ಆಗ್ರಾ:ಮನೆಯೊಂದರಲ್ಲಿ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದ ಕಳ್ಳ ತಿಂಗಳ ಬಳಿಕ ಟ್ರಾವೆಲ್​ ಬ್ಲಾಗ್​​ ಮೂಲಕ ಸಿಕ್ಕಿ ಹಾಕಿಕೊಂಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿ ನಡೆದಿದೆ.
ಇದನ್ನೂ ಓದಿ:ಕೋಚಿಂಗ್​ ಸೆಂಟರ್​ ಶಿಕ್ಷಕನಿಗೆ ನಡುರಸ್ತೆಯಲ್ಲೇ ಇರಿದು ಪೊಲೀಸರಿಗೆ ಶರಣಾದ ವಿದ್ಯಾರ್ಥಿ..!
ಬಿಂದಾಪುರದ ನಿವಾಸಿಯಾಗಿರುವ ಸಂಜೀವ್ (29) ಎಂಬಾತನೇ ಕಳ್ಳತನ ಮಾಡಿರುವ ಆರೋಪಿಯಾಗಿದ್ದು, ಈತ ದೆಹಲಿಯ ಮನೆಯೊಂದರಲ್ಲಿ ಶುಕ್ರವಾರದಂದು ಕಳ್ಳತನ ಮಾಡಿದ್ದ. ತಮ್ಮ ಮನೆಯಿಂದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಮನೆ ಮಾಲೀಕರು ದೂರು ನೀಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಾಗಿ ಶೋಧ ನಡೆಸುತ್ತಿದ್ದರು.
ತನಿಖೆಯ ಸಮಯದಲ್ಲಿ, ಪೊಲೀಸರು ಹತ್ತಿರದ ಸ್ಥಳಗಳ ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಿಸಿದ್ದು, ಆರೋಪಿಯು ದೂರುದಾರರ ಮನೆಯಿಂದ ಹೊರಹೋಗುತ್ತಿರುವುದು ಕಂಡುಬಂದಿದೆ. ಆದರೆ ಅಧಿಕಾರಿಗಳು ಆತನ ಲೊಕೇಶನ್​ನನ್ನು ಪತ್ತೆ ಹಚ್ಚಲು ಮುಂದಾಗಿದ್ದು, ಆತನ ಕೊನೆಯ ಸ್ಥಳವನ್ನು ಉತ್ತರಾಖಂಡದ ಹರಿದ್ವಾರದಲ್ಲಿ ಎಂದು ತೋರಿಸಿದೆ. ಅಲ್ಲದೇ, ಆರೋಪಿಯು ತನ್ನನ್ನು ಯಾರೂ ಟ್ರ್ಯಾಕ್​ ಮಾಡಬಾರದು ಎಂದು ಪೋನ್​ ಆಫ್​ ಮಾಡುತ್ತಿದ್ದನು.
ಇದನ್ನೂ ಓದಿ:ಉಚಿತ ಕೋಳಿ ನೀಡುವಂತೆ ಪಟ್ಟು: ನಿರಾಕರಿಸಿದವನಿಗೆ ಮನಬಂದಂತೆ ಚಪ್ಪಲಿಯಿಂದ ಥಳಿತ
ಏತನ್ಮಧ್ಯೆ, ಆರೋಪಿಯು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಯಾಣದ ವೀಡಿಯೊಗಳನ್ನು ಅಪ್ಲೋಡ್ ಮಾಡುವುದನ್ನು ಮಾತ್ರ ಬಿಟ್ಟಿರಲಿಲ್ಲ. ಆತ ಪೋಲಿಸರು ತನಿಖೆಯ ದಿಕ್ಕುತಪ್ಪಿಸಲು ಕೇರಳದ ಕಪ್ಪಂಗೆ ತಲುಪಿ ಟ್ರಾವೆಲಿಂಗ್​ ಪೋಸ್ಟ್​​ ಹಾಕಿದ್ದಾನೆ. ಬಳಿಕ ಅಧಿಕಾರಿಗಳ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಆರೋಪಿಯು ತಾನು ದುಬೈಗೆ ಕೆಲಸದ ನಿಮಿತ್ತ ಹೋಗುತ್ತಿರುವುದಾಗಿ ತನ್ನ ವಿಡಿಯೋದಲ್ಲಿ ಹೇಳಿದ್ದಾನೆ.
ಕೊನೆಗೆ ಸ್ವಲ್ಪ ಸಮಯದ ನಂತರ, ಸಂಜೀವ್ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿ ಅದರಲ್ಲಿ ತಾನು, ಉತ್ತರ ಪ್ರದೇಶದ ಆಗ್ರಾದಲ್ಲಿದ್ದೇನೆ ಎಂದು ಹೇಳಿದ್ದಾನೆ. ಈತನ ಜಾಲವನ್ನು ಅರಿತ ಅಧಿಕಾರಿಗಳು ಕೂಡಲೇ ವೀಡಿಯೊ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತ ಇ-ರಿಕ್ಷಾ ಮೂಲಕ ಆಗ್ರಾದ ಈದ್ಗಾ ರಸ್ತೆಯಡೆಗೆ ಹೋಗಿದ್ದು ತಿಳಿದು ಬಂದಿದೆ. ಕೂಡಲೇ ಪೊಲೀಸರು ಆಗ್ರಾ ತಲುಪಿ ಈದ್ಗಾ ರಸ್ತೆಯಲ್ಲಿರುವ ಎಲ್ಲಾ ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ರೈಲು ಟಿಕೆಟ್‌ ರದ್ದುಗೊಳಿಸಲು ಹೋಗಿ 4 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಹಿರಿಯ ನಾಗರಿಕಯುವಕನು ಅಪರಾಧ ಮಾಡಿದ ನಂತರ ಜೀವನ್ ಪಾರ್ಕ್‌ನಲ್ಲಿರುವ ಚಿನ್ನದ ಸಾಲದ ಅಂಗಡಿಗೆ ಹೋಗಿ ಚಿನ್ನವನ್ನು ಸಂಜೀವ್ ಮಲಿಕ್​ ಎಂಬಾತನಿಗೆ ಮಾರಾಟ ಮಾಡಿದ್ದ. ಪೊಲೀಸ್ ತಂಡವು ಅಂಗಡಿಗೆ ಭೇಟಿ ನೀಡಿದಾಗ, ಆರೋಪಿಗಳು ಎರಡು ಚಿನ್ನದ ಉಂಗುರಗಳನ್ನು ಇಟ್ಟುಕೊಂಡು 20,000 ರೂಪಾಯಿಗಳನ್ನು ಸಾಲವಾಗಿ ಪಡೆದಿರುವುದು ಕಂಡುಬಂದಿದೆ. ಅಲ್ಲದೇ, ಈ ಪ್ರಕರಣದ ಭಾಗವಾಗಿ ಅಬ್ದುಲ್ ಮಲಿಕ್ (65)ನನ್ನು ಕೂಡ ಬಂಧಿಸಲಾಗಿದ್ದು, ಆತನ ಬಳಿಯಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
