ಕೋಲ್ಕತ್ತಾ:ಸಂಸತ್ತಿನ ಭದ್ರತಾ ಉಲ್ಲಂಘನೆಯಲ್ಲಿ ಪ್ರಮುಖ ಆರೋಪಿ ಹಾಗೂ ಮಾಸ್ಟರ್​ ಮೈಂಡ್​ ಆದ ಲಲಿತ್​ ಝಾ ಮೇಲೆ ಇದೀಗ ದೆಹಲಿ ಪೊಲೀಸರ ವಿಶೇಷ ತಂಡ ಹದ್ದಿನ ಕಣ್ಣಿಟ್ಟಿದ್ದು, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಲಲಿತ್ ಉಳಿದುಕೊಂಡಿದ್ದ ಕೋಲ್ಕತ್ತಾ ಅಪಾರ್ಟ್‌ಮೆಂಟ್​ಗೆ ಎಂಟ್ರಿ ಕೊಟ್ಟ ಪೊಲೀಸರು, ಆತನ ಬಗ್ಗೆ ಸುತ್ತಮುತ್ತಲಿನ ಜನರನ್ನು ವಿಚಾರಿಸಿದ್ದಾರೆ.
ಇದನ್ನೂ ಓದಿ:‘ಕೆಡಿ’ಗೆ ಖಡಕ್ ಜೋಡಿ ; ಧ್ರುವ ಸರ್ಜಾಗೆ ರಾಮ – ಲಕ್ಷ್ಮಣರ ಸಾಹಸ ನಿರ್ದೇಶನ
ಹೆಚ್ಚಿನ ತನಿಖೆಯ ವಿವರಗಳ ಹಿನ್ನೆಲೆ ದೆಹಲಿ ಪೊಲೀಸರ ವಿಶೇಷ ತಂಡವು ಇಕೋ ಪಾರ್ಕ್ ಪೊಲೀಸ್ ಠಾಣೆ ಮತ್ತು ಸೆಂಟ್ರಲ್ ಕೋಲ್ಕತ್ತಾದ ಬಿಎಸ್‌ಎನ್‌ಎಲ್ ಕಚೇರಿಗೆ ಭೇಟಿ ನೀಡಿದ್ದು, ಲಲಿತ್ ಬಳಸಿದ ಸಿಮ್ ಕಾರ್ಡ್ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದೆ.
ಲಲಿತ್ ಝಾ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ಬಳಸುತ್ತಿದ್ದ ಎಂಬುದನ್ನು ಅರಿತ ಪೊಲೀಸರು, ಆತ ಯಾರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ಪರಿಶೀಲಿಸಲು ಮತ್ತು ಭದ್ರತಾ ಉಲ್ಲಂಘನೆಯ ಘಟನೆಯಲ್ಲಿ ಲಲಿತ್​ನನ್ನು ಹೊರತುಪಡಿಸಿ ಇನ್ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ತಿಳಿಯಲು ಸಿಮ್ ಕಾರ್ಡ್ ಪುನರಾವರ್ತಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ:ಮಕ್ಕಳಿಗೆ ಸೂರು ಸಮಸ್ಯೆ ನೂರಾರು: ವಸತಿ ಶಾಲೆ, ಹಾಸ್ಟೆಲ್​ಗಳ ವಸ್ತುಸ್ಥಿತಿ ಅನಾವರಣ
ವರದಿಗಳ ಪ್ರಕಾರ, ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯ ಮೂರು ದಿನಗಳ ಮೊದಲು ಲಲಿತ್ ತನ್ನ ಬಾಗುಯಾಟಿ ಅಪಾರ್ಟ್‌ಮೆಂಟ್ ಅನ್ನು ತನ್ನ ಪೋಷಕರೊಂದಿಗೆ ತೊರೆದು, ಬಳಿಕ ಬಿಹಾರದಲ್ಲಿರುವ ತಮ್ಮ ಸ್ಥಳೀಯ ಮನೆಗೆ ಹೋಗುತ್ತಿರುವುದಾಗಿ ನೆರೆಹೊರೆಯವರಿಗೆ ತಿಳಿಸಿದ್ದಾನೆ,(ಏಜೆನ್ಸೀಸ್).
ನಿರಂತರ ಮಳೆಗೆ ತತ್ತರಿಸಿದ ತಮಿಳುನಾಡು! ಕೇಂದ್ರಕ್ಕೆ 12,000 ಕೋಟಿ ರೂ. ನೆರವು ಕೋರಿದ ಸಿಎಂ ಸ್ಟಾಲಿನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 2 =
Remember me
