ದೆಹಲಿ:ಇಲ್ಲೊಬ್ಬ ಭೂಪ ಪತ್ನಿ ಮೇಲಿನ ಕೋಪಕ್ಕೆ 2 ವರ್ಷದ ಮಗುವನ್ನ ಮೊದಲ ಮಹಡಿಯಿಂದ ಕೆಳಕ್ಕೆ ಎಸೆದು, ಬಳಿಕ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಂದೆ-ಮಗು ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಇಂತಹ ಘಟನೆ ದೆಹಲಿಯ ಕಲ್ಕಾಜಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಮಾನ್ ಸಿಂಗ್ ಆತ್ಮಹತ್ಯೆಗೆ ಯತ್ನಿಸಿದವ. ಪೂಜಾ ಎಂಬಾಕೆ ಜತೆ ಮಾನ್​ಸಿಂಗ್​ ನಾಲ್ಕು ವರ್ಷದ ಹಿಂದೆ ಮದುವೆ ಆಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿಗೆ ದಂಪತಿ ನಡುವೆ ಕೌಟುಂಬಿಕ ಕಹಲ ಉಂಟಾಗಿತ್ತು. ಬೇಸತ್ತ ಪತ್ನಿ, ಕೆಲ ದಿನಗಳಿಂದ ತನ್ನ ಅಜ್ಜಿಯ ಮನೆಯಲ್ಲಿ ಮಕ್ಕಳೊಂದಿಗೆ ವಾಸವಿದ್ದಳು.
ಪತ್ನಿಯನ್ನು ಕರೆದೊಯ್ಯಲು ಬಂದ ಶುಕ್ರವಾರ ಸಂಜೆ ಬಂದ ಮಾನ್​ಸಿಂಗ್​, ಪತ್ನಿ ಜತೆ ವಾಗ್ವಾದ ನಡೆಸಿದ್ದ. ಈತ ಕುಡಿದು ಬಂದಿದ್ದರಿಂದ ಮತ್ತಷ್ಟು ಬೇಸತ್ತ ಪತ್ನಿ, ವಾಪಸ್​ ಬರಲು ಒಪ್ಪಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಕುಡಿದ ಅಮಲಿನಲ್ಲಿ ತನ್ನ 2 ವರ್ಷದ ಮಗುವನ್ನ ಮೊದಲ ಮಹಡಿಯಿಂದ ಕೆಳಗ್ಗೆ ಎಸೆದಿದ್ದಾನೆ. ಬಳಿಕ ಮೂರನೇ ಮಹಡಿಗೆ ಓಡಿಹೋಗಿ ಅಲ್ಲಿಂದ ಜಿಗಿದು ಸಾಯಲು ಯತ್ನಿಸಿದ್ದಾನೆ. ಏನೂ ಅರಿಯದ ಪುಟ್ಟ ಮಗು ಗಂಡ-ಹೆಂಡತಿಯ ಜಗಳಕ್ಕೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಮಗುವನ್ನ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮನ್​ ಸಿಂಗ್​ನನ್ನು ಎಐಐಎಂಎಸ್ ಟ್ರಾಮಾ ಸೆಂಟರ್​ಗೆ ಸ್ಥಳಾಂತರಿಸಲಾಗಿದೆ. (ಏಜೆನ್ಸೀಸ್​)
ಅವತಾರ್​-2 ಸಿನಿಮಾ ನೋಡುತ್ತಿರುವಾಗಲೇ ಹೃದಯಾಘಾತ: ಥಿಯೇಟರ್​ನಲ್ಲಿ ಪ್ರೇಕ್ಷಕ ಸಾವು

ದಾವಣಗೆರೆ ಮೂಲದ ನವದಂಪತಿ ಬಾಳಲ್ಲಿ ದುರಂತ: ಸ್ಟ್ರೆಚರ್​​ನಲ್ಲಿ ಮಲಗಿಕೊಂಡೇ ಶವಗಾರಕ್ಕೆ ಬಂದು ಗಂಡನ ಮುಖ ಸವರಿದ ಪತ್ನಿ… ಮನಕಲಕುತ್ತೆ ಈ ಸ್ಟೋರಿ

ನಿಮ್ಮನ್ನು ನೋಡ್ಬೇಕು ಬನ್ನಿ ಎಂದು ಗೋಗರೆದರೂ ಹಾಸ್ಟೆಲ್​ಗೆ ಬಾರದ ಅಪ್ಪ-ಅಮ್ಮ… ಬೆಂಗಳೂರಲ್ಲಿ ಬಿಇ ವಿದ್ಯಾರ್ಥಿ ದುರಂತ ಅಂತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + fifteen =
Remember me
