ದೆಹಲಿ:ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹತ್ತಿರದ ನಗರಗಳಲ್ಲಿ ದೀಪಾವಳಿ ಆಚರಣೆ ಬೆನ್ನಲ್ಲೇ ಗಾಳಿಯ ಗುಣಮಟ್ಟ ಅಪಾಯಕಾರಿ ಮಟ್ಟವನ್ನು ತಲುಪಿದೆ. ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ಭಾನುವಾರ ಪಟಾಕಿ ಸಿಡಿಸುವಲ್ಲಿ ಭಾರೀ ನಿಯಮ ಉಲ್ಲಂಘನೆಯಾಗಿದ್ದು, ಪರಿಣಾಮ ವಾಯುಮಾಲಿನ್ಯ ತುಂಬಾ ಹೆಚ್ಚಾಗಿರುವುದು ಕಳವಳಕಾರಿಯಾಗಿದೆ.
ವಾಯು ನಿಗಾ ವೇದಿಕೆಗಳ ಪ್ರಕಾರ ದೆಹಲಿಯಲ್ಲಿ ಇಂದು ಬೆಳಗ್ಗೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)ವು 500ಕ್ಕಿಂತ ಹೆಚ್ಚಿದೆ. ಕೆಲವೊಂದು ಪ್ರದೇಶಗಳಲ್ಲಿ ಈ ಅಂಕಿ-ಅಂಶ 900ಕ್ಕೂ ತಲುಪಿದೆ. ಎಕ್ಯೂಐ.ಡಾನ್​ ಇನ್​ ಪ್ರಕಾರ ಇಂದು ಬೆಳಗ್ಗೆ ಆರು ಗಂಟೆಗೆ ಜವಹರಲಾಲ್​ ನೆಹರು ಸ್ಟೇಡಿಯಂನಲ್ಲಿ 910, ಲಾಜ್ಪತ್​ ನಗರದಲ್ಲಿ 959 ಮತ್ತು ಕರೋಲ್​ ಬಾಘ್​ನಲ್ಲಿ 779 ಎಕ್ಯೂಐ ದಾಖಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ ದೆಹಲಿಯ ಬಹುತೇಕ ಪ್ರದೇಶಗಳಲ್ಲಿ ಸರಾಸರಿ ಐಕ್ಯೂಐ ಸುಮಾರು 300 ಇದೆ. ದೆಹಲಿ ವಿಮಾನ ನಿಲ್ದಾಣ ಏರಿಯಾ, ಐಟಿಒ ಮತ್ತು ರೋಹಿಣಿ ಏರಿಯಾ ಸೇರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ಬೆಳಗಿನ ಸಮಯದಲ್ಲಿ ಪಿಎಂ 2.5 ಮತ್ತು ಪಿಎಂ10 ಮಾಲಿನ್ಯ ಮಟ್ಟಗಳು 500ಕ್ಕೆ ಮುಟ್ಟಿದೆ.
ಅಂದಹಾಗೆ ವಾಯು ಗುಣಮಟ್ಟ ಸೂಚ್ಯಂಕವು ವಾಯು ಮಾಲಿನ್ಯವನ್ನು ಅಳೆಯುವ ಸೂಚಕವಾಗಿದೆ. ಶೂನ್ಯದಿಂದ 50ರ ನಡುವಿನ ಎಕ್ಯೂಐ ಅನ್ನು ‘ಉತ್ತಮ’, 51 ರಿಂದ 100 ನಡುವಿನ ಎಕ್ಯೂಐ ‘ತೃಪ್ತಿದಾಯಕ’, 101 ರಿಂದ 200 ನಡುವಿನ ಎಕ್ಯೂಐ ‘ಮಧ್ಯಮ’, 201 ರಿಂದ 300ರ ನಡುವಿನ ಎಕ್ಯೂಐ ‘ಕಳಪೆ’, 301 ರಿಂದ 400ರ ನಡುವಿನ ಎಕ್ಯೂಐ ‘ಅತ್ಯಂತ ಕಳಪೆ’, 401 ರಿಂದ 450ರ ನಡುವಿನ ಎಕ್ಯೂಐ ‘ತೀವ್ರ’ ಮತ್ತು 450ಕ್ಕಿಂತ ಹೆಚ್ಚಿನದ್ದನ್ನು ಅತ್ಯಂತ ಗಂಭೀರ ಎಂದು ಪರಿಗಣಿಸಲಾಗಿದೆ.
