ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಬಿಕ್ಕಟ್ಟಿನ ಹಿನ್ನೆಲೆ ದೆಹಲಿ ಜಲ ಸಚಿವೆ ಅತಿಶಿ ಅನಿರ್ದಿಷ್ಟಾವಧಿ ಉಪವಾಸವನ್ನು ಕೈಗೊಂಡಿದ್ದಾರೆ. ಇದೀಗ ಮೂರನೇ ದಿನವೂ ತಮ್ಮ ಮುಷ್ಕರ ಮುಂದುವರೆಸಿಕೊಂಡು ಬಂದಿರುವ ಅತಿಶಿ ಅವರ ಆರೋಗ್ಯದಲ್ಲಿ ಇದೀಗ ಏರುಪೇರಾಗಿದ್ದು, ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟ ಮತ್ತಷ್ಟು ಕುಸಿದಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಇದನ್ನೂ ಓದಿ:ವ್ಯಕ್ತಿಯೊಬ್ಬನ ಶವ ಅಂದುಕೊಂಡು ಕೆರೆಯ ಬಳಿ ಹೋದ ಪೊಲೀಸರಿಗೆ ಕಾದಿತ್ತು ಬಿಗ್​ ಶಾಕ್​!
ಸಚಿವೆ ಅತಿಶಿ ಅವರ ಕೀಟೋನ್ ಮಟ್ಟವು ಧನಾತ್ಮಕವಾಗಿ ಕ್ಷಿಣಿಸಿದ ಹಿನ್ನೆಲೆ ವೈದ್ಯರು ಅವರಿಗೆ ಈ ಮುಷ್ಕರವನ್ನು ಕೂಡಲೇ ಕೊನೆಗೊಳಿಸಲು ಸಲಹೆ ನೀಡಿದ್ದಾರೆ ಎಂದು ಎಎಪಿ ಮಾಹಿತಿ ಹಂಚಿಕೊಂಡಿದೆ. “ಉಪವಾಸದ ಮೂರನೇ ದಿನದಂದು, ಜಲ ಸಚಿವೆ ಆದ ಅತಿಶಿ ಅವರ ಕೀಟೋನ್ ಮಟ್ಟವು ಕುಸಿತ ಕಂಡಿದೆ. ವೈದ್ಯರು ಶೀಘ್ರವೇ ಇದನ್ನೆಲ್ಲಾ ಅಂತ್ಯಗೊಳಿಸಲು ಸಲಹೆ ನೀಡಿದ್ದಾರೆ. ಅವರ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವೂ ಕುಸಿದಿದೆ” ಎಂದು ಎಎಪಿ ಸಂಜಯ್ ಸಿಂಗ್ ಹೇಳಿದ್ದಾರೆ.
“ಅತಿಶಿ ತಮ್ಮ ಜೀವವನ್ನು ಪಣಕ್ಕಿಟ್ಟಾದರೂ ನೀರಿನ ಹಕ್ಕಿಗಾಗಿ ಹೋರಾಡುತ್ತಿದ್ದಾರೆ” ಎಂದು ಸಂಜಯ್ ಸಿಂಗ್ ಸಚಿವೆಯ ಪ್ರತಿಭಟನಾ ವಿಡಿಯೋವನ್ನು ತಮ್ಮ ಎಕ್ಸ್​ (ಈ ಹಿಂದಿನ ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕುಡಿಯುವ ನೀರಿನ ಪೂರೈಕೆಗಾಗಿ ದೆಹಲಿಯು ಉತ್ತರ ಪ್ರದೇಶ ಮತ್ತು ಹರಿಯಾಣವನ್ನು ಅವಲಂಬಿಸುವಂತಾಗಿದೆ. ನಮ್ಮ ಜನಕ್ಕೆ ನೀರಿನ ಪೂರೈಕೆ ಮಾಡಿಕೊಡಿ ಎಂದು ಆಗ್ರಹಿಸಿ, ಶುಕ್ರವಾರ (ಜೂ.21) ದಕ್ಷಿಣ ದೆಹಲಿಯ ಭೋಗಲ್‌ನಲ್ಲಿ ಅತಿಶಿ ಅನಿರ್ದಿಷ್ಟ ಮುಷ್ಕರ ಕೈಗೊಂಡಿದ್ದಾರೆ.
ಇದನ್ನೂ ಓದಿ:ರೇಣುಕಸ್ವಾಮಿ ನನಗೂ ಇಂಥದ್ದೇ ಸಂದೇಶ ಕಳಿಸಿದ್ದ; ಸಾಕ್ಷಿ ಸಮೇತ ವಿವರಿಸಿದ ನಟಿ ಚಿತ್ರಾಲ್ ರಂಗಸ್ವಾಮಿ
ದೆಹಲಿಗೆ ಪ್ರತಿನಿತ್ಯ 1,005 ಎಂಜಿಡಿ ನೀರು ಪೂರೈಕೆಯಾಗುತ್ತಿದ್ದು, ಅದರಲ್ಲಿ 613 ಎಂಜಿಡಿಯನ್ನು ಹರಿಯಾಣದಿಂದ ನಗರಕ್ಕೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷ ಹೇಳಿಕೊಂಡಿದೆ. ಆದರೆ, ರಾಷ್ಟ್ರ ರಾಜಧಾನಿ ಹರಿಯಾಣದಿಂದ 513 ಎಂಜಿಡಿಗಿಂತ ಕಡಿಮೆ ನೀರು ಪಡೆಯುತ್ತಿದೆ ಎಂದು ಎಎಪಿ ತಿಳಿಸಿದೆ. ಇದನ್ನು ಗಮನಿಸಿದ ಬಿಜೆಪಿ, ಈ ಉಪವಾಸ ಸತ್ಯಾಗ್ರಹ ಕೇವಲ “ರಾಜಕೀಯ ನಾಟಕ” ಎಂದು ಟೀಕಿಸಿದೆ,(ಏಜೆನ್ಸೀಸ್).
ರೇಣುಕಸ್ವಾಮಿ ನನಗೂ ಇಂಥದ್ದೇ ಸಂದೇಶ ಕಳಿಸಿದ್ದ; ಸಾಕ್ಷಿ ಸಮೇತ ವಿವರಿಸಿದ ನಟಿ ಚಿತ್ರಾಲ್ ರಂಗಸ್ವಾಮಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − two =
Remember me
