ನವದೆಹಲಿ :ಕರೊನಾ ಎರಡನೇ ಅಲೆಯಲ್ಲಿ ತೀವ್ರವಾದ ಸಾವುನೋವು ಅನುಭವಿಸಿದ ದೆಹಲಿಯಲ್ಲಿ ಲಸಿಕಾ ಅಭಿಯಾನವನ್ನು ತ್ವರಿತ ಗತಿಯಲ್ಲಿ ನಡೆಸಲಾಗುತ್ತಿದೆ. ನಿನ್ನೆ ಒಂದೇ ದಿನದಲ್ಲಿ ದೆಹಲಿಯ 1,320 ಲಸಿಕಾ ಕೇಂದ್ರಗಳಲ್ಲಿ 2.05 ಲಕ್ಷಕ್ಕೂ ಹೆಚ್ಚು ಜನರಿಗೆ ಕರೊನಾ ಲಸಿಕೆ ನೀಡಲಾಗಿದೆ. ಇದು ಈವರೆಗಿನ ಎಲ್ಲ ದಾಖಲೆಗಳನ್ನೂ ಮೀರಿದ ಸಂಖ್ಯೆಯಾಗಿದೆ ಎಂದು ಡೆಪ್ಯುಟಿ ಸಿಎಂ ಮನೀಶ್​ ಸಿಸೋಡಿಯ ಹೇಳಿದ್ದಾರೆ.
“ದೆಹಲಿಯಲ್ಲಿ ಲಸಿಕಾಕರಣವು ದಾಖಲೆ ಗತಿಯಲ್ಲಿ ನಡೆಯುತ್ತಿದೆ. ಕಳೆದ ಮೂರು ದಿನಗಳಲ್ಲಿ 1.5 ಲಕ್ಷ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಇಂದು, ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿ, ಒಂದೇ ದಿನದಲ್ಲಿ 2,05,170 ಜನರಿಗೆ ಲಸಿಕೆ ನೀಡಲಾಗಿದೆ. ಈ ರೀತಿಯಾಗಿ ದೆಹಲಿಯನ್ನು ಮೂರನೇ ಅಲೆಯಿಂದ ರಕ್ಷಿಸಲಿದ್ದೇವೆ” ಎಂದು ಸಿಸೋಡಿಯ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಮೊಬೈಲ್‌ ಖರೀದಿಗೆ ಬಾಲಕಿ ಮಾರಿದಳು 12 ಮಾವಿನಹಣ್ಣು – ಸಿಕ್ಕಿದ್ದು 1.20 ಲಕ್ಷ ರೂ!
ಜುಲೈ ತಿಂಗಳಿಗೆ ದೆಹಲಿಗೆ 45 ಲಕ್ಷ ಡೋಸ್ ಲಸಿಕೆ ಒದಗಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಸರ್ಕಾರ ಪತ್ರ ಬರೆದಿದೆ ಎಂದು ಆಮ್​ ಆದ್ಮಿ ಪಾರ್ಟಿಯ ಶಾಸಕಿ ಅತೀಶಿ ಹೇಳಿದ್ದಾರೆ. “ಪ್ರತಿದಿನ ದೆಹಲಿಯಲ್ಲಿ ಸುಮಾರು 1.5 ಲಕ್ಷ ಲಸಿಕೆ ಡೋಸ್​ಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಜುಲೈನಲ್ಲಿ ಕನಿಷ್ಠ 45 ಲಕ್ಷ ಡೋಸ್​ಗಳನ್ನು ದೆಹಲಿಗೆ ನೀಡಿದರೆ ನಗರದ ಜನರಿಗೆ ಆದಷ್ಟು ಬೇಗ ಲಸಿಕೆ ನೀಡಿ ಮೂರನೇ ಅಲೆಯಿಂದ ರಕ್ಷಿಸಬಹುದು” ಎಂದಿದ್ದಾರೆ.(ಏಜೆನ್ಸೀಸ್)
ಎನ್​ಡಿಪಿಎಸ್ ಕಾಯ್ದೆಗೆ ಮತ್ತಷ್ಟು ಬಲ, ನಿಯಮಾವಳಿ ರೂಪಿಸಲು ಕ್ರಮ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಒಲಂಪಿಕ್ಸ್​ನಲ್ಲಿ ಚಿನ್ನ ಗೆದ್ದರೆ 3 ಕೋಟಿ ರೂ. ಬಹುಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − three =
Remember me
