಿರ್ದೇಶನ ನೀಡಿದೆ.
ಆರ್​ಸಿಬಿ ತಂಡದ ಜೆರ್ಸಿಯನ್ನು ಅವಹೇಳನಕಾರಿಯಾಗಿ ಬಳಸಿದ್ದಕ್ಕಾಗಿ ಚಲನಚಿತ್ರ ನಿರ್ಮಾಪಕರ ವಿರುದ್ಧ ಐಪಿಎಲ್ ತಂಡ, ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಈ ಆದೇಶವನ್ನು ನೀಡಿದ್ದಾರೆ. ಜೈಲರ್​ ಸಿನಿಮಾವನ್ನು ಟಿವಿ, ಸ್ಯಾಟಲೈಟ್​ ಅಥವಾ ಯಾವುದೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡುವುದಕ್ಕೂ ಮೊದಲು ಚಿತ್ರದ ಬದಲಾದ ಆವೃತ್ತಿಯನ್ನು ಹೊಂದಿರಬೇಕು ಎಂದು ಕೋರ್ಟ್​ ಹೇಳಿದೆ.
ಇದನ್ನೂ ಓದಿ:ಹಂಸಲೇಖರಿಂದ ಈ ಬಾರಿಯ ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ ಘೋಷಣೆ, ಹರಕೆ ತೀರಿಸಿದ ಸಿಎಂ, ಡಿಸಿಎಂ
ಜೈಲರ್​ ಚಿತ್ರದಲ್ಲಿ ಕಾಂಟ್ರಾಕ್ಟ್ ಕಿಲ್ಲರ್ ಜರ್ಸಿ ಧರಿಸಿ ಮಹಿಳೆಯ ಬಗ್ಗೆ ಅವಹೇಳನಕಾರಿ ಮತ್ತು ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಅನುಮತಿಯಿಲ್ಲದೆ ತಮ್ಮ ಜೆರ್ಸಿಯನ್ನು ಬಳಸಿದ್ದಲ್ಲದೆ, ಚಿತ್ರದಲ್ಲಿ ನಕಾರಾತ್ಮಕ ಪಾತ್ರಕ್ಕೆ ಜೆರ್ಸಿಯನ್ನು ದುರುಪಯೋಗಪಡಿಸಿಕೊಂಡಿರುವುದರಿಂದ ತಮ್ಮ ಬ್ರ್ಯಾಂಡ್ ಇಮೇಜ್​ಗೆ ಹಾನಿಯಾಗಬಹುದು ಎಂದು ಐಪಿಎಲ್ ತಂಡ ವಾದಿಸಿದೆ.
ಕೋರ್ಟ್​ ಸೂಚನೆ ಬಳಿಕ ಜೈಲರ್​ ಚಿತ್ರದ ನಿರ್ಮಾಪಕರು ಮತ್ತು IPL ತಂಡವು ವಿವಾದವನ್ನು ಬಗೆಹರಿಸಿಕೊಳ್ಳಲು ಮುಂದಾಗಿದೆ. ಜರ್ಸಿಯನ್ನು ಹೊಂದಿರುವ ದೃಶ್ಯಗಳನ್ನು ತೆಗೆದು ಹಾಕಲು ಜೈಲರ್​ ಚಿತ್ರತಂಡ ಒಪ್ಪಿದೆ. ಚಿತ್ರವು ಈಗಾಗಲೇ ಆಗಸ್ಟ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವುದರಿಂದ, ಸೆಪ್ಟೆಂಬರ್ 1ರ ಒಳಗೆ ಚಿತ್ರಮಂದಿರ ಆವೃತ್ತಿಯಲ್ಲಿ ಬದಲಾವಣೆಯನ್ನು ಕೈಗೊಳ್ಳಲಾಗುವುದು ಎಂದು ಸಿನಿಮಾ ತಂಡ ಭರವಸೆ ನೀಡಿದೆ.(ಏಜೆನ್ಸೀಸ್​)
ಶಂಕಿತ ಉಗ್ರ ಜುನೈದ್​ ಸಹಚರನ ಬಂಧನ: ಈತನ ಮೇಲಿವೆ 17 ಕೇಸ್​, ಬಂಧನಕ್ಕೆ ಬಂದಾಗ ಪೊಲೀಸರ ಮುಂದೆ ಹೈಡ್ರಾಮ

ಪ್ರಸಾರ ಹಕ್ಕು ಖರೀದಿಗೆ ತ್ರಿಕೋನ ಸ್ಪರ್ಧೆ: ಭರ್ಜರಿ ಆದಾಯದ ನಿರೀಕ್ಷೆಯಲ್ಲಿ ಬಿಸಿಸಿಐ

ಪತ್ನಿಯ ಮೇಲೆ ಹಲ್ಲೆ ಮಾಡಿ, ಹಿಂಸಿಸುವ ಹಕ್ಕನ್ನು ಯಾವುದೇ ಕಾನೂನು ನೀಡಿಲ್ಲ: ದೆಹಲಿ ಹೈಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − six =
Remember me