ನಿನ್ನೆ (ನ.12) ದೆಹಲಿ, ನೋಯ್ಡಾ ಮತ್ತು ಗುರುಗ್ರಾಮ ಹಾಗೂ ಎನ್‌ಸಿಆರ್‌ನ ಇತರ ಪ್ರದೇಶಗಳಲ್ಲಿ ಜನರು ನಿಯಮಗಳನ್ನು ಲೆಕ್ಕಿಸದೇ ಭಾರೀ ಪ್ರಮಾಣದಲ್ಲಿ ಪಟಾಕಿ ಸಿಡಿಸಿದರು. ಪಟಾಕಿ ಸಿಡಿಸಲು ಜನರು ಪಾರ್ಕ್‌ಗಳಲ್ಲಿ ಜಮಾಯಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ಇನ್ನು ಕೆಲವರು ಸುಪ್ರೀಂ ಕೋರ್ಟ್ ನೀಡಿರುವ ನಿಷೇಧದ ಆದೇಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲವಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುಪ್ರೀಂ ಕೋರ್ಟ್​ ತೀರ್ಪು ಏನು?ಬೇರಿಯಂ ಹೊಂದಿರುವ ಪಟಾಕಿಗಳನ್ನು ನಿಷೇಧಿಸುವ ಆದೇಶವು ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ, ಪ್ರತಿ ರಾಜ್ಯಕ್ಕೂ ಇದು ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿತು. ಅಲ್ಲದೆ, ದೆಹಲಿ ಸರ್ಕಾರ ಪಟಾಕಿ ಮೇಲಿನ ನಿಷೇಧದ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಕಳೆದ ಸೆಪ್ಟೆಂಬರ್​ನಲ್ಲಿ ನ್ಯಾಯಾಲಯ ನಿರಾಕರಿಸಿತ್ತು ಮತ್ತು ಜನರ ಆರೋಗ್ಯ ಮುಖ್ಯ ಎಂದು ಹೇಳಿತು.
ದೆಹಲಿಯ ಡಿಫೆನ್ಸ್ ಕಾಲನಿಯಲ್ಲಿಯೂ ಪಟಾಕಿ ಸಿಡಿಸಲಾಗಿದ್ದು, ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಯಾವುದೇ ಬದಲಾವಣೆಯಾಗಿಲ್ಲ ಎಂದು ಪರಿಸರವಾದಿ ಭವ್ರೀನ್ ಕಂಧಾರಿ ಅಸಮಾಧಾನ ಹೊರಹಾಕಿದ್ದಾರೆ. ಪಟಾಕಿಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ದೃಢವಾದ ನಿಲುವು ಪಟಾಕಿಗಳ ಹೊಗೆಯಲ್ಲಿಯೇ ಹಾರಿಹೋಗಿದೆ. ಎಚ್ಚರಿಕೆಗಳು ಮತ್ತು ಸಂಪೂರ್ಣ ನಿಷೇಧದ ಹೊರತಾಗಿಯೂ ಅದನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಮತ್ತೊಮ್ಮೆ ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ದೆಹಲಿಯು