ಹೊಸದಿಲ್ಲಿ:ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶದ ಆರೋಪದ ಮೇಲೆ ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ಆರನೇ ಆರೋಪಿ ಮಹೇಶ್ ಕುಮಾವತ್​ನನ್ನು ಇದೀಗ ದೆಹಲಿ ಪೊಲೀಸ್ ವಿಶೇಷ ದಳ ಬಂಧಿಸಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ:ಗಂಭೀರ ಕಳವಳಕಾರಿ ವಿಷಯ’: ಸಂಸತ್ತಿನ ಭದ್ರತಾ ಲೋಪದ ಕುರಿತು ಸಂಸದರಿಗೆ ಪತ್ರ ಬರೆದ ಸ್ಪೀಕರ್​
ಆರೋಪಿ ಮಹೇಶ್​ನನ್ನು ಬಂಧಿಸಿದ ಬಳಿಕ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸಲಾಗುವುದು ಮತ್ತು ವಿಚಾರಣೆಗಾಗಿ ಪೊಲೀಸರು ಆತನನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಗುರುವಾರ, ಲಲಿತ್ ಝಾ ಮತ್ತು ಮಹೇಶ್ ಕರ್ತವ್ಯ ಪಥ್ ಪೊಲೀಸ್ ಠಾಣೆಗೆ ಬಂದು ಶರಣಾದ ಬೆನ್ನಲ್ಲೇ, ಇಬ್ಬರನ್ನೂ ತನಿಖೆಯ ಸಲುವಾಗಿ ವಿಶೇಷ ಸೆಲ್‌ಗೆ ಕರೆದೊಯ್ಯಲಾಯಿತು.
ಈ ನಡುವೆ ಲಲಿತ್​ನನ್ನು ಬಂಧಿಸಿದ ಪೊಲೀಸರು, ಮಹೇಶ್​ನನ್ನು ವಿಚಾರಣೆಗೆ ಒಳಪಡಿಸಿದರು. ವಿಚಾರಣೆಯ ಸಮಯದಲ್ಲಿ ಕೈಲಾಶ್‌ನ ಕೈವಾಡ ಹೊರಬಿದ್ದಿದೆ. ಇದು ಆತನ ಬಂಧನಕ್ಕೆ ಕಾರಣವಾಗಿದೆ. ಇಡೀ ಪಿತೂರಿ ಹಿಂದಿನ ಮಾಸ್ಟರ್ ಮೈಂಡ್ ಎಂದು ಗುರುತಿಸಲಾದ ಲಲಿತ್​ ಸಂಸತ್ತಿನ ಹೊರಗೆ ಹಾಜರಾಗಿದ್ದ ಎಂದು ವರದಿಯಾಗಿದೆ. ಸದ್ಯ ಈ ಇಬ್ಬರನ್ನು ಅರೆಸ್ಟ್​ ಮಾಡಿರುವ ಪೊಲೀಸರು, ಇದೀಗ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ವೇದದ ಮಹತ್ವ ಬಗ್ಗೆ ಸಾರ್ವಜನಿಕರಿಗೆ ಅರಿವು:ಸಮ್ಮೇಳನಕ್ಕೆ ಚಾಲನೆ
ಮಹೇಶ್ ‘ಭಗತ್ ಸಿಂಗ್ ಫ್ಯಾನ್ ಪೇಜ್’ ಹೆಸರಿನ ಫೇಸ್‌ಬುಕ್ ಗ್ರೂಪ್ ಮೂಲಕ ಲಲಿತ್ ಮತ್ತು ಇತರರೊಂದಿಗೆ ಸಂಭಾಷಣೆ ನಡೆಸಿದ್ದಾನೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).
‘ನೀಲಿ’ ಬಣ್ಣ ಅಲ್ಲ, ಹೆಣ್ಣಿನ ರಹಸ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + eight =
Remember me
