ನವದೆಹಲಿ:ಮೆಸೇಜಿಂಗ್ ಆ್ಯಪ್​ಗಳ ಪೈಕಿ ಅಡ್ವಾನ್ಸ್ಡ್​ ಎನ್ನುವಂಥ ಫೀಚರ್​ಗಳನ್ನು ಹೊಂದಿರುವಂಥ ಟೆಲಿಗ್ರಾಂ, ಸಂವಹನಕ್ಕೆ ಅತ್ಯುತ್ತಮ ಮಾಧ್ಯಮ ಎಂದರೂ ತಪ್ಪೇನಲ್ಲ. ಆದರೆ ಅದರ ಫೀಚರ್​​ಗಳನ್ನು ದುರ್ಬಳಕೆ ಮಾಡಿಕೊಂಡು ಕೆಲವರು ತಪ್ಪೆಸಗುತ್ತಿರುವುದು ಕೂಡ ನಡೆಯುತ್ತಿದೆ. ಈ ಮಧ್ಯೆ ಟೆಲಿಗ್ರಾಂ ಬಳಕೆದಾರರ ಮಾಹಿತಿ ನೀಡಬೇಕು ದೆಹಲಿ ಹೈಕೋರ್ಟ್​ ಟೆಲಿಗ್ರಾಂ ಸಂಸ್ಥೆಗೆ ಸೂಚನೆ ನೀಡಿದೆ.
ಈಗಲೂ ಸಿನಿಮಾಗಳ ಪೈರಸಿ ಕಾಪಿಗಳನ್ನು ನೋಡಲು ಕೆಲವರು ಟೆಲಿಗ್ರಾಂ ಮೊರೆ ಹೋಗುತ್ತಾರೆ. ಸಿನಿಮಾ ಮಾತ್ರವಲ್ಲದೆ ಇನ್ನೂ ಕೆಲವು ಕಾಪಿರೈಟ್ ಉಲ್ಲಂಘನೆ ಆಗುವಂಥ ಕಂಟೆಂಟ್​​ಗಳನ್ನು ಹಾಕಿರುತ್ತಾರೆ. ಇಂಥ ಅಕ್ರಮಗಳು ಟೆಲಿಗ್ರಾಂ ಚಾನೆಲ್​ಗಳಲ್ಲಿ ಪೋಸ್ಟ್ ಆಗುತ್ತಿದ್ದು, ಹಲವರು ಅದನ್ನು ಬಳಸಿಕೊಳ್ಳುತ್ತಿದ್ದರು. ಇಂಥದ್ದೇ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ನಿರ್ದೇಶನ ನೀಡಿದೆ.
ದೆಹಲಿಯ ಕೆ.ಡಿ. ಕ್ಯಾಂಪಸ್ ಪ್ರೈವೇಟ್​ ಲಿ. ಶಿಕ್ಷಕಿ ನೀತು ಸಿಂಗ್ ತಾವು ತಯಾರಿಸಿರುವ ಸ್ಟಡಿ ಮೆಟಿರೀಯಲ್​ಗಳನ್ನು ಟೆಲಿಗ್ರಾಂ ಚಾನೆಲ್​ಗಳಲ್ಲಿ ಅನಧಿಕೃತವಾಗಿ ಹಾಕಿಕೊಳ್ಳಲಾಗಿದೆ. ಇದು ಕಾಪಿರೈಟ್ ಉಲ್ಲಂಘನೆ ಎಂದು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್​ನಲ್ಲಿ ವಿಚಾರಣೆ ನಡೆದಿದ್ದು, ಅಂಥ ಕಂಟೆಂಟ್​ಗಳನ್ನು ಹಾಕುವವರ ಮಾಹಿತಿ ನೀಡುವಂತೆ ಕೋರ್ಟ್ ನಿರ್ದೇಶಿಸಿದೆ.
ಆದರೆ ನಮ್ಮ ಸರ್ವರ್ ಸಿಂಗಾಪುರದಲ್ಲಿದೆ ಎಂದು ಟೆಲಿಗ್ರಾಂ ಕೊಡಲು ನಿರಾಕರಿಸಿದ್ದರೂ, ಭಾರತದಲ್ಲಿ ಇಲ್ಲಿನ ಕಾನೂನಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಿರುವ ಹೈಕೋರ್ಟ್ ನ್ಯಾಯಾಧೀಶೆ ಪ್ರತಿಭಾ ಎಂ. ಸಿಂಗ್​, ಅಂಥವರ ಮಾಹಿತಿ ನೀಡಬೇಕು ಎಂದು ಟೆಲಿಗ್ರಾಮ್​ಗೆ ನಿರ್ದೇಶನ ನೀಡಿದ್ದಾರೆ.
ಭದ್ರತೆಗೆ ನಿಯೋಜಿಸಿದ್ದ ಸಿಐಎಸ್​ಎಫ್​ ಯೋಧ ಪಿಸ್ತೂಲ್​-ಗುಂಡುಗಳ ಸಮೇತ ನಾಪತ್ತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − seventeen =
Remember me
