ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಕರೊನಾ ಸೋಂಕಿತರನ್ನು ದಾಖಲು ಮಾಡಿಕೊಳ್ಳಲು ಆಸ್ಪತ್ರೆಗಳು ಹಿಂದೇಟು ಹಾಕುತ್ತಿವೆ ಎಂಬ ವ್ಯಾಪಕ ಆಕ್ರೋಶದ ಮಧ್ಯೆ ದಿಲ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ವಾಲಿ ಅಖ್ತರ್ ನಾದ್ವಿ ಇಂಥದ್ದೇ ಕಾರಣದಿಂದ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.
ವಿವಿಯ ಅರೇಬಿಕ್ ವಿಭಾಗದ ಉಪನ್ಯಾಸಕರಾಗಿದ್ದ ಅಖ್ತರ್‌ಗೆ ಜೂನ್ 2ರಂದು ಕರೊನಾ ಲಕ್ಷಣಗಳು ಕಂಡುಬಂದಿದ್ದವು. ಆದರೆ, ಇಲ್ಲಿನ ಹೋಲಿ ಫ್ಯಾಮಿಲಿ, ಮೂಲ್ ಚಂದ್, ಬನ್ಸಾಲ್ ಹಾಸ್ಪಿಟಲ್, ಫೋರ್ಟಿಸ್ ಆಸ್ಪತ್ರೆ ಸೇರಿ 6 ಪ್ರತಿಷ್ಠಿತ ಆಸ್ಪತ್ರೆಗಳು ಅವರನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದವು.
ಕೆಲವು ಆಸ್ಪತ್ರೆಗಳು ಬೆಡ್ ಕೊರತೆಯಿದೆ ಎಂದರೆ, ಮತ್ತೆ ಕೆಲವು ಜ್ವರ ಎಂದ ಮಾತ್ರಕ್ಕೆ ದಾಖಲು ಮಾಡಿಕೊಳ್ಳಲಾಗುವುದಿಲ್ಲ ಎಂದು ಸಬೂಬು ನೀಡಿದವು. ಅಂತಿಮವಾಗಿ, ಜೂನ್ 9ರಂದು ಜಾಮಿಯಾ ನಗರದಲ್ಲಿದ್ದ ಆಸ್ಪತ್ರೆಯೊಂದಕ್ಕೆ ಅವರನ್ನು ದಾಖಲು ಮಾಡಲಾಯಿತು. ತಕ್ಷಣವೇ ಕರೊನಾ ಪರೀಕ್ಷೆ ನಡೆಸಿ, ಸಂಜೆ 4 ಗಂಟೆಗೆ ಕರೊನಾ ಸೋಂಕಿರುವುದು ದೃಢ ಎಂದು ವರದಿ ನೀಡಲಾಯಿತು. ಆದರೆ, ತಡವಾಗಿ ದಾಖಲಾಗಿದ್ದರಿಂದ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಮತ್ತು ಸಂಜೆ 6,30ಕ್ಕೆ ಮೃತಪಟ್ಟರು ಎಂದು ಅಖ್ತರ್ ಕುಟುಂಬ ತಿಳಿಸಿದೆ.
ದೆಹಲಿ ಮತ್ತು ಕೇಂದ್ರ ಸರ್ಕಾರಗಳಿಗೆ ಇಲ್ಲಿನ ಆಸ್ಪತ್ರೆಗಳ ಮೇಲೆ ಹಿಡಿತವೇ ಇಲ್ಲದಂತಾಗಿದೆ. ಇಲ್ಲಿ ಆರೋಗ್ಯ ವ್ಯವಸ್ಥೆ ಸಮರ್ಪಕವಾಗಿದೆ ಎಂದು ದೆಹಲಿ ಸರ್ಕಾರ ಬರೀ ಸುಳ್ಳು ಹೇಳುತ್ತಿದೆ ಎಂದು ಅಖ್ತರ್ ಸೋದರ ಜಮೀಲ್ ಅಖ್ತರ್ ಕಿಡಿ ಕಾರಿದ್ದಾರೆ. ಆಸ್ಪತ್ರೆಗಳು ಅಖ್ತರ್‌ರನ್ನು ಸೂಕ್ತ ಸಮಯಕ್ಕೆ ದಾಖಲಿಸಿಕೊಳ್ಳಲಿಲ್ಲ. ಹೀಗಾಗಿಯೇ ನಾವು ಅವರನ್ನು ಕಳೆದುಕೊಂಡಿದ್ದೇವೆ ಎಂದು ದೆಹಲಿ ವಿವಿಯ ಟೀಚರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಡಾ. ಆದಿತ್ಯ ನಾರಾಯಣ್ ಮಿಶ್ರಾ ಆರೋಪಿಸಿದ್ದಾರೆ.
ಕರೊನಾ ರೋಗಿಗಳನ್ನು ಪ್ರಾಣಿಗಳಂತೆ ಕಾಣಬೇಡಿ: ಕೇಜ್ರಿವಾಲ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − nine =
Remember me
