ನವದೆಹಲಿ:ಯುವಕನೊಬ್ಬ 10 ವರ್ಷದ ಮಗುವನ್ನು ಕೊಂದು, ಮೃತ ದೇಹದ ಮೇಲೆ ವಿಕೃತಿ ಮೆರೆದಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಕೊಲೆ ನಡೆದು ಒಂದು ತಿಂಗಳ ನಂತರ ಆರೋಪಿ ಸಿಕ್ಕಿಬಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಮಹಿಳೆಯೊಬ್ಬಳು ತನ್ನ 10 ವರ್ಷದ ಮಗ ಶಿವಂ ಕಾಣೆಯಾಗಿದ್ದಾಗಿ ನವೆಂಬರ್​ 28ರಂದು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಳು. ಹತ್ತಿರದ ಅಂಗಡಿಗೆ ಏನೋ ಸಾಮಾನು ತರಲು ಹೋದ ಮಗ ವಾಪಾಸು ಮನೆಗೆ ಬಂದಿಲ್ಲ. ಸಂಬಂಧಿಕರು, ಸ್ನೇಹಿತರು ಯಾರ ಮನೆಯಲ್ಲೂ ಆತನಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿಗಳ ದೃಶ್ಯ ಪರಿಶೀಲಿಸಿದ್ದಾರೆ. ಆದರೆ ಎಲ್ಲಿಯೂ ಶಿವಂ ಕಾಣಿಸಿಕೊಂಡಿಲ್ಲ.
ಇದನ್ನೂ ಓದಿ:ಕಾಂಗ್ರೆಸ್ ನಾಯಕತ್ವ ಎಡಪಂಥೀಯರ ಕೈ ಸೇರಿದೆ – ಪ್ರಿಯಾಂಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿರಿಯ ಕಾಂಗ್ರೆಸ್ಸಿಗ ಮಾಡಿದ್ದೇನು?
ಮಹಿಳೆಗೆ ಗಂಡನೊಂದಿಗೆ ಜಗಳವಾಗಿದ್ದು, ಕೆಲ ವರ್ಷಗಳ ಹಿಂದೆಯೇ ಆಕೆ ಗಂಡನಿಂದ ದೂರಾಗಿದ್ದಾಳೆ. ತಾಯಿಯ ಬಳಿ ಇರುವ ಮಗನನ್ನು ಆಗಾಗ ತಂದೆಯೂ ಕರೆದುಕೊಂಡು ಹೋಗುತ್ತಿರುತ್ತಾನೆ ಎನ್ನುವ ವಿಚಾರ ತಿಳಿದ ಪೊಲೀಸರು, ಆತನ ತಂದೆಯ ವಿಚಾರಣೆಯನ್ನೂ ಮಾಡಿದ್ದಾರೆ. ಆದರೆ ಅದರಿಂದಲೂ ಯಾವುದೇ ಸುಳಿವು ಸಿಕ್ಕಿಲ್ಲ.
