ನವದೆಹಲಿ:ದೆಹಲಿ ಮೆಟ್ರೋ ರೈಲು ಇತ್ತೀಚೆಗೆ ಅಸಭ್ಯ ವರ್ತನೆಗಳ ತಾಣವಾಗುವ ಮೂಲಕ ಅಪಖ್ಯಾತಿಗೆ ಒಳಗಾಗುತ್ತಿದೆ. ಈ ಹಿಂದೆ ಯುವತಿಯೊಬ್ಬಳು ಅರೆಬರೆ ಮೈ ಕಾಣುವ ಅಶ್ಲೀಲ ಉಡುಗೆ ಧರಿಸಿ, ಪ್ರಯಾಣ ಮಾಡುವ ಮೂಲಕ ಸುದ್ದಿಯಾಗಿದ್ದಳು. ಇದಾದ ಬಳಿಕ ಜೋಡಿಯೊಂದು ರೈಲಿನ ಒಳಗೆ ಪ್ರಣಯದಾಟ ಆಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಯುವಕನೊಬ್ಬ ರೈಲಿನಲ್ಲಿ ಹಸ್ತಮೈಥುನ ಮಾಡಿಕೊಳ್ಳುವ ಮೂಲಕ ದೆಹಲಿ ಮೆಟ್ರೋಗಿರುವ ಕಳಂಕಕ್ಕೆ ಮತ್ತಷ್ಟು ಬಳಿದಿದ್ದ. ಇದು ಸಾಲದು ಎಂಬಂತೆ ಪ್ರೇಮಿಗಳಿಬ್ಬರು ಕೂಲ್​ಡ್ರಿಂಕ್ಸ್​ ಕುಡಿದು ಒಬ್ಬರ ಬಾಯಿಗೆ ಇಬ್ಬರ ಉಗುಳುವ ದೃಶ್ಯವು ವೈರಲ್​ ಆಗಿತ್ತು. ಇದೀಗ ಮತ್ತೊಂದು ಅನುಚಿತ ಪ್ರಸಂಗ ವರದಿಯಾಗಿದೆ.
ವಿಡಿಯೋದಲ್ಲಿ ಏನಿದೆ?ಮೆಟ್ರೋ ರೈಲಿನಲ್ಲಿ ಯುವಕನೊಬ್ಬ ತನ್ನ ಎರಡೂ ಶೂಗಳಲ್ಲಿ ಒಂದು ಶೂ ಅನ್ನು ಕೈಯಲ್ಲಿ ಹಿಡಿದುಕೊಂಡಿರುತ್ತಾನೆ. ಈ ವೇಳೆ ಪಕ್ಕದಲ್ಲಿ ಕುಳಿತಿದ್ದ ಯುವತಿ ಥಂಬ್ಸ್​ ಅಪ್​​ ಬಾಟಲ್​ ಓಪನ್​ ಮಾಡಿ ಶೂ ಒಳಗೆ ಸುರಿಯುತ್ತಾಳೆ. ಇದಾದ ಬಳಿಕ ಯುವಕ ಮೊದಲು ಒಂದು ಸ್ಟ್ರಾ ಮೂಲಕ ಕೂಲ್​ ಡ್ರಿಂಕ್ಸ್​ ಕುಡಿಯುತ್ತಾನೆ. ನಂತರ ಯುವತಿಯೂ ಸಹ ಟೇಸ್ಟ್​ ನೋಡುತ್ತಾಳೆ. ಶೂ ಒಳಗೆ ಏನು ಇಟ್ಟಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ನೋಡುಗರಿಗೆ ವಿಡಿಯೋ ವಾಕರಿಕೆ ಉಂಟುಮಾಡುವಂತಿದೆ.
Relaxo की 150 रुपए वाली🩴इन्हीं लोगों के लिए बनी है !!#DelhiMetropic.twitter.com/NUCfNN4AiP
— Sachin Gupta (@SachinGuptaUP)January 3, 2024

