ನವದೆಹಲಿ:ಕಾಂಗ್ರೆಸ್​ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್​​ ಗಾಂಧಿ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಲು ಗೃಹ ಸಚಿವಾಲಯಕ್ಕೆ (ಎಂಎಚ್‌ಎ) ನಿರ್ದೇಶನ ನೀಡುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಮನವಿಯನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎಂದು ಪರಿಗಣಿಸುವುದಾಗಿ ಹೈಕೋರ್ಟ್​ ಮಂಗಳವಾರ(ಆಗಸ್ಟ್​​ 20) ಹೇಳಿದೆ.
ಇದನ್ನು ಓದಿ:ರಕ್ಷಾಬಂಧನ ಇತಿಹಾಸದ ಪೋಸ್ಟ್​​ ಸಮರ್ಥಿಸಿಕೊಂಡ ಸುಧಾಮೂರ್ತಿ; ಸ್ಪಷ್ಟನೆಯಲ್ಲಿ ಹೇಳಿದಿಷ್ಟು..
ವಿಚಾರಣೆ ಸಮಯದಲ್ಲಿ ನ್ಯಾಯಮೂರ್ತಿ ಸಂಜೀವ್​ ನರುಲಾ ಅವರಿದ್ದ ಪೀಠವು ಸುಬ್ರಮಣಿಯನ್​ ಸ್ವಾಮಿ ಅವರು ರಿಟ್​​ ನಿರ್ದೇಶನಗಳನ್ನು ನೀಡಲು ನ್ಯಾಯಾಲಯವು ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಹಕ್ಕುಗಳನ್ನು ತೋರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದೆ. ಆದರೆ ಈ ವಿಷಯವು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿರುವುದರಿಂದ ಅರ್ಜಿಯ ಸ್ವರೂಪವನ್ನು ಸಾರ್ವಜನಿಕ ಹಿತಾಸಕ್ತಿ ವಿಷಯವಾಗಿ ಮಾತ್ರ ಸಮರ್ಥಿಸಬಹುದು ಎಂದು ಸೂಚಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸುಬ್ರಮಣಿಯನ್​ ಸ್ವಾಮಿ, ನ್ಯಾಯಾಲಯವು ಸೂಕ್ತವೆಂದು ಪರಿಗಣಿಸಿದರೆ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ವಿಶೇಷ ಪೀಠಕ್ಕೆ ವರ್ಗಾಹಿಸಬಹುದು ಎಂದು ಹೇಳಿದರು. ತಮ್ಮ ಕ್ರಮಗಳು ವೈಯಕ್ತಿಕ ಲಾಭಕ್ಕಾಗಿ ಅಲ್ಲ, ರಾಷ್ಟ್ರೀಯ ಕಾಳಜಿಯ ವಿಷಯ ಎಂದು ತಿಳಿಸಿದರು.
ಬ್ರಿಟನ್​​ನಲ್ಲಿ ನೋಂದಾಯಿಸಲಾದ ಬ್ಯಾಕ್​ಆಪ್ಸ್​​ ಲಿಮಿಟೆಡ್​ ಹೆಸರಿನ ಸಂಸ್ಥೆಯ ನಿರ್ದೇಶಕರು ಮತ್ತು ಕಾರ್ಯದರ್ಶಿಗಳಲ್ಲಿ ರಾಹುಲ್​ಗಾಂಧಿ ಕೂಡ ಒಬ್ಬರು. ಸಂಸ್ಥೆಯು 2005 ಅಕ್ಟೋಬರ್​ 10 ಮತ್ತು 2006 ಅಕ್ಟೋಬರ್​ 31ರಂದು ಸಲ್ಲಿಸಿದ ವಾರ್ಷಿಕ ರಿಟರ್ನ್ಸ್​​​ನಲ್ಲಿ ರಾಹುಲ್​ ಗಾಂಧಿ ಅವರು ತಮ್ಮ ರಾಷ್ಟ್ರೀಯತೆಯನ್ನು ಬ್ರಿಟಿಷರು ಎಂದು ಉಲ್ಲೇಖಿಸಿದ್ದಾರೆ. 2009 ಫೆಬ್ರವರಿ 17ರಂದು ಬ್ಯಾಕ್​ಆಪ್ಸ್​​​​ ಲಿಮಿಟೆಡ್​ ಕಂಪನಿಯ ವಿಸರ್ಜನೆಯ ಅರ್ಜಿಯಲ್ಲಿಯೂ ಮತ್ತೆ ಬ್ರಿಟಿಷರು ಎಂದು ಉಲ್ಲೇಖಿಸಿದ್ದಾರೆ. ಇದು ಭಾರತದ ಸಂವಿಧಾನದ 9ನೇ ವಿಧಿ ಮತ್ತು ಭಾರತೀಯ ಪೌರತ್ವ ಕಾಯಿದೆ, 1955 ಅನ್ನು ಉಲ್ಲಂಘಿಸಿದೆ ಎಂದು ಸುಬ್ರಮಣಿಯನ್​ ಸ್ವಾಮಿ ಆರೋಪಿಸಿದ್ದಾರೆ.(ಏಜೆನ್ಸೀಸ್​​)
ನಾನಿನ್ನು ಬದುಕಿದ್ದೇನೆ.. ದಯವಿಟ್ಟು ಈ ರೀತಿ ಮಾಡಬೇಡಿ; ಶ್ರೇಯಸ್​ ತಲ್ಪಾಡೆ ಮನವಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:1 × five =
Remember me
