ನವದೆಹಲಿ:ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆಪ್​ ಸಚಿವ ಸತ್ಯೇಂದ್ರ ಜೈನ್​ ಮನೆಯಿಂದ ಭಾರೀ ಸಂಪತ್ತು ಜಪ್ತಿ ಮಾಡಲಾಗಿದೆ.
ಅಕ್ರಮ ಹಣ ವರ್ಗಾವಣೆಯಲ್ಲಿ ಸಚಿವರ ನಿವಾಸದ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಸೋಮವಾರ ದೆಹಲಿಯ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ 2 ಕೋಟಿ ರೂ. ನಗದು, 1.8 ಕೆ.ಜಿ. ಚಿನ್ನದ ನಾಣ್ಯವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಜೂನ್​ 1 ರಿಂದ 9 ರವರೆಗೆ ಇಡಿ ವಶದಲ್ಲಿರುವುದರಿಂದ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಕೋಲ್ಕತ್ತಾ ಮೂಲದ ಕಂಪನಿ ಜತೆಯೂ 4.81 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಚಿವ ಸತ್ಯೇಂದ್ರ ಜೈನ್​ನನ್ನು ಬಂಧಿಸಲಾಗಿದೆ.
ಈ ನಡುವೆ ಸಚಿವ ಸತ್ಯೆಂದ್ರ ಜೈನ್​​ ಹಲವು ಕಂಪನಿಗಳಲ್ಲಿ ಕಪ್ಪು ಹಣ ಹೂಡಿಕೆ ಮಾಡಿದ್ದಾರೆ ಎಂಬ ಆರೋಪವೂ ಇದ್ದು, ಈ ಬಗ್ಗೆಯೂ ಇಡಿ ತನಿಖೆ ಕೈಗೊಂಡಿದೆ.(ಏಜೆನ್ಸೀಸ್​)
ವಾರದ ಬಳಿಕ ಸಿಸಿಟಿವಿಯಲ್ಲಿ ಬಯಲಾಯ್ತು ಬಾಲಕನ ಸಾವಿನ ರಹಸ್ಯ!

3 ಎಕರೆಯಲ್ಲಿದ್ದ ಕಲ್ಲಂಗಡಿ ತಿಂದು ಹಾಕಿವೆ ಕರಡಿ: ರೈತರಲ್ಲಿ ಹೆಚ್ಚಿದೆ ಆತಂಕ

Sign in to your account
Please enter an answer in digits:seven − 3 =
Remember me