ಯುವಕ ಹಿಡಿದಿರುವ ಶೂ, ಹೊಚ್ಚ ಹೊಸದಾದ ನೈಕ್ ವೊಮೆರೊ ಸ್ಪೋರ್ಟ್ಸ್ ಶೂ ಆಗಿದೆ. ಆನ್‌ಲೈನ್‌ನಲ್ಲಿ ಇದರ ಬೆಲೆ ಸುಮಾರು 2,500 ರೂ. ಇದೆ. ಮೆಟ್ರೋದಲ್ಲಿ ಮಹಿಳೆಯರಿಗೆ ಗೊತ್ತುಪಡಿಸಿದ ಸೀಟಿನ ಮೇಲೆ ಕುಳಿತು ವಿಡಿಯೋ ಮಾಡಿದ್ದಾರೆ. ಈ ಹಿಂದೆ ಯುವಜೋಡಿಯಿಂದ ಕೂಲ್​ ಡ್ರಿಂಕ್ಸ್​ ಅನ್ನು ಪರಸ್ಪರ ಬಾಯಿಗೆ ಉಗುಳಿದ್ದರು. ಆ ವಿಡಿಯೋಗಿಂತ ಈ ವಿಡಿಯೋ ತುಂಬಾ ವಿಭಿನ್ನವಾಗಿದ್ದು, ನೆಟ್ಟಿಗರು ಯುವಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಿಯಕರನಿಗೆ ತಕ್ಕ ಪ್ರೇಯಸಿ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಶೂನಿಂದ ಕೂಲ್​ ಡ್ರಿಂಕ್ಸ್​ ಕುಡಿಯುವುದು ತುಂಬಾ ವಿಲಕ್ಷಣ ಎಂಬಂತೆ ತೋರಿದರೂ ಈ ಹಿಂದೆಯೂ ಇಂತಹ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಉದಾಹರಣೆಗಳಿವೆ. 2021ರಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗರು ತಮ್ಮ ವಿಶ್ವಕಪ್ ವಿಜಯೋತ್ಸವನ್ನು ಶೂನಿಂದ ಕೂಲ್​ ಡ್ರಿಂಕ್ಸ್​ ಕುಡಿಯುವ ಮೂಲಕ ಆಚರಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋವು ಇಂಟರ್ನೆಟ್ ಅಲ್ಲಿ ಧೂಳೆಬ್ಬಿಸಿತ್ತು.
केंट आरओ देता है सबसे शुद्ध पानी 😜😜😜😜#delhimetro#KentROpic.twitter.com/aueSmBaw9S
— विधायक भैया ™ (@Boldman_00)October 11, 2023

ಇಂತಹ ಅನೇಕ ಘಟನೆಗಳು ವಿಶೇಷವಾಗಿ ಮೆಟ್ರೋ ರೈಲಿನಲ್ಲಿ ಕಂಡುಬರುತ್ತಿರುವುದರಿಂದ, ದೆಹಲಿ ಮೆಟ್ರೋ ಇಲಾಖೆಯು ಧ್ವನಿ ಟಿಪ್ಪಣಿಯನ್ನು ಹೊರಡಿಸಿದೆ. ಮೆಟ್ರೋ ಒಳಗೆ ಸರಿಯಾಗಿ ನಡೆದುಕೊಳ್ಳುವಂತೆ ಪ್ರಯಾಣಿಕರನ್ನು ಆಗ್ರಹಿಸಿದೆ. ಇಂತಹ ಘಟನೆಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಸಹಾಯವಾಣಿ ಸಂಖ್ಯೆಗಳನ್ನು ಪ್ರಚಾರ ಮಾಡಲು DMRC ನಿರ್ಧರಿಸಿದೆ.(ಏಜೆನ್ಸೀಸ್​)
ದೆಹಲಿ ಮೆಟ್ರೋಗೆ ಮತ್ತೊಂದು ಕಳಂಕ: ಮಹಿಳಾ ಪ್ರಯಾಣಿಕರ ಎದುರಲ್ಲೇ ಯುವಕನ ಅನುಚಿತ ವರ್ತನೆ

ರಾಕಿಂಗ್ ಸ್ಟಾರ್ ಯಶ್‌ ಹೊಸ ಸಿನಿಮಾ ‘ಟಾಕ್ಸಿಕ್‌’ನಲ್ಲಿ ಬಾಲಿವುಡ್ ಬೆಡಗಿ ಕರೀನಾ ಕಪೂರ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
