ನವದೆಹಲಿ:ಮಿನಿ ಸ್ಕರ್ಟ್​ ಧರಿಸಿ ದೆಹಲಿ ಮೆಟ್ರೋ ರೈಲಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದ 19 ವರ್ಷದ ರಿಧಮ್​ ಚಾನನ @prettypastry11112222 ಹೆಸರಿನಲ್ಲಿ ಇನ್​ಸ್ಟಾಗ್ರಾಂ ಖಾತೆ ಹೊಂದಿದ್ದಾಳೆ. ಈಕೆ ಪಂಜಾಬ್​ನ ಫತೇಹಗಢ ಸಾಹೀಬ್ ನಗರದ ನಿವಾಸಿ.
ಇದೀಗ ಈಕೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಾನು ಏನು ಧರಿಸುತ್ತೇನೆ ಎಂಬುದು ನನ್ನ ಸ್ವಾತಂತ್ರ್ಯ. ಪ್ರಚಾರಕ್ಕಾಗಿ ಅಥವಾ ಪ್ರಸಿದ್ಧಿ ಹೊಂದಲು ಈ ರೀತಿ ಮಾಡುತ್ತಿಲ್ಲ. ಜನರು ಏನು ಬೇಕಾದರೂ ಟೀಕೆ ಮಾಡಲು. ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದ್ದಾಳೆ.
ಇದನ್ನೂ ಓದಿ:ಆನ್‌ಲೈನ್ ಗೇಮಿಂಗ್ ಆ್ಯಪ್‌ನಲ್ಲಿ 49 ರೂ. ಹೂಡಿಕೆ ಮಾಡಿದ ವ್ಯಕ್ತಿ ರಾತ್ರೋರಾತ್ರಿ ಕೋಟಿ ರೂ. ಒಡೆಯನಾದ!
ರಿಧಮ್ ಚಾನನ ಊರ್ಫಿ ಜಾವೇದ್ ಪ್ರಭಾವಕ್ಕೆ ಒಳಗಾಗಿ ಈ ರೀತಿ ಬಟ್ಟೆ ಧರಿಸುತ್ತಿದ್ದಾಳೆ ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿ, ನನಗೆ ಊರ್ಫಿ ಜಾವೇದ್ ಯಾರೆಂದೇ ಗೊತ್ತಿರಲಿಲ್ಲ. ಇತ್ತೀಚೆಗೆ ನನ್ನ ಸ್ನೇಹಿತ ಅವಳ ಫೋಟೋ ತೋರಿಸಿ, ಕಥೆ ಹೇಳಿದ ನಂತರ ಊರ್ಫಿ ಜಾವೇದ್ ಯಾರೆಂದು ಗೊತ್ತಾಗಿರುವುದು ಎಂದು ಹೇಳಿದ್ದಾಳೆ.
Seriously this is in delhiAkhir Majburi kya hai ?#Delhi#delhimetro#PriyankaChopra#ChitrangdaSinghpic.twitter.com/x2BkeJsINz— Tanisha Batra (@TanishaBatra80)March 31, 2023
Seriously this is in delhiAkhir Majburi kya hai ?#Delhi#delhimetro#PriyankaChopra#ChitrangdaSinghpic.twitter.com/x2BkeJsINz
ರಿಧಮ್​ ಅವರ ವಿಡಿಯೋ ವೈರಲ್​ ಆದ ಬೆನ್ನಲ್ಲೇ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಈ ವಿಷಯದ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದೆ. DMRCಯು ತನ್ನ ಪ್ರಯಾಣಿಕರು ಸಮಾಜದಲ್ಲಿ ಸ್ವೀಕಾರಾರ್ಹವಾದ ಎಲ್ಲ ಸಾಮಾಜಿಕ ಶಿಷ್ಟಾಚಾರ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕೆಂದು ನಿರೀಕ್ಷಿಸುತ್ತದೆ. ಪ್ರಯಾಣಿಕರು ಯಾವುದೇ ಅಸಭ್ಯ ಚಟುವಟಿಕೆಯಲ್ಲಿ ತೊಡಗಬಾರದು ಅಥವಾ ಇತರ ಸಹ ಪ್ರಯಾಣಿಕರ ಸಂವೇದನೆಗೆ ಧಕ್ಕೆ ತರುವಂತಹ ಯಾವುದೇ ಉಡುಗೆಯನ್ನು ಧರಿಸಬಾರದು. ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಸುವಾಗ ಸಭ್ಯತೆಯಿಂದ ನಡೆದುಕೊಳ್ಳಲು ಎಲ್ಲ ಪ್ರಯಾಣಿಕರಿಗೆ ನಾವು ಮನವಿ ಮಾಡುತ್ತೇವೆ ಎಂದು ಹೇಳಿದೆ.
