ನವದೆಹಲಿ :ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಈ ವರ್ಷದ ಅತಿಹೆಚ್ಚು ಏಕದಿನ ಪ್ರಕರಣ ಸಂಖ್ಯೆಯಾಗಿ ಒಟ್ಟು 1,515 ಪ್ರಕರಣಗಳು ಗುರುವಾರ (ಮಾರ್ಚ್ 25) ದಾಖಲಾಗಿದ್ದು, 5 ಕರೊನಾ ಸಂಬಂಧಿತ ಸಾವುಗಳು ಸಂಭವಿಸಿವೆ.
ಒಂದು ದಿನ ಹಿಂದೆ ಅಂದರೆ ಮಾರ್ಚ್ 24 ರ ಬುಧವಾರ 1,254 ಪ್ರಕರಣಗಳು ವರದಿಯಾಗಿದ್ದವು. ಇದೀಗ ಈ ಸಂಖ್ಯೆ ಮತ್ತೂ ಹೆಚ್ಚಾಗಿದ್ದು, ಈ ಹೊಸ ಪ್ರಕರಣಗಳೊಂದಿಗೆ ದೆಹಲಿಯಲ್ಲಿ ಆ್ಯಕ್ಟೀವ್ ಆಗಿರುವ ಕರೊನಾ ಪ್ರಕರಣಗಳ ಸಂಖ್ಯೆ 5,497 ತಲುಪಿದೆ.
ಇದನ್ನೂ ಓದಿ:ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !
ಈ ಪೈಕಿ, 69 ಪ್ರಕರಣಗಳು ರೂಪಾಂತರಿ ಕರೊನಾ ವೈರಸ್​ ಪ್ರಕರಣಗಳಾಗಿವೆ. ಅವುಗಳಲ್ಲಿ 65 ಪ್ರಕರಣಗಳಲ್ಲಿ ಇಂಗ್ಲೆಂಡ್​ ರೂಪಾಂತರಿ ವೈರಸ್ ಕಂಡುಬಂದಿದ್ದು, ಉಳಿದ 4 ಪ್ರಕರಣಗಳು ದಕ್ಷಿಣ ಆಫ್ರಿಕಾದ ವೈರಸ್ ರೂಪಾಂತರಿಯದ್ದಾಗಿದೆ. ಆದಾಗ್ಯೂ ಪ್ರಕರಣಗಳ ಹೆಚ್ಚಳಕ್ಕೆ ಮತ್ತು ಈ ರೂಪಾಂತರಿ ವೈರಸ್​ಗಳಿಗೆ ನೇರ ಸಂಬಂಧವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.(ಏಜೆನ್ಸೀಸ್)
ತೆರೆಯ ಮೇಲೆ ಬ್ಯಾಡ್ಮಿಂಟನ್ ಲೋಕ ತೋರಿಸುವ ‘ಸೈನಾ’
ಪ್ರೇಮ ನಿವೇದನೆಗೆ ಹೀಗೊಂದು ‘ಮಾರ್ಗ’! ರಸ್ತೆ ಮೇಲೆ ‘ಐ ಲವ್ ಯು’!
ಉಚಿತ ಅಯೋಧ್ಯಾ ಪ್ರವಾಸದ ಆಶ್ವಾಸನೆ ಕೊಟ್ಟ ಅಭ್ಯರ್ಥಿಗೆ ನೋಟೀಸ್ !



ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + 10 =
Remember me
