ನವದೆಹಲಿ:ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್​ ಟಿ 20) ಮತ್ತೊಬ್ಬ ಹಿಟ್ಟಿಂಗ್ ಸ್ಟಾನನ್ನು ಮುನ್ನೆಲೆಗೆ ತಂದಿದೆ. ಸರಣಿ ಸೆನ್ಸೇಷನಲ್ ಇನ್ನಿಂಗ್ಸ್ ಗಳ ಮೂಲಕ ಸಂಚಲನ ಮೂಡಿಸಿರುವ ಪ್ರಿಯಾಂಶ್ ಆರ್ಯ ಇದೀಗ ತನ್ನ ಖಾತೆಯಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಈ ಲೀಗ್‌ನಲ್ಲಿ ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ಪರ ಆಡುತ್ತಿರುವ ಪ್ರಿಯಾಂಶ್, ಬೌಲರ್‌ಗಳನ್ನು ದಂಡಿಸುತ್ತಿದ್ದಾರೆ.
ಇದನ್ನೂ ಓದಿ:ರಾಹುಲ್ ಗಾಂಧಿ ಅಮೆರಿಕ ಭೇಟಿ.. ಮೂರು ದಿನದ ಪ್ರವಾಸದಲ್ಲಿ ಯಾರನ್ನೆಲ್ಲ ಭೇಟಿಯಾಗಲಿದ್ದಾರೆ ಗೊತ್ತಾ?
ಇತ್ತೀಚೆಗೆ ನಡೆದ ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಕೇವಲ 50 ಎಸೆತಗಳಲ್ಲಿ 120 ರನ್ ಗಳಿಸಿದ್ದರು. ಮನನ್ ಭಾರದ್ವಾಜ್ ತಮ್ಮ ಶಕ್ತಿಶಾಲಿ ಬ್ಯಾಟಿಂಗ್‌ನಿಂದ 12ನೇ ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿದರು.
23 ವರ್ಷದ ಪ್ರಿಯಾಂಶ್​ ಈ ಹಿಂದೆ ಯಶಸ್ವಿ ಜೈಸ್ವಾಲ್ ಮತ್ತು ರವಿ ಬಿಷ್ಣೋಯ್ ಅವರೊಂದಿಗೆ ಭಾರತ-ಎ ಪರ ಆಡಿದ್ದರು. ಸದ್ಯ ಅವರು ಸತತ ಸೆನ್ಸೇಷನಲ್ ಇನ್ನಿಂಗ್ಸ್ ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಪ್ರಿಯಾಂಶ್ ಭಾರಿ ಬೆಲೆಗೆ ಹರಾಜಾಗುವುದು ಖಚಿತ ಎನ್ನಲಾಗುತ್ತಿದೆ.
ಇತ್ತೀಚೆಗೆ ನಡೆದ ದೆಹಲಿ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಪ್ರಿಯಾಂಶ್ 50 ಎಸೆತಗಳಲ್ಲಿ 120 ರನ್ ಗಳಿಸಿದ್ದು, ಮನಸ್​ ಭಾರದ್ವಾಜ್​ ಬೌಲಿಂಗ್​ನಲ್ಲಿ 12ನೇ ಓವರ್​ನಲ್ಲಿ ಪ್ರಿಯಾಂಶ್ 6ಎಸೆತದಲ್ಲಿ 6ಸಿಕ್ಸರ್​ ಹೊಡೆದು ದಾಖಲೆ ನಿರ್ಮಿಸಿದ್ದಾರೆ.
ಇದುವರೆಗೆ ನಡೆದ ಪಂದ್ಯಗಳಲ್ಲಿ ಪ್ರಿಯಾಂಶ್ 57 (30 ಎಸೆತ), 82 (51), 53 (32), 45 (26), 107 (55), 88 (42), 24 (9) ರನ್ ಗಳಿಸಿದ್ದಾರೆ.
ಅಮ್ಮನ ಕನಸು ನನಸಾಯಿತು, ಖುಷಿಯಾಗಿದ್ದೇನೆ.. ಕನ್ನಡ ನೆಲದಲ್ಲಿ ಎನ್​ಟಿಆರ್ ಹೀಗೆನ್ನಲು ಇದೇ ಕಾರಣ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + fourteen =
Remember me
