ನವದೆಹಲಿ:ಯುವಕನೊಬ್ಬನನ್ನು ಕೊಲೆ ಮಾಡಿ ದೇಹವನ್ನು 8 ತುಂಡಾಗಿಸಿದ ಪಾತಕಿಗಳು, ಕೊಲೆಯ ವಿಡಿಯೋ ಮಾಡಿ ಅದರ ತುಣುಕನ್ನು ಪಾಕಿಸ್ತಾನಕ್ಕೆ ಕಳಿಸಿದ್ದರು. ಉಗ್ರರೊಂದಿಗೆ ಸಂಪರ್ಕದ ಶಂಕೆಯ ಮೇಲೆ ಬಂಧಿತರಾದ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಉಗ್ರರೊಂದಿಗೆ ಸಂಪರ್ಕದ ಶಂಕೆಯ ಮೇರೆಗೆ ಬಂಧಿಸಲಾಗಿದ್ದ ಜಗ್​ಜಿತ್ ಸಿಂಗ್ ಅಲಿಯಾಸ್ ಜಗ್ಗ ಮತ್ತು ನೌಷಾದ್ ಎಂಬವರನ್ನು ವಿಚಾರಣೆಗೆ ಒಳಪಡಿಸಿದಾಗ ಸಿಕ್ಕ ಮಾಹಿತಿ ಮೇರೆಗೆ ನಿನ್ನೆ ಉತ್ತರದೆಹಲಿಯಲ್ಲಿ ಛಿದ್ರಗೊಂಡ ದೇಹ ಪತ್ತೆಯಾಗಿದೆ. ಮಾದಕದ್ರವ್ಯದ ವ್ಯಸನಿ ಎನ್ನಲಾದ 21 ವರ್ಷದವನನ್ನು ಇವರು ಹತ್ಯೆ ಮಾಡಿದ್ದರು. ಕೊಲೆಯಾದವನ ಕೈಯಲ್ಲಿ ತ್ರಿಶೂಲದ ಹಚ್ಚೆ ಗುರುತು ಕಂಡುಬಂದಿದೆ.
21 ವರ್ಷದ ಈ ವ್ಯಕ್ತಿಯನ್ನು ಜಗ್ಗ ಮತ್ತು ನೌಷಾದ್ ಡಿ. 14-15ರಂದು ಆದರ್ಶನಗರದಿಂದ ಕರೆದುಕೊಂಡು ಭಾಲ್ಸ್ವಾ ಡೈರಿಯಲ್ಲಿನ ನೌಷಾದ್ ಮನೆಗೆ ಹೋಗಿದ್ದರು. ಅಲ್ಲಿ ಆತನನ್ನು ಕೊಂದು 8 ತುಂಡಾಗಿಸಿ, ಆ ಕುರಿತ 37 ಸೆಕೆಂಡುಗಳ ವಿಡಿಯೋವನ್ನು ಲಷ್ಕರ್​ ಇ ತೈಬಾ ಸಂಘಟನೆ ಸಂಪರ್ಕ ಹೊಂದಿ ಪಾಕಿಸ್ತಾನದಲ್ಲಿ ಇರುವ ಸೊಹೈಲ್ ಎಂಬ ವ್ಯಕ್ತಿಗೆ ಕಳಿಸಿದ್ದರು. ಅದಕ್ಕೆ ಪ್ರತಿಯಾಗಿ ಸೊಹೈಲ್ ತನ್ನ ಸಂಬಂಧಿ ಮುಖಾಂತರ ನೌಷಾದ್ ಬ್ಯಾಂಕ್ ಖಾತೆಗೆ 2 ಲಕ್ಷ ರೂ. ಕಳಿಸಿದ್ದ ಎಂಬುದು ಪೊಲೀಸ್ ವಿಚಾರಣೆಯಲ್ಲಿ ಬಹಿರಂಗಗೊಂಡಿದೆ.
ನೌಷಾದ್​ ಭಯೋತ್ಪಾದಕ ಎಂಬುದು ಗೊತ್ತಾಗಿದ್ದು, ಕೊಲೆ, ಹಲ್ಲೆ ಇತ್ಯಾದಿ ಪ್ರಕರಣಗಳ ಮೇಲೆ ಆತ ಬಹಳ ಕಾಲ ಜೈಲಿನಲ್ಲಿದ್ದ. ಮಾತ್ರವಲ್ಲ, ಈತ ಭಯೋತ್ಪಾದಕ ಸಂಘಟನೆ ಹರ್ಕತ್ ಉಲ್ ಅನ್ಸರ್ ಜತೆ ಸಂಪರ್ಕವನ್ನೂ ಹೊಂದಿದ್ದ. ಜೈಲಿನಲ್ಲಿದ್ದಾಗ ಈತ ಕೆಂಪುಕೋಟೆ ಮೇಲೆ ದಾಳಿ ಮಾಡಿದ್ದ ಆರೋಪಿ ಅರಿಫ್ ಮೊಹಮ್ಮದ್ ಮತ್ತು ಲಷ್ಕರ್ ಇ ತೈಬಾ ಉಗ್ರ ಸೊಹೈಲ್ ಸಂಪರ್ಕ ಗಳಿಸಿದ್ದ. 2018ರಲ್ಲಿ ಸೊಹೈಲ್ ಪಾಕಿಸ್ತಾನಕ್ಕೆ ತೆರಳಿದ್ದು, 2022ರ ಏಪ್ರಿಲ್​ನಲ್ಲಿ ನೌಷಾದ್ ಜೈಲಿನಿಂದ ಹೊರಬಂದಿದ್ದು, ಸೊಹೈಲ್ ಜತೆ ಸಂಪರ್ಕದಲ್ಲಿದ್ದ.
ಪ್ರಭಾವಿ ಹಿಂದುಗಳನ್ನು ಹತ್ಯೆ ಮಾಡುವ ಕೆಲಸಕ್ಕೆ ನೌಷಾದ್​ನನ್ನು ಸೊಹೈಲ್ ಬಳಸಿಕೊಳ್ಳುತ್ತಿದ್ದು, ಭಾರತದಲ್ಲಿನ ಖಲಿಸ್ತಾನಿ ಚಟುವಟಿಕೆಗೆ ಜಗ್​ಜಿತ್ ಸಿಂಗ್​ನನ್ನು ಬಳಸಿಕೊಳ್ಳಲಾಗುತ್ತಿತ್ತು. ಮಾತ್ರವಲ್ಲ, ಈತ ಖಲಿಸ್ತಾನಿ ಉಗ್ರ ಅರ್ಷ್​ದೀಪ್ ದಲ್ಲ ಜತೆಗೂ ಸಂಪರ್ಕ ಹೊಂದಿದ್ದ. ಆರೋಪಿಗಳಿಂದ 3 ಪಿಸ್ತೂಲ್, 22 ಕಾರ್ಟ್ರಿಡ್ಜ್, 2 ಹ್ಯಾಂಡ್ ಗ್ರನೇಡ್ ವಶಪಡಿಸಿಕೊಳ್ಳಲಾಗಿದೆ. 2020ರಲ್ಲಿ ಕೋಮುಗಲಭೆ ನಡೆದಿದ್ದ ಜಹಾಂಗಿರ್​ಪುರಿಯಲ್ಲಿ ಆರೋಪಿಗಳು ನೆಲೆಸಿದ್ದರೂ ಪೊಲೀಸರಿಗೆ ಸುಳಿವೇ ಇದ್ದಿರಲಿಲ್ಲ ಎನ್ನಲಾಗಿದೆ.
ಬಾಯ್​ಫ್ರೆಂಡ್​ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 16 =
Remember me
