ದೆಹಲಿ:ದೆಹಲಿ ವಿಶೇಷ ತನಿಖಾ ದಳ ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲೇಡಿ ಡಾನ್ ಅನುರಾಧ ಮತ್ತು ಮೋಸ್ಟ್​ ವಾಂಟೆಡ್ ಕ್ರಿಮಿನಲ್ ಕಲ ಜತೇದಿಯನ್ನು ಬಂಧಿಸಿದ್ದಾರೆ.
ಗ್ಯಾಂಗ್​​ಸ್ಟರ್ ಕಲ ಜತೇದಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ದೆಹಲಿ, ಪಂಜಾಬ್, ಹರಿಯಾಣ, ರಾಜಸ್ತಾನಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈತನ ಬಗ್ಗೆ ಮಾಹಿತಿ ಕೊಟ್ಟವರಿಗೆ 7 ಲಕ್ಷ ರೂ. ಬಹುಮಾನವನ್ನು ಸಹ ಘೋಷಿಸಲಾಗಿತ್ತು. ಇಂದು ಉತ್ತರಪ್ರದೇಶದ ಷಹರ್​​ನ್ಪುರದಲ್ಲಿ ಬಂಧಿಸಲಾಗಿದೆ ಎಂದು ವಿಶೇಷ ದಳದ ಡಿಸಿಪಿ ಮನೀಷ್ ಚಂದ್ರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಆರ್​ಎಸ್​ಎಸ್​-ಬಿಜೆಪಿ ಹಿರಿಯ ನಾಯಕರಿಂದ ಚೆಕ್​ಮೇಟ್! ಇಲ್ಲಿದೆ ಇನ್​ಸೈಡ್​ ಸ್ಟೋರಿ
ಲೇಡಿ ಡಾನ್ ಬಂಧನ:
ಮತ್ತೊಂದು ಪ್ರಕರಣದಲ್ಲಿ ಪಾತಕಿ ಜತೇದಿ ಗುಂಪಿನ ಸದಸ್ಯೆ, ಲೇಡಿ ಡಾನ್ ಅನುರಾಧಳನ್ನು ದೆಹಲಿ ವಿಶೇಷ ದಳ ಪೊಲೀಸರು ಬಂಧಿಸಿದ್ದಾರೆ. ಈಕೆಯ ಮೇಲೆ ಕೊಲೆ, ಸುಲಿಗೆ ಸೇರಿದಂತೆ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ರಾಜಸ್ತಾನದಲ್ಲಿ ಪ್ರಕರಣ ದಾಖಲಾಗಿದ್ದವು.
‘ನಿನ್ನ ಮೂಳೆ ಮುರಿಯುತ್ತೇನೆ’ ಎಂದು ಎಚ್ಚರಿಕೆ ನೀಡಿದ ಟಿಎಂಸಿ ಶಾಸಕ!
ಭೂಗತ ಪಾತಕಿ ಛೋಟಾ ರಾಜನ್ ಏಮ್ಸ್​​ ಆಸ್ಪತ್ರೆಗೆ ದಾಖಲು


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × three =
Remember me
