ನವದೆಹಲಿ:ನಿರ್ಭಯಾ ಅತ್ಯಾಚಾರ ಅಪರಾಧಿಗಳ ಮರಣದಂಡನೆ ತಪ್ಪಿಸಿಕೊಳ್ಳುವ ಕೊನೇ ಪ್ರಯತ್ನವೂ ವಿಫಲವಾಗಿದೆ.
ಮರಣದಂಡನೆಗೆ ತಡೆ ನೀಡುವಂತೆ ದೆಹಲಿ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿದ್ದು, ಈ ಹಿಂದಿನ ಆದೇಶದಂತೆ ಮಾ.20ರಂದು ಮುಂಜಾನೆ 5.30ಕ್ಕೆ ಅಪರಾಧಿಗಳಾದ ಅಕ್ಷಯ್​, ಪವನ್​ಗುಪ್ತಾ, ವಿನಯ್​ ಶರ್ಮಾ, ಮುಕೇಶ್ ಸಿಂಗ್ ಗಲ್ಲಿಗೇರಲಿದ್ದಾರೆ.
ಡೆತ್​ವಾರೆಂಟ್​ಗೆ ತಡೆ ನೀಡಿ ಎಂದು ಈ ಮೊದಲು ನಿರ್ಭಯಾ ಅತ್ಯಾಚಾರ ಅಪರಾಧಿಗಳಾದ ಅಕ್ಷಯ್​, ಪವನ್​ ಮತ್ತು ವಿನಯ್​ ದೆಹಲಿ ಪಟಿಯಾಲಾ ಹೌಸ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ವಜಾಗೊಂಡಿತ್ತು. ಅರ್ಜಿ ಮಾನ್ಯ ಮಾಡದ ಪಟಿಯಾಲಾ ಕೋರ್ಟ್​ನ ತೀರ್ಪು ಪ್ರಶ್ನಿಸಿ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದರು.
ಇಂದು ತುರ್ತು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​, ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್​ರನ್ನು ತರಾಟೆಗೆ ತೆಗೆದುಕೊಂಡಿತು. ಸಮಯ ಹಾಳು ಮಾಡುತ್ತಿದ್ದೀರಿ. ನಿಮ್ಮಿಂದಾಗಿ ರಾತ್ರಿ 10 ಗಂಟೆಗೆ ವಿಚಾರಣೆ ನಡೆಸುವ ಪ್ರಸಂಗ ಎದುರಾಯಿತು ಎಂದು ಹೈಕೋರ್ಟ್​ ನ್ಯಾಯಾಧೀಶರು ಎ.ಪಿ.ಸಿಂಗ್​ಗೆ ಹೇಳಿದರು. ಅಷ್ಟೇ ಅಲ್ಲದೆ, ಈ ಪ್ರಕರಣದಕ್ಕೆ ಅಕ್ಷಯ್​ ಕುಮಾರ್​ ಪತ್ನಿ ಸಲ್ಲಿಸಿರುವ ವಿಚ್ಛೇದನಾ ಅರ್ಜಿಯನ್ನು ತಳುಕು ಹಾಕಬೇಡಿ ಎಂದು ಸೂಚನೆ ನೀಡಿದರು.(ಏಜೆನ್ಸೀಸ್​)
ಗಲ್ಲಿಗೇರಲು ಸುಲಭಕ್ಕೆ ಸಿದ್ಧರಾಗುತ್ತಿಲ್ಲ ನಿರ್ಭಯಾ ಅತ್ಯಾಚಾರ ಅಪರಾಧಿಗಳು; ಈಗ ದೆಹಲಿ ಹೈಕೋರ್ಟ್​ಗೆ ಮತ್ತೊಂದು ಅರ್ಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − thirteen =
Remember me
