ನವದೆಹಲಿ:ಕೆಲವು ದಿನಗಳಿಂದ ನಾಪತ್ತೆಯಾಗಿದ್ದ 28 ವರ್ಷದ ಬಿಜೆಪಿ ಕಾರ್ಯಕರ್ತೆ ವರ್ಷಾ ಪವಾರ್​, ಉತ್ತರ ದೆಹಲಿಯ ನರೇಲಾ ಏರಿಯಾದಲ್ಲಿರುವ ಶಾಲೆಯ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ವರ್ಷಾ ಶವ ಇರುವ ಬಗ್ಗೆ ಮಾಹಿತಿ ಪಡೆದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್​ ತಂಡ ಪರಿಶೀಲನೆ ನಡೆಸಿ, ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರ ಹೇಳಿಕೆಗಳನ್ನು ಪಡೆದ ತನಿಖೆಯನ್ನು ಆರಂಭಿಸಿದೆ.
ಮೂಲಗಳ ಪ್ರಕಾರ ಮೃತ ವರ್ಷಾ, ನರೇಲಾದ ಸ್ವತಂತ್ರ ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಅಲ್ಲದೆ, ಆ ಶಾಲೆಗೆ ಆಕೆಯು ಸಹ ಓನರ್​ ಆಗಿದ್ದಳು. ಆಕೆಯ ಬಿಸಿನೆಸ್​ ಪಾಲುದಾರ ಸೋಹನ್​ಲಾಲ್​, ವರ್ಷಾಳ ಸಾವಿಗೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಆದರೆ, ಸೋಹನ್​ಲಾಲ್​ ಕೂಡ ಸೋನಿಪತ್​ನಲ್ಲಿ ರೈಲಿನ ಮುಂದೆ ಜಿಗಿದು ಸಾವಿಗೆ ಶರಣಾಗಿದ್ದಾನೆ.
ಫೆಬ್ರವರಿ 24ರಿಂದ ವರ್ಷಾ ಕಾಣೆಯಾಗಿದ್ದಳು. ಆಕೆಯನ್ನು ಸಂಪರ್ಕಿಸಲು ಕುಟುಂಬ ವಿಫಲವಾದಾಗ ಕೊನೆಯ ಆಯ್ಕೆ ಎಂಬಂತೆ ತಮ್ಮ ವ್ಯಾಪ್ತಿಯ ಪೊಲೀಸ್​ ಠಾಣೆಯಲ್ಲಿ ವರ್ಷಾ ಪಾಲಕರು ನಾಪತ್ತೆ ದೂರು ದಾಖಲಿಸಿದ್ದರು. ದೂರು ನೀಡಿದ ಕೆಲವು ದಿನಗಳ ಬಳಿಕ ವರ್ಷಾ ಮೃತದೇಹ ಶಾಲೆಯ ಆವರಣದಲ್ಲಿರುವ ಸ್ಟೇಷನರಿ ಶಾಪ್​ ಒಳಗಡೆ ಪತ್ತೆಯಾಗಿದೆ.
दिल्ली के नरेला इलाके में BJP कार्यकर्ता वर्षा पवार की हत्या। अपने ही प्ले स्कूल की स्टेशनरी शॉप के अंदर कल डेडबॉडी मिली है। वर्षा के बिजनेस पार्टनर सोहनलाल ने सोनीपत में ट्रेन के आगे कूदकर जान दी। अफेयर में वारदात का शक है।#Delhipic.twitter.com/BztqLJBOWH
— Sachin Gupta (@SachinGuptaUP)February 29, 2024

ವರ್ಷಾ ಕೆಲಸ ಮಾಡುತ್ತಿದ್ದ ಶಾಲೆಯ ಆವರಣದಲ್ಲಿರುವ ಸ್ಟೇಷನರಿ ಶಾಪ್ ಕಳೆದ ನಾಲ್ಕು ದಿನಗಳಿಂದ ಮುಚ್ಚಿತ್ತು. ಅನುಮಾನಗೊಂಡ ವರ್ಷಾಳ ತಂದೆ ಬುಧವಾರ ಮಧ್ಯಾಹ್ನ ಬಲವಂತವಾಗಿ ಓಪನ್​ ಮಾಡಿಸಿದಾಗ ಆಕೆಯ ಮೃತದೇಹ ಒಳಗಡೆ ಪತ್ತೆಯಾಗಿದೆ. ಆಕೆಯ ಕುತ್ತಿಗೆಯಲ್ಲಿ ಗಾಯದ ಕಲೆ ಇದ್ದು, ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸೋಹನ್​ಲಾಲ್ ಮತ್ತು ವರ್ಷಾ ನಡುವಿನ ಸಂಬಂಧದಲ್ಲಿದ್ದ ಕಲಹವೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.
ದೆಹಲಿ ಪೊಲೀಸರ ಪ್ರಕಾರ ವರ್ಷಾ ಬಿಜೆಪಿ ಕಾರ್ಯಕರ್ತೆಯಾಗಿದ್ದಳು. ತಮ್ಮ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದರೂ ಪೊಲೀಸರು ಆಕೆಯ ಪತ್ತೆಗೆ ಕ್ರಮ ಕೈಗೊಳ್ಳಲಿಲ್ಲ ಎಂದು ಸಂತ್ರಸ್ತೆಯ ಕುಟುಂಬದವರು ದೂರಿದ್ದಾರೆ.(ಏಜೆನ್ಸೀಸ್​)
ಅದನ್ನು ದಪ್ಪ ಮಾಡಿಕೊಳ್ಳಲು ಹೇಳುತ್ತಿದ್ದರು! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

ಈ ಒಂದು ಗಿಫ್ಟ್​ ಕೊಟ್ಟರೆ ನಾನು ನಿಮ್ಮವಳು! ಅಭಿಮಾನಿಗಳಿಗೆ ಬಂಪರ್​ ಆಫರ್​ ಕೊಟ್ಟ ಅನುಪಮಾ

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:19 − 12 =
Remember me