ದೆಹಲಿ ಮೆಟ್ರೋ ರೈಲು ನಿಗಮದ ಹೇಳಿಕೆಗೆ ರಿಧಮ್ ಚನಾನಾ ಪ್ರತಿಕ್ರಿಯಿಸಿ, ಡಿಎಂಆರ್‌ಸಿ ಮೆಟ್ರೋದಲ್ಲಿ ವಿಡಿಯೋಗ್ರಫಿ ಮಾಡಲು ಅವಕಾಶ ಎಂದು ಹೇಳಿರುವ ನಿಯಮವನ್ನು ಮರೆತಂತಿದೆ. ಅವರಿಗೆ ನನ್ನ ಉಡುಗೆ ತೊಡುಗೆ ಸಮಸ್ಯೆಯಾಗಿದೆ ಎಂದಾದರೆ, ಅದನ್ನು ವಿಡಿಯೋ ಮಾಡಿದವರಿಗೂ ಸಮಸ್ಯೆಯಾಗಬೇಕು ಎಂದು ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಪರಂವಃ ಸ್ಟುಡಿಯೋಸ್ ಮೂಲಕ ವಿಶ್ ಮಾಡಿದ ರಕ್ಷಿತ್ ಶೆಟ್ಟಿ!
ನಾನು ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದ್ದೇನೆ. ಅಲ್ಲಿ ನನ್ನಿಷ್ಟದ ಬಟ್ಟೆಗಳನ್ನು ಧರಿಸಲು ಅವಕಾಶ ಇರಲಿಲ್ಲ. ಇದೀಗ ನನ್ನಿಷ್ಟದಂತೆ ಇರಲು ನಿರ್ಧರಿಸಿದ್ದು, ಕಳೆದ ಕೆಲ ತಿಂಗಳಿನಿಂದ ಈ ರೀತಿಯ ಬಟ್ಟೆ ಧರಿಸಿ ಮೆಟ್ರೋದಲ್ಲಿ ಓಡಾಡುತ್ತಿದ್ದೇನೆ. ಇದೀಗ ವಿಡಿಯೋ ವೈರಲ್ ಆಗಿದೆಯಷ್ಟೇ. ಪಿಂಕ್ ಲೈನ್ ಮೆಟ್ರೋ ಹೊರತುಪಡಿಸಿ ಎಲ್ಲಿಯೂ ಬಟ್ಟೆಯ ಕಾರಣಕ್ಕಾಗಿ ಯಾವುದೇ ಸಮಸ್ಯೆ ಎದುರಿಸಲಿಲ್ಲ ಎಂದು ಹೇಳಿದ್ದಾಳೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ನನ್ನ ಕುಟುಂಬದವರು ನೆರೆಹೊರೆಯ ಮಂದಿಯಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ನಾನು ತಲೆ ಕೆಡೆಸಿಕೊಳ್ಳುವುದಿಲ್ಲ ಎಂದು ರಿಧಮ್ ಚಾನನ ಹೇಳಿಕೊಂಡಿದ್ದಾಳೆ.(ಏಜೆನ್ಸೀಸ್)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 5 =
Remember me
