ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ಜಲ ಮಂಡಳಿ ಪ್ರಧಾನ ಕಚೇರಿಯ ಮೇಲೆ ಗುರುವಾರ ಗೂಂಡಾಗಳು ದಾಳಿ ನಡೆಸಿದ್ದು, ದರೋಡೆ ಮಾಡಿದ್ದಾರೆ. ಈ ಕೃತ್ಯವನ್ನು ಬಿಜೆಪಿಯ ಗೂಂಡಾಗಳೇ ನಡೆಸಿದ್ದಾರೆ ಎಂದು ಆಡಳಿತದಲ್ಲಿರುವ ಆಮ್​ ಆದ್ಮಿ ಪಕ್ಷದ ನಾಯಕರು ದೂರಿದ್ದಾರೆ.
ಇದನ್ನೂ ಓದಿ:ತಿಮ್ಮಪ್ಪನ ಸನ್ನಿಧಿಗೆ ಹಿಂದೂ ಮಹಿಳೆಯನ್ನು ಬೆನ್ನ ಮೇಲೆ ಹೊತ್ತೊಯ್ದ ಮುಸ್ಲಿಂ ಯೋಧ!
ಎಎಪಿ ಶಾಸಕ ಮತ್ತು ಡಿಜೆಬಿ ಉಪಾಧ್ಯಕ್ಷ ರಾಘವ್ ಚಾಧಾ ದರೋಡೆಯಾಗಿರುವ ಕಚೇರಿಯ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಕಚೇರಿಯ ಕಿಟಕಿ, ಬಾಗಿಲನ್ನು ಮುರಿದು ಹಾಕಲಾಗಿದೆ. ಗಾಜನ್ನು ಒಡೆಯಲಾಗಿದೆ. ಕಚೇರಿಯನ್ನು ದರೋಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಗುರುವಾರ ಬೆಳಗ್ಗೆ ಸುಮಾರು 100 ಜನರ ಗುಂಪು ಕಚೇರಿಗೆ ನುಗ್ಗಿದ್ದು, ಗಾಜನ್ನೆಲ್ಲ ಪುಡಿ ಪುಡಿ ಮಾಡಿದೆ. ಕಿಟಕಿ, ಬಾಗಿಲು ಒಡೆದು, ಕಚೇರಿಯೊಳಗೆ ನುಗ್ಗಿದ್ದಾರೆ. ಪೊಲೀಸರು ತಡೆಯುವ ಪ್ರಯತ್ನ ಮಾಡಿದರೂ ಬಗ್ಗದ, ಗೂಂಡಾಗಳು ಪೊಲೀಸರನ್ನು ತಳ್ಳಿಕೊಂಡು ಒಳಗೆ ನುಗ್ಗಿದ್ದಾರೆ. ಇದು ಬಿಜೆಪಿಯ ಗೂಂಡಾಗಳದ್ದೇ ಕೆಲಸ. ದರೋಡೆಗೆ ಬಂದವರು, ಕೇಜ್ರಿವಾಲ್​ ಅವರು ಹೋರಾಟ ನಿರತ ರೈತರಿಗೆ ಬೆಂಬಲವನ್ನು ಮುಂದುವರಿಸಿದರೆ ಇನ್ನಷ್ಟು ಕಚೇರಿಗಳನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಎಪಿ ನಾಯಕರು ದೂರಿದ್ದಾರೆ.
ಇದನ್ನೂ ಓದಿ:VIDEO| ಮಮತಾ ಬ್ಯಾನರ್ಜಿ ಮಸ್ತ್​ ಡ್ಯಾನ್ಸ್​! ವೇದಿಕೆ ಮೇಲೆ ಕುಣಿದು ರಂಜಿಸಿದ ದೀದಿ
ಈ ವಿಚಾರವಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರು ಟ್ವೀಟ್​ ಮಾಡಿದ್ದು, ‘ನನ್ನ ಸರ್ಕಾರ ಮತ್ತು ನಾನು, ಕೊನೆಯುಸಿರಿರುವವರೆಗೂ ರೈತರಿಗೆ ಬೆಂಬಲ ನೀಡುತ್ತೇವೆ. ಇಂತಹ ಹೇಡಿತನದ ದಾಳಿಗೆ ನಾವು ಹೆದರುವುದಿಲ್ಲ.’ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
BJP goons have attacked the@DelhiJalBoardheadquarters. My entire office has been vandalized. Staff has been threatened.pic.twitter.com/iEwhaGBYRB
— Raghav Chadha (@raghav_chadha)December 24, 2020

ಪತಿಗೆ ನನ್ನಲ್ಲಿ ಆಸಕ್ತಿಯಿಲ್ಲ- ಮಕ್ಕಳಾಗದ್ದಕ್ಕೆ ಅತ್ತೆ ನನ್ನನ್ನು ಹೀಯಾಳಿಸುತ್ತಿದ್ದಾರೆ… ಕುಗ್ಗಿ ಹೋಗಿದ್ದೇನೆ…

ಮನೆಗೆ ಕರೆಸಿಕೊಂಡು ಬಟ್ಟೆ ಬಿಚ್ಚಿಸುತ್ತಿದ್ದ! ಬಾಲಕನ ಮೇಲೆ ಬಾಲಕನಿಂದಲೇ ನಡೆಯುತ್ತಿತ್ತು ಲೈಂಗಿಕ ದೌರ್ಜನ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + fourteen =
Remember me
