ನವದೆಹಲಿ:ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲೇ ಇರಬೇಕಾಗಿ ಬಂದಿರುವ ಹಿನ್ನೆಲೆಯಲ್ಲಿ ಜನರು ತಮ್ಮ ಜಿಹ್ವಾಚಾಪಲ್ಯ ತೀರಿಸಿಕೊಳ್ಳಲು ಆನ್​ಲೈನ್​ನಲ್ಲಿ ಆಹಾರವನ್ನು ತರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪಿಜ್ಜಾ ಕೂಡ ಹೊರತಲ್ಲ. ಆದರೆ, ಹೀಗೆ ಆನ್​ಲೈನ್​ನಲ್ಲಿ ಆಹಾರ ತರಿಸಿಕೊಳ್ಳುವ ಮುನ್ನ ಆಲೋಚಿಸುವುದು ಒಳಿತು.
ಏಕೆಂದರೆ, ದಕ್ಷಿಣ ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಮಾಡುವ ಕೆಲಸದಲ್ಲಿ ತೊಡಗಿರುವ 19 ವರ್ಷದ ಯುವಕನಿಗೆ ಕರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ಆತ ಪಿಜ್ಜಾ ಸರಬರಾಜು ಮಾಡಿದ್ದ 72 ಕುಟುಂಬಗಳನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.
ಈ ಯುವಕ ಏಪ್ರಿಲ್​ 12ರವರೆಗೆ ಪಿಜ್ಜಾ ಡೆಲಿವರಿ ಮಾಡಿದ್ದ. ಕಳೆದ 15 ದಿನಗಳಲ್ಲಿ ಈತ ದಕ್ಷಿಣ ದೆಹಲಿಯ ಹೌಜ್​ ಖಾಸ್​, ಮಾಲ್ವಿಯಾನಗರ್​ ಮತ್ತು ಸಾವಿತ್ರಿ ನಗರದ ಸುತ್ತಮುತ್ತಲ ಪ್ರದೇಶದಲ್ಲಿನ 72 ಕುಟುಂಬಗಳಿಗೆ ಪಿಜ್ಜಾ ಕೊಟ್ಟಿದ್ದ. ಇದೀಗ ಈತನಿಗೆ ಕರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಆದ್ದರಿಂದ, ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈತನಿಂದ ಪಿಜ್ಜಾ ಪಡೆದ 72 ಕುಟುಂಬಗಳನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಿರುವುದಾಗಿ ವೈದ್ಯರು ವಿವರಿಸಿದ್ದಾರೆ.
ಈತನ ಸಂಪರ್ಕಕ್ಕೆ ಬಂದಿದ್ದ 20 ಡೆಲಿವರಿ ಬಾಯ್​ಗಳನ್ನು ಕೂಡ ಛತ್ರಪುರ ಕ್ವಾರಂಟೈನ್​ ಸೌಲಭ್ಯದಲ್ಲಿ ಕ್ವಾರಂಟೈನ್​ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕರೊನಾಕ್ಕೆ ಆಯುರ್ವೇದ, ಹೋಮಿಯೋಪಥಿ ಚಿಕಿತ್ಸೆ ಮಾಡಲು ಹೊರಟ ವೈದ್ಯರಿಗೆ ಸುಪ್ರೀಂಕೋರ್ಟ್​ ಏನು ಹೇಳಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 3 =
Remember me
