ನವದೆಹಲಿ:ಇಂಡಿಯನ್​ ಆಯಿಲ್​ ಕಾರ್ಪೊರೇಷನ್ (ಐಒಸಿಎಲ್​)​ ಪೈಪ್​ಲೈನ್​ನಿಂದ ಇಂಧನ ಕದಿಯುತ್ತಿದ್ದ ಖದೀಮನನ್ನು ದೆಹಲಿಯ ದ್ವಾರಕ ಪೊಲೀಸರು ಶುಕ್ರವಾರ ಬಂಧನ ಮಾಡಿದ್ದಾರೆ.
ಬಂಧಿತನನ್ನು ರಾಕೇಶ್​ (52) ಎಂದು ಗುರುತಿಸಲಾಗಿದೆ. ಸುರಂಗವನ್ನು ತೋಡಿ ಪೈಪ್​ಲೈನ್​ಗೆ ಯಂತ್ರವನ್ನು ಅಳವಡಿಸಿ ಇಂಧನವನ್ನು ಕದಿಯುತ್ತಿದ್ದದ್ದು ಬೆಳಕಿಗೆ ಬಂದಿದೆ.
ಐಒಸಿಎಲ್ ಅಕ್ಟೋಬರ್ 4 ರಂದು ದೂರು ದಾಖಲಿಸಿದ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಸೆ. 29 ರಂದು ತಪಾಸಣೆ ನಡೆಸುವಾಗ ದೆಹಲಿ-ಪಾಣಿಪತ್ ವಿಭಾಗದ ಪೈಪ್‌ಲೈನ್​ನಿಂದ ತೈಲ ಕಳ್ಳತನ ಮಾಡಲಾಗುತ್ತಿದೆ. ಪೊಚಂಪುರ್​ ಗ್ರಾಮದಲ್ಲೇ ಕಳ್ಳತನ ನಡೆಯುತ್ತಿರಬಹುದು ಎಂದು ಐಒಸಿಎಲ್​ ದೆಹಲಿ ಪೊಲೀಸರಿಗೆ ದೂರು ನೀಡಿತ್ತು.
ಇದನ್ನೂ ಓದಿ:ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಕೋತಿ: ಅಚ್ಚುಕಟ್ಟಾಗಿ ತಿಥಿ ಕಾರ್ಯ ಮಾಡಿದ ಗ್ರಾಮಸ್ಥರು ಕೊಟ್ಟ ಕಾರಣ ಇದು…!
ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸ್ಥಳ ಪರಿಶೀಲನೆಗೆಂದು ಬಂದಾಗ ಪೈಪ್​ಲೈನ್​ನಿಂದ ಸುಮಾರು 40 ಮೀಟರ್​ ದೂರದಲ್ಲಿರುವ ಭೂಮಿಯಲ್ಲಿ ಸುರಂಗ ಕೊರೆದು ಎರಡು ಪ್ಲ್ಯಾಸ್ಟಿಕ್​ ಪೈಪ್​ಗಳನ್ನು ಅಳವಡಿಸಿರುವುದು ಪೊಲೀಸರಿಗೆ ತಿಳಿಯಿತು. ಸುರಂಗ ಕೊರೆದ ಜಾಗ ರಾಕೇಶ್ (52) ಅವರಿಗೆ ಸೇರಿದ್ದು ಎಂಬುದು ಗೊತ್ತಾದ ಬಳಿಕ ಆತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.
ಪೆಟ್ರೋಲಿಯಂ ಮತ್ತು ಮಿನರಲ್ಸ್ ಪೈಪ್‌ಲೈನ್ಸ್ (ಭೂಮಿಯಲ್ಲಿ ಬಳಕೆದಾರರ ಹಕ್ಕು ಸ್ವಾಧೀನ) ತಿದ್ದುಪಡಿ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ, ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆ, ಅಗತ್ಯ ಸರಕುಗಳ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ರಾಕೇಶ್​ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದ್ದು, ಪೊಲೀಸರು ರಾಕೇಶ್​ ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಟೆಲ್ ಅವಿವ್‌ನಲ್ಲಿ 5000 ರಾಕೆಟ್‌ ಹಾರಿಸಿದ ಹಮಾಸ್, ಯುದ್ಧ ಸ್ಥಿತಿ ಘೋಷಿಸಿದ ಇಸ್ರೇಲ್

VIDEO| ಮುಂಬೈನ ಬೀದಿಗಳಲ್ಲಿ ಹಣದ ಮಳೆ ಸುರಿಸಿದ ಫ್ಲಿಪ್​ಕಾರ್ಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