ಡಿಸೆಂಬರ್ 24ರಂದು ಕೊಳೆತ ದೇಹವೊಂದು ಸಿಕ್ಕಿದ್ದು, ಆಗ ಪ್ರಕರಣಕ್ಕೆ ಹೊಸದೊಂದು ದಿಕ್ಕು ಸಿಕ್ಕಿದೆ. ಪರಿಶೀಲನೆ ನಡೆಸಿದಾಗ ಈಗ ಪತ್ತೆಯಾಗಿರುವ ದೇಹವು ಕಾಣೆಯಾಗಿದ್ದ ಶಿವಂನದ್ದೇ ಎನ್ನುವುದು ದೃಢವಾಗಿದೆ. ನಂತರ ಬೇರೆಯದ್ದೇ ದೃಷ್ಟಿ ಕೋನದಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಬಿಟ್ಟು ಹೆಸರಿನ ಯುವಕನನ್ನು ಬಂಧಿಸಿದ್ದಾರೆ. ಈತ ಮಹಿಳೆಯೊಂದಿಗೆ ಶಿವಂನನ್ನು ಹುಡುಕಲು ಓಡಾಡುತ್ತಿದ್ದರೂ, ಆತನನ್ನೇ ಶಂಕಿಸಿದ ಪೊಲೀಸರು, ಆತನನ್ನು ಪೊಲೀಸ್​ ಠಾಣೆಗೆ ಕರೆತಂದು ವಿಚಾರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲೂ ಕನ್ನಡಿಗ ಕೆಎಲ್ ರಾಹುಲ್‌ಗೆ ಸ್ಥಾನವಿಲ್ಲ; ಅಭಿಮಾನಿಗಳ ಆಕ್ರೋಶ
ಬಿಟ್ಟು, ಶಿವಂನ ತಾಯಿಯನ್ನು ಬಾಲ್ಯದಿಂದಲೇ ಪ್ರೀತಿಸುತ್ತಿದ್ದ. ಈ ವಿಚಾರವನ್ನು ಆಕೆಗೂ ಹೇಳಿದ್ದು, ಮನೆಯಲ್ಲಿ ಮದುವೆ ಮಾಡಿಕೊಡಿ ಎಂದು ಕೇಳಿಕೊಂಡಿದ್ದ. ಆದರೆ ಕುಟುಂಬ ಮದುವೆಗೆ ನಿರಾಕರಿಸಿದ್ದು, ಬೇರೊಬ್ಬನೊಂದಿಗೆ ಮಹಿಳೆಗೆ ಮದುವೆ ಮಾಡಲಾಗಿತ್ತು. ಅದಾದ ನಂತರ ಮಹಿಳೆಯಿಂದ ದೂರಾಗಿದ್ದ ಬಿಟ್ಟು, ಮಹಿಳೆ ಗಂಡನಿಂದ ದೂರಾದ ನಂತರ ಮತ್ತೆ ಹತ್ತಿರವಾಗಿದ್ದಾನೆ. ಶಿವಂ ಜತೆಯೂ ಸ್ನೇಹ ಬೆಳೆಸಿಕೊಂಡಿದ್ದಾನೆ. ಈಗಲಾದರೂ ಮದುವೆಯಾಗೋಣವೇ ಎಂದು ಮಹಿಳೆಯನ್ನು ಕೇಳಿದ್ದಾನೆ. ಅದಕ್ಕೆ ಮಹಿಳೆ ಒಪ್ಪಿಗೆ ನೀಡಿಲ್ಲ. ಮಗ ಇರುವುದರಿಂದಲೇ ಆಕೆ ಮದುವೆಗೆ ಒಪ್ಪುತ್ತಿಲ್ಲ ಎಂದು ತಿಳಿದ ಬಿಟ್ಟು, ಆತನನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ. ಒಂದಿಷ್ಟು ಟಿವಿ ಶೋಗಳನ್ನು ನೋಡಿ, ಕಿಡ್ನಾಪ್​ ಮಾಡಿ ಕೊಲೆ ಮಾಡುವ ಯೋಜನೆ ಹಾಕಿಕೊಂಡಿದ್ದಾನೆ.
