ನವದೆಹಲಿ:ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ 54 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ರಾತ್ರಿ ಬಿಡುಗಡೆ ಮಾಡಿದೆ.
ರಾಷ್ಟ್ರ ರಾಜಧಾನಿಯು ಒಟ್ಟು 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಮೊದಲ ಭಾಗವಾಗಿ ಕಾಂಗ್ರೆಸ್​ 54 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಆಮ್​ ಆದ್ಮಿ ಪಕ್ಷದಿಂದ ಟಿಕೆಟ್​ ದೊರೆಯದೇ ಕಾಂಗ್ರೆಸ್​ ಸೇರಿರುವ ದ್ವಾರಕ ಕ್ಷೇತ್ರದ ಶಾಸಕ ಆದರ್ಶ್​ ಶಾಸ್ತ್ರಿಯನ್ನು ಕಾಂಗ್ರೆಸ್​ ಚುನಾವಣಾ ಕಣಕ್ಕಿಳಿಸಿದೆ. ದ್ವಾರಕ ಕ್ಷೇತ್ರದಲ್ಲಿ ಶಾಸ್ತ್ರಿಗೆ ಪ್ರತಿಸ್ಪರ್ಧಿಯಾಗಿ ಆಪ್​ನ ವಿನಯ್​ ಮಿಶ್ರ ಸ್ಪರ್ಧಿಸಿದ್ದಾರೆ.
ಆಪ್​ ಮಾಜಿ ನಾಯಕ ಅಲ್ಕ ಲಂಬಾರಿಗೂ ಕಾಂಗ್ರೆಸ್​ ಟಿಕೆಟ್​ ನೀಡಿದ್ದು, ಚಾಂದನಿ ಚೌಕ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇದನ್ನು ಹೊರತುಪಡಿಸಿ, ಅರವಿಂದರ್​ ಸಿಂಗ್​ ಲವ್ಲಿ ಗಾಂಧಿನಗರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಆದರ್ಶ್​ ಶಾಸ್ತ್ರಿ ಅವರು ದೆಹಲಿಯ ಕಾಂಗ್ರೆಸ್​ ಘಟಕದಲ್ಲಿ ರಾಜ್ಯಾಧ್ಯಕ್ಷ ಸುಭಾಷ್​ ಚೋಪ್ರಾ ಹಾಗೂ ಎಐಸಿಸಿ ಉಸ್ತುವಾರಿ ಪಿ.ಸಿ. ಛಕೂ ಸಮ್ಮುಖದಲ್ಲಿ ಶನಿವಾರ ಕಾಂಗ್ರೆಸ್​ ಸೇರ್ಪಡೆಯಾಗಿದರು. ಮಾಜಿ ಪ್ರಧಾನಿ ಲಾಲ್​ ಬಹದ್ದೂರ್​ ಶಾಸ್ತ್ರಿ ಅವರ ಮೊಮ್ಮಗನಾಗಿರುವ ಆದರ್ಶ್​ ಶಾಸ್ತ್ರಿ ಆಮ್​ ಆದ್ಮಿ ಪಕ್ಷದಲ್ಲಿ ರಾಷ್ಟ್ರೀಯ ವಕ್ತಾರ ಮತ್ತು ಸಾಗರೋತ್ತರ ವ್ಯವಹಾರಗಳ ಸಹ-ಸಂಚಾಲಕರಾಗಿದ್ದರು.
ಫೆ.8 ರಂದು ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು, 11ರಂದು ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್​)
दिल्ली विधानसभा चुनाव के उम्मीदवारों की सूची।सभी उम्मीदवारों को हार्दिक बधाई व शुभकामनाएं।आप सब पूरी मेहनत के साथ दिल्ली मे काँग्रेस का परचम लहराएंगे ऐसी हम कामना करते हैं।आइए मिलकर बनाएं कांग्रेस वाली दिल्ली।pic.twitter.com/TXeRMZLaXt— Delhi Congress (@INCDelhi)January 18, 2020
दिल्ली विधानसभा चुनाव के उम्मीदवारों की सूची।सभी उम्मीदवारों को हार्दिक बधाई व शुभकामनाएं।आप सब पूरी मेहनत के साथ दिल्ली मे काँग्रेस का परचम लहराएंगे ऐसी हम कामना करते हैं।आइए मिलकर बनाएं कांग्रेस वाली दिल्ली।pic.twitter.com/TXeRMZLaXt
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − four =
Remember me
