ನವದೆಹಲಿ: ಈಶಾನ್ಯ ದೆಹಲಿ ಹಿಂಸಾಚಾರ ಪ್ರಕರಣ ಸಂಬಂಧ ಜವಾಹರಲಾಲ್ ನೆಹರು ಯೂನಿವರ್ಸಿಟಿಯ ಸ್ಟೂಡೆಂಟ್ ಯೂನಿಯನ್​ ನ ಮಾಜಿ ಸದಸ್ಯ, ಕ್ಯಾಂಪಸ್​ನಲ್ಲೇ ದೇಶ ವಿರೋಧಿ ಘೋಷಣೆ ಕೂಗಿದ್ದ ಉಮರ್ ಖಾಲಿದ್​​ನನ್ನು ನಿನ್ನೆ ರಾತ್ರಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಈಶಾನ್ಯ ದೆಹಲಿಯಲ್ಲಿ ಸಿಎಎ/ಎನ್​ಆರ್​ಸಿ ವಿರೋಧಿ ಪ್ರತಿಭಟನೆ ಸಂದರ್ಭ ಭುಗಿಲೆದ್ದ ಹಿಂಸಾಚಾರ 72 ಗಂಟೆ ಕಾಲ ನಡೆದು, 53 ಜನ ಪ್ರಾಣ ಕಳೆದುಕೊಂಡಿದ್ದರಲ್ಲದೆ, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಹಿಂಸಾಚಾರ ಪ್ರಕರಣದ ಪಿತೂರಿಯಲ್ಲಿ ಉಮರ್ ಖಾಲಿದ್ ಪಾತ್ರವಿದೆ ಎಂಬುದಕ್ಕೆ ಸಾಕ್ಷ್ಯಾಧಾರಗಳು ಸಿಕ್ಕ ಕಾರಣ ಪೊಲೀಸರು ಅನ್​ಲಾಫುಲ್ ಆ್ಯಕ್ಟಿವಿಟೀಸ್​ ಪ್ರಿವೆನ್ಶನ್ ಆ್ಯಕ್ಟ್ (ಯುಎಪಿಎ) ಸೆಕ್ಷನ್ ಪ್ರಕಾರ ನಿನ್ನೆ ರಾತ್ರಿ ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಎಸ್‌ಡಿಆರ್‌ಎಫ್‌ಗೆ ನಿವೃತ್ತ ಸೈನಿಕರು, ಪ್ರಗತಿಯಲ್ಲಿ ನೇಮಕಾತಿ ಪ್ರಕ್ರಿಯೆ
ಗಲಭೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಖಾಲಿದ್ ಗೆ ಸಮನ್ಸ್ ಕಳುಹಿಸಿದ್ದ ದೆಹಲಿ ಪೊಲೀಸ್ ವಿಶೇಷ ಘಟಕ, ಹನ್ನೊಂದು ಗಂಟೆಗಳ ವಿಚಾರಣೆ ಬಳಿಕ, ಗಲಭೆ, ಹಿಂಸಾಚಾರದ ಪಿತೂರಿಯಲ್ಲಿ ಆತ ಪಾಲುದಾರ ಎಂಬುದನ್ನು ಖಚಿತ ಪಡಿಸಿಕೊಂಡು ನಂತರ ಆತನನ್ನು ಬಂಧಿಸಿದೆ. ಗಲಭೆಗೆ ಮುನ್ನ ಖಾಲಿದ್ ಸೈಫಿ ಜತೆಗೆ ಶಾಹೀನ್ ಬಾಘ್​ನಲ್ಲಿ ವೇದಿಕೆ ಹಂಚಿಕೊಂಡಿದ್ದ ಉಮರ್ ಖಾಲಿದ್​ . ದೆಹಲಿ ಪೊಲೀಸರು ಆಗಸ್ಟ್ 1ರಂದು ಖಾಲಿದ್​ನನ್ನು ಆತ ಶಾಹೀನ್​ ಬಾಘ್​ನಲ್ಲಿ ಮಾಡಿದ ಭಾಷಣಗಳ ವಿಚಾರವಾಗಿ ಪ್ರಶ್ನಿಸಿದ್ದರು.
ಇದನ್ನೂ ಓದಿ:ಈಶಾನ್ಯ ದೆಹಲಿ ಹಿಂಸಾಚಾರ ರಾಜಕೀಯ ಪಿತೂರಿ: ಹೇಗೆ? ಏನು? ಹೇಳಿದವರು ಯಾರು?
ಯುನೈಟೆಡ್ ಅಗೇನಿಸ್ಟ್ ಹೇಟ್ ಎಂಬ ಸಂಘಟನೆಯ ಸಹ ಸಂಸ್ಥಾಪಕ ಖಾಲಿದ್ ಸೈಫಿ. ಈ ಸಂಘಟನೆಯಲ್ಲಿ ಉಮರ್ ಖಾಲಿದ್ ಕೂಡ ಸದಸ್ಯ. ಸೈಫಿಯನ್ನು ಪೊಲೀಸರು ಜೂನ್​ ತಿಂಗಳಲ್ಲೇ ಬಂಧಿಸಿದ್ದರು. ಉಮರ್ ಖಾಲಿದ್ ಮತ್ತು ಅಮಾನತುಗೊಂಡಿರುವ ಎಎಪಿ ಕೌನ್ಸಿಲರ್ ತಾಹಿರ್ ಹುಸೇನ್ ನಡುವೆ ಮೀಟಿಂಗ್ ಅರೇಂಜ್ ಮಾಡುವಲ್ಲಿ ಸೈಫಿ ಪ್ರಮುಖ ಪಾತ್ರವಹಿಸಿದ್ದ. ತಾಹಿರ್ ಹುಸೇನ್ ಕೂಡ ಬಂಧನದಲ್ಲಿದ್ದಾನೆ. (ಏಜೆನ್ಸೀಸ್)
ಮೋದಿ 70ನೇ ಜನ್ಮದಿನಕ್ಕೆ ಬಿಜೆಪಿ ಸೇವಾ ಸಪ್ತಾಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
