ನವದೆಹಲಿ:ಕಾಣೆಯಾದ 76 ಮಕ್ಕಳನ್ನು ಪತ್ತೆ ಹೆಚ್ಚಿ ಪೋಷಕರ ಮಡಿಲು ಸೇರಿಸಿದ ದೆಹಲಿ ಪೊಲೀಸ್ ಇಲಾಖೆಯ ಹೆಡ್​ಕಾನ್​ಸ್ಟೇಬಲ್ ಸೀಮಾ ಢಾಕಾಗೆ ವಿಶೇಷ ಪದೋನ್ನತಿ ನೀಡಲಾಗಿದೆ. ಈಗ ಅವರು ಸಹಾಯಕ ಸಬ್​ಇನ್​ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ.
ಹಿರಿತನ ಇನ್ನಿತರ ನಿಯಮಗಳನ್ನು ಮೀರಿ (ಔಟ್ ಆಫ್ ಟರ್ನ್) ಬಡ್ತಿ ನೀಡಿರುವುದು ಇದೇ ಮೊದಲ ಸಲವಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಸೀಮಾ ಪತ್ತೆ ಹೆಚ್ಚಿದ 76 ಮಕ್ಕಳಲ್ಲಿ 56 ಮಕ್ಕಳು 14 ವರ್ಷಕ್ಕಿಂತ ಕೆಳಗಿನ ವಯಸ್ಸಿನವರು ಎನ್ನುವುದು ಗಮನಾರ್ಹ. ಕೇವಲ ಮೂರು ತಿಂಗಳ ಅವಧಿಯಲ್ಲಿ ಸೀಮಾ 76 ಮಕ್ಕಳನ್ನು ಪತ್ತೆ ಹಚ್ಚಿ್ಚ್ದರು. ವಿಶೇಷ ಉತ್ತೇಜನ ಕಾರ್ಯಕ್ರಮದನ್ವಯ ಅವರಿಗೆ ಅವಧಿಗೂ ಮುನ್ನ ಬಡ್ತಿ ನೀಡಿ ಪ್ರೋತ್ಸಾಹಿಸಲಾಗಿದೆ. ಸೀಮಾ, ದೆಹಲಿಯ ಸಮಯಪುರ ಬದ್ಲಿ ಪೊಲೀಸ್ ಠಾಣೆಯಲ್ಲಿ ಹೆಡ್​ಕಾನ್​ಸ್ಟೇಬಲ್ ಆಗಿದ್ದರು. ಉತ್ತರ ಪ್ರದೇಶದ ಶಾಮ್ಲಿ ಎಂಬ ಊರಿನವರಾದ ಅವರು ರೈತ ಕುಟುಂಬದವರು. ಅವರಿಗೆ ಎಂಟು ವರ್ಷದ ಮಗನಿದ್ದಾನೆ.
ಇದನ್ನೂ ಓದಿ:ಮುಸ್ಲಿಂ ಯುವತಿಯನ್ನು ಮದುವೆಯಾಗಲು ಬಯಸಿದ ಹಿಂದೂವಿನ ಬರ್ಬರ ಹತ್ಯೆ
‘ನನ್ನ ಪ್ರಯತ್ನಗಳಿಗೆ ಮಾನ್ಯತೆ ಸಿಕ್ಕಿರುವದಕ್ಕೆ ಖುಷಿಯಾಗಿದೆ. ಇದು ನನಗೆ ಇನ್ನಷ್ಟು ಸ್ಪೂರ್ತಿ ನೀಡುತ್ತದೆ. ಇತರರಿಗೂ ಪ್ರೋತ್ಸಾಹಕವಾಗವಾಗಬಹುದು. ಕರೊನಾ ಸಾಂಕ್ರಾಮಿಕತೆಯ ಹಾವಳಿ ಅವಧಿಯಲ್ಲೇ ನಾನು ಇಷ್ಟೆಲ್ಲ ಮಕ್ಕಳನ್ನು ಪತ್ತೆ ಮಾಡಿದ್ದೆ’ ಎಂದು ಸೀಮಾ ಹೇಳಿದ್ದಾರೆ. ನಾನು ಪತ್ತೆ ಮಾಡಿದ ಮಕ್ಕಳು ಪೋಷಕರೊಂದಿಗೆ ಸೇರಿಕೊಂಡಾಗ ಅತೀವ ಸಂತೋಷವಾಗುತ್ತಿತ್ತು. ಪೋಷಕರು ನನ್ನನ್ನು ಆಶೀರ್ವದಿಸುತ್ತಿದ್ದರು ಎಂದಿದ್ದಾರೆ.
ಇಂಡೋ-ಮ್ಯಾನ್ಮಾರ್ ಗಡಿ ದಾಟಿತ್ತು 66.4 ಕಿಲೋ ತೂಕದ 400 ಚಿನ್ನದ ಗಟ್ಟಿಗಳು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