ನಿನ್ನೆ (ನ.12) ತಿಳಿಯಾದ ಆಕಾಶ ಮತ್ತು ಹೇರಳವಾದ ಬಿಸಿಲಿನೊಂದಿಗೆ ಎಂಟು ವರ್ಷಗಳಲ್ಲೇ ಅತ್ಯುತ್ತಮ ದೀಪಾವಳಿ ದಿನದ ಗಾಳಿಯ ಗುಣಮಟ್ಟವನ್ನು ದಾಖಲಿಸಿದೆ. ಸಂಜೆ 4 ಗಂಟೆಗೆ ಎಕ್ಯೂಐ 218 ರಷ್ಟಿತ್ತು, ಕನಿಷ್ಠ ಮೂರು ವಾರಗಳಲ್ಲೇ ಇದು ಉತ್ತಮ ಎಕ್ಯೂಐ ಆಗಿದೆ. ಕಳೆದ ವಾರ ಸುರಿದ ಮಳೆಯು ದೀಪಾವಳಿ ಹಬ್ಬಕ್ಕೆ ಸ್ವಲ್ಪ ಮುಂಚಿತವಾಗಿ ಸುಧಾರಣೆಯನ್ನು ತಂದಿತು. ಕಳೆದ ವರ್ಷ ದೀಪಾವಳಿಯಂದು ದೆಹಲಿಯಲ್ಲಿ 312, 2021ರಲ್ಲಿ 382, 2020ರಲ್ಲಿ 414, 2019ರಲ್ಲಿ 337, 2018ರಲ್ಲಿ 281, 2017ರಲ್ಲಿ 319 ಮತ್ತು 2016ರಲ್ಲಿ 431 ಎಕ್ಯೂಐ ದಾಖಲಾಗಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ.
ವಿಶ್ವದ ರಾಜಧಾನಿ ನಗರಗಳಲ್ಲಿ ಗಾಳಿಯ ಗುಣಮಟ್ಟವು ಅತ್ಯಂತ ಕಳಪೆ ಸ್ಥಾನದಲ್ಲಿದೆ. ಅಕ್ಟೋಬರ್ 28 ರಿಂದ ಒಂದು ವಾರದವರೆಗೆ ಹೊಗೆಯ ದಟ್ಟವಾದ ಹೊದಿಕೆಯೊಂದಿಗೆ ದೆಹಲಿ ತುಂಬಾ ಅವ್ಯವಸ್ಥೆ ಎದುರಿಸಬೇಕಾಯಿತು. ತೀವ್ರ ಮಾಲಿನ್ಯದ ದೃಷ್ಟಿಯಿಂದಾಗಿ ಸರ್ಕಾರವು ಶಾಲೆಗಳನ್ನು ಮುಚ್ಚಬೇಕಾಯಿತು ಮತ್ತು ಡೀಸೆಲ್ ಟ್ರಕ್‌ಗಳನ್ನು ನಿಷೇಧಿಸಬೇಕಾಯಿತು. ಇದರ ನಡುವೆ ಕಳೆದ ವಾರದ ಕೊನೆಯಲ್ಲಿ ವಾಯುವ್ಯ ಭಾರತದ ಬಹುತೇಕ ಭಾಗಗಳಲ್ಲಿ ಸುರಿದ ಮಳೆ ಕೊಂಚ ನಿರಾಳ ತಂದಿತು. ಆದರೆ, ಇದೀಗ ಪಟಾಕಿ ಸಿಡಿಸಿರುವುದು ಮತ್ತೆ ವಾಯು ಗುಣಮಟ್ಟ ಕಳಪೆಯಾಗಲು ಕಾರಣವಾಗಿದೆ.(ಏಜೆನ್ಸೀಸ್​)
ದೆಹಲಿ ವಾಯುಮಾಲಿನ್ಯ; ಹೀಗೆ ಆದಲ್ಲಿ ಮುಂದಿನ ದಿನಗಳಲ್ಲಿ ಕಷ್ಟವಾಗುತ್ತದೆ: ಸುಪ್ರೀಂ ಕೋರ್ಟ್​

ವಾಯುಮಾಲಿನ್ಯ: ವಿಪರೀತ ಮಾಲಿನ್ಯದ ಸಮಯದಲ್ಲಿ ಬೆಲ್ಲದ ನೀರನ್ನು ಕುಡಿಯುವುದರಿಂದ ಶ್ವಾಸಕೋಶಕ್ಕೆ ಅನೇಕ ಲಾಭಗಳಿವೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
