ಮನಾಲಿ:ಹೋಟೆಲ್​​ವೊಂದರಲ್ಲಿದ್ದ ಪತ್ನಿ ಹಾಗೂ ಪ್ರಿಯಕರನ ಮೇಲೆ ಗುಂಡು ಹಾರಿಸಿದ ವ್ಯಕ್ತಿ, ನಂತರ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಡೆದಿದೆ.
ಪ್ರಿಯಕರನ ಜತೆ ಮನಾಲಿ ಪ್ರವಾಸಕ್ಕೆಂದು ಪತ್ನಿ ಬಂದಿರುವ ಬಗ್ಗೆ ಮಾಹಿತಿ ತಿಳಿದ ದೆಹಲಿ ಮೂಲದ ವ್ಯಕ್ತಿ, ಗನ್​ ತೆಗೆದು ತಾನೂ ಮನಾಲಿ ಪ್ರವಾಸ ಕೈಗೊಂಡಿದ್ದಾನೆ. ಇಬ್ಬರು ಇರುವ ಹೋಟೆಲ್​ ಮಾಹಿತಿಯನ್ನು ಪಡೆದುಕೊಂಡಿದ್ದಾನೆ.
ಶುಕ್ರವಾರ ಬೆಳಗ್ಗೆಯೇ ಇಬ್ಬರು ಇರುವ ಕೊಠಡಿಗೆ ನುಗ್ಗಿದ ವ್ಯಕ್ತಿ ಏಕಾಏಕಿ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಆಕೆಯ ಪ್ರಿಯಕರ ಸಾವನ್ನಪ್ಪಿದ್ದು, ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಇತ್ತ ವ್ಯಕ್ತಿಯೂ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಈ ಬಗ್ಗೆ ಎಲ್ಲಾ ರೀತಿಯಲ್ಲೂ ತನಿಖೆ ಕೈಗೊಳ್ಳಲಾಗುತ್ತಿದ್ದು, ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಮನಾಲಿ ಡಿಎಸ್​ಸಿ ಹೇಮ್​​ ರಾಜ್​ ವರ್ಮಾ ತಿಳಿಸಿದ್ದಾರೆ.(ಏಜೆನ್ಸೀಸ್​)
ಶರದ್​ ಪವಾರ್​ ವಿರುದ್ಧದ ಫೇಸ್​​ಬುಕ್​ ಪೋಸ್ಟ್​: ಮರಾಠಿ ನಟಿಗೆ ಕೊನೆಗೂ ಸಿಕ್ತು ಜಾಮೀನು

ರಾಷ್ಟ್ರಪತಿ ಚುನಾವಣೆ: ಪ್ರಧಾನಿ ಮೋದಿ ಸಮ್ಮುಖದಲ್ಲಿ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮರ್ಮು ಅವರಿಂದ ನಾಮಪತ್ರ ಸಲ್ಲಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − three =
Remember me
