ನವದೆಹಲಿ:ದೆಹಲಿ ಹಿಂಸಾಚಾರ ಹಾಗೂ ಗುಪ್ತಚರ ದಳದ ಅಧಿಕಾರಿ ಅಂಕಿತ್​ ಶರ್ಮಾ ಹತ್ಯೆಯಲ್ಲಿ ತನ್ನ ಹೆಸರು ಕೇಳಿಬರುತ್ತಲೇ ಪರಾರಿಯಾಗಿದ್ದ ಆಪ್​ ಉಚ್ಚಾಟಿತ ಕೌನ್ಸಿಲರ್​ ತಾಹೀರ್​ ಹುಸೇನ್​ ಇಂದು ಕೋರ್ಟ್​ಗೆ ಆಗಮಿಸಿದ್ದ.ತಾನು ದೆಹಲಿ ನ್ಯಾಯಾಲಯದ ಎದುರು ಶರಣಾಗುವುದಾಗಿ ತಿಳಿಸಿ, ಅರ್ಜಿ ಸಲ್ಲಿಸಿದ್ದ. ಆದರೆ ಆ ಅರ್ಜಿಯನ್ನು ನ್ಯಾಯಾಲಯ ತಿರಸ್ಕಾರ ಮಾಡಿದ್ದರಿಂದ ದೆಹಲಿ ಪೊಲೀಸರು ತಾಹೀರ್​ನನ್ನು ಬಂಧಿಸಿದ್ದಾರೆ.
ಈಶಾನ್ಯ ದೆಹಲಿ ಹಿಂಸಾಚಾರ ಸಂದರ್ಭದಲ್ಲಿ ತಾಹೀರ್​ ಹುಸೇನ್​ ಮನೆಯ ಟೆರೇಸ್ ಮೇಲೆ ಪೆಟ್ರೋಲ್​ ಬಾಂಗ್​ಗಳು, ಕಲ್ಲು, ಮಾರಕ ಅಸ್ತ್ರಗಳು ಪತ್ತೆಯಾಗಿದ್ದವು. ದೆಹಲಿ ಹಿಂಸಾಚಾರದಲ್ಲಿ ಆತನ ಕೈವಾಡವಿದೆ ಎಂದು ಬಲವಾದ ಆರೋಪ ಕೇಳಿಬಂದಿತ್ತು. ಗುಪ್ತಚರ ದಳದ ಅಧಿಕಾರಿ ಅಂಕಿತ್​ ಶರ್ಮಾ ಹತ್ಯೆಗೆ ತಾಹೀರ್​ ಕಾರಣ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದರು. ಆದರೆ ತಾಹೀರ್ ನಾಪತ್ತೆಯಾಗಿದ್ದ.
ತಾನು ಶರಣಾಗುತ್ತೇನೆ ಎಂದು ಹೇಳಿ ದೆಹಲಿ ಕೋರ್ಟ್​ ಬಳಿ ಬಂದಿದ್ದ. ಆದರೆ ಆತನ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಇದು ತಮ್ಮ ನ್ಯಾಯ ನಿರ್ಣಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದರಿಂದ ತಾಹೀರ್​ನನ್ನು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