ಇದನ್ನೂ ಓದಿ:ದೇಶದ ಮೊದಲ ಶಿಕ್ಷಣ ಸಚಿವರಿಗೆ ಭಾರತ, ಭಾರತೀಯತೆ ಕಲ್ಪನೆಯೇ ಇರಲಿಲ್ಲ! : ಉ.ಪ್ರದೇಶ ಶಿಕ್ಷಣ ಸಚಿವರ ಹೇಳಿಕೆ
ನವೆಂಬರ್​ 28ರಂದು ಸಂಜೆ 4 ಗಂಟೆಯ ಹೊತ್ತಿಗೆ ಶಿವಂ ಮನೆಯಿಂದ ಹೊರಬರುವುದನ್ನು ನೋಡಿದ ಬಿಟ್ಟು, ಅವನನ್ನು ಕರೆದು ಏನಾದರೂ ತಿನ್ನೋಣ ಬಾ ಎಂದು ಕರೆದುಕೊಂಡು ಹೋಗಿದ್ದಾನೆ. ಕಾಡೊಂದಕ್ಕೆ ಕರೆದುಕೊಂಡು ಹೋಗಿ ಶಿವಂನ ಗಂಟಲು ಒತ್ತಿ ಕೊಲೆ ಮಾಡಿದ್ದಾನೆ. ನಂತರ ಅಲ್ಲೇ ಇದ್ದ ಕೆಸರು ತುಂಬಿದ್ದ ಕೊಳವೊಂದರಲ್ಲಿ ಆತನನ್ನು ಹೂತಿಟ್ಟು ಮನೆಗೆ ವಾಪಾಸಾಗಿದ್ದಾನೆ. ಮಹಿಳೆಯೊಂದಿಗೆ ಪೊಲೀಸ್​ ದೂರನ್ನೂ ದಾಖಲಿಸಿದ್ದಾನೆ. ಮಾರನೇ ದಿನ ಮತ್ತೆ ಕಾಡಿಗೆ ಹೋದ ಬಿಟ್ಟುವಿಗೆ ಶಿವಂನ ಮೃತದೇಹ ಕೆಸರಿನಿಂದ ಮೇಲೆ ಬಂದಿರುವುದು ಕಂಡಿದೆ. ತಕ್ಷಣ ಹತ್ತಿರದ ಪೆಟ್ರೋಲ್​ ಬಂಕ್​ಗೆ ತೆರಳಿ 50 ರೂಪಾಯಿಯ ಪೆಟ್ರೋಲ್​ ಖರೀದಿಸಿ ತಂದಿದ್ದಾನೆ. ಶಿವಂನ ದೇಹವನ್ನು ಹೊರತಗೆದು, ಅದಕ್ಕೆ ಪೆಟ್ರೋಲ್​ ಸುರಿದು ಸುಡಲು ಪ್ರಯತ್ನಿಸಿದ್ದಾನೆ. ಆದರೆ ಕೆಸರಿನಿಂದ ಒದ್ದೆಯಾಗಿದ್ದ ದೇಹ ಸುಟ್ಟಿಲ್ಲ. ಅದಾದ ನಂತರ ಮೃತದೇಹವನ್ನು ಅಲ್ಲಿದ್ದ ಕಲ್ಲುಗಳ ಅಡಿಗೆ ಹಾಕಿ ವಾಪಾಸಾಗಿದ್ದಾನೆ. ಅದರ ಮರುದಿನ ಮತ್ತೆ ಕಾಡಿಗೆ ಹೋದ ಬಿಟ್ಟು, ಶಿವಂನ ದೇಹವನ್ನು ಕಲ್ಲುಗಳಿಂದ ಹೊರಗೆ ತೆಗೆದಿದ್ದಾನೆ. ದೇಹದ ಮೈ ಮೇಲಿದ್ದ ಬಟ್ಟೆಯನ್ನೆಲ್ಲ ತೆಗೆದು, ಒಂದು ಪ್ಲಾಸ್ಟಿಕ್​ ಚೀಲದಲ್ಲಿ ದೇಹವನ್ನು ತುಂಬಿ, ಕೆಸರಿನ ಕೊಳಕ್ಕೆ ವಾಪಾಸು ಒಗೆದು ಬಂದಿದ್ದಾನೆ. ಪೊಲೀಸರು ವಿಚಾರಿಸುವಾಗ ಈ ಎಲ್ಲ ವಿಚಾರವನ್ನು ಹೇಳಿ ತಪ್ಪೊಪ್ಪಿಕೊಂಡಿದ್ದಾನೆ. (ಏಜೆನ್ಸೀಸ್​)
ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ಕರೆ ಮಾಡಿ ಕೈಕೊಟ್ಟ ವಧು: ಚಿಂತಿಸದ ವರನಿಂದ ಒಳ್ಳೆಯ ನಿರ್ಧಾರ!

ಮಗಳ ಪಾಲಿಗೆ ತಂದೆಯೇ ವಿಲನ್: ಡೈರಿಯಲ್ಲಿ ಅಪ್ಪನ ಪೈಶಾಚಿಕ ಕೃತ್ಯದ ಇಂಚಿಂಚೂ ಮಾಹಿತಿ ಬರೆದಿಟ್ಟ ಪುತ್ರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − five =
Remember me
